
ನಟ ಚರಣ್ ರಾಜ್ ಅವರು ಅನೇಕ ವಿಲನ್ ಪಾತ್ರ, ಪೋಷಕ ಪಾತ್ರಗಳನ್ನು ಮಾಡಿ, ಹೀರೋ ಆಗಿ ಗಮನ ಸೆಳೆದಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳ ಜೊತೆ ಅವರು ತೆರೆಹಂಚಿಕೊಂಡಿದ್ದಾರೆ. ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಪರಭಾಷೆಯಲ್ಲೂ ಅವರು ನಟಿಸಿದ್ದಾರೆ. ಅವರು ಸಿನಿಮಾದಲ್ಲಿ ಮಿಂಚುತ್ತಿದ್ದ ಸಂದರ್ಭದಲ್ಲಿ ಬಂದ ಹಣಗಳನ್ನು ಹೂಡಿಕೆ ಮಾಡುತ್ತಿದ್ದರು.
ಇತ್ತೀಚಿಗಿನ ಸೆಲೆಬ್ರಿಟಿಗಳ ಬಗ್ಗೆ ನಾವು ಹೊಸದಾಗಿ ಹೇಳಬೇಕಾಗಿಲ್ಲ. ಸಿನಿಮಾಗಳಿಗೆ ಕೋಟಿ ಕೋಟಿ ಸಂಭಾವನೆ ಪಡೆಯುವ ಅವರು ನಂತರ ಅದನ್ನು ಉದ್ಯಮಗಳಿಗೆ ಹೂಡಿಕೆ ಮಾಡುತ್ತಾರೆ. ಆದರೆ, ಹಿಂದಿನ ಹೀರೋಗಳು ಆ ರೀತಿ ಇರಲಿಲ್ಲ. ಚರಣ್ ರಾಜ್ ಭಿನ್ನ. ಅವರು ಕನಕಪುರ ರಸ್ತೆ, ನಂದಿಬೆಟ್ಟದ ಬಳಿ ಜಾಗ ಹೊಂದಿದ್ದಾರೆ. ಸದಾಶಿವ ನಗರದಲ್ಲಿ ಮನೆ ಹೊಂದಿದ್ದಾರೆ. ಅವರು ಹೂಡಿಕೆ ಬಗ್ಗೆ ಕಲಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
‘ನಂದಿ ಬೆಟ್ಟದ ಬಳಿ 22 ಎಕರೆ ತೆಗೆದುಕೊಂಡಿದ್ದೆ. 1984ರಲ್ಲಿ ಆ ಜಾಗಕ್ಕೆ 54 ಸಾವಿರ ರೂಪಾಯಿ ಕೊಟ್ಟಿದ್ದೆ. ಈಗ ಆ ಜಾಗ ಎಕರೆಗೆ 3-4 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಲೇಔಟ್ ಏನೂ ಮಾಡಿಲ್ಲ. ನಾನು ಆಗ ಸ್ಟುಡಿಯೋ ಮಾಡುವ ಉದ್ದೇಶ ಹೊಂದಿದ್ದೆ’ ಎಂದು ಅವರು ಹೇಳಿದ್ದಾರೆ.
‘ಎಲ್ಲರೂ ಆ ಜಾಗ ವಿಚಾರಿಸುತ್ತಿದ್ದಾರೆ. ಜಾಯಿಂಟ್ ವೆಂಚರ್ಸ್ ಮಾಡೋಣ ಎನ್ನುತ್ತಿದ್ದಾರೆ. ಹೆಣ್ಣು, ಹೊನ್ನು, ಮಣ್ಣು ಸಿಗಬೇಕಾದರೆ ನಿಮಗೆ ಋಣ ಬೇಕು’ ಎಂದು ಚರಣ್ ರಾಜ್ ಹೇಳಿದ್ದಾರೆ. 22 ಎಕರೆಗೆ ಕನಿಷ್ಠ ಮೂರು ಕೋಟಿ ಎಂದರೂ, ಇದರ ಬೆಲೆ 66 ಕೋಟಿ ರೂಪಾಯಿ ಆಗಲಿದೆ.
ಚರಣ್ ರಾಜ್ ಅವರು ವಿವಿಧ ಕಡೆಗಳಲ್ಲಿ ಆಸ್ತಿ ಹೊಂದಿದ್ದಾರೆ. ಅದೆಲ್ಲವೂ ಸೇರಿದರೆ 100 ಕೋಟಿ ರೂಪಾಯಿಗೂ ಅಧಿಕವಾಗಲಿದೆ. ಚರಣ್ ರಾಜ್ ಅವರು ಏರ್ಪೋರ್ಟ್ ಸಮೀಪವೇ ತೋಟದ ಮನೆ ಕೂಡ ಹೊಂದಿದ್ದಾರೆ. ಇದು ಕೂಡ ಕೋಟಿ ಕೋಟಿ ಬೆಲೆ ಬಾಳುತ್ತದೆ. ಅವರು 11 ಭಾಷೆಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಚರಣ್ ರಾಜ್ ತಂದೆ ಸಾಕಷ್ಟು ಭೂಮಿ ಖರೀದಿಸುತ್ತಿದ್ದರು. ಅದೇ ರೀತಿ ಚರಣ್ ರಾಜ್ ಕೂಡ ಭೂಮಿ ಖರೀದಿ ಮಾಡಿದ್ದಾರೆ.
ಇದನ್ನೂ ಓದಿ: ಅಂಬರೀಷ್ ಕಾರಣದಿಂದ ಕಾರು ಖರೀದಿಸಿದ ಚರಣ್ ರಾಜ್; 40 ವರ್ಷವಾದರೂ ಇನ್ನೂ ಇದೆ
ಚರಣ್ ರಾಜ್ ಅವರು ಇತ್ತೀಚೆಗೆ ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರು ಚೆನ್ನೈನಲ್ಲಿ ವಾಸವಿರುತ್ತಾರೆ. ಸಮಯ ಸಿಕ್ಕಾಗ ಅವರು ಬೆಂಗಳೂರಿನ ತೋಟದ ಮನೆಗೆ ಬಂದು ಉಳಿದುಕೊಳ್ಳುತ್ತಾರೆ. ಅವರಿಗೆ ನಗರ ಜೀವನ ಸಾಕಾಗಿದೆ. ಹೀಗಾಗಿ, ತೋಟದ ಮನೆಯಲ್ಲಿ ಇರೋಕೆ ಹೆಚ್ಚು ಆಸಕ್ತಿ ತೋರಿಸುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್