ಟಾಲಿವುಡ್ ವೇದಿಕೆಯಲ್ಲಿ ಧನಂಜಯ್​ನ ಹಾಡಿ ಹೊಗಳಿದ ಚಿರಂಜೀವಿ

ಧನಂಜಯ್ ಅವರು ‘ಜಿಬ್ರ’ ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಈಶ್ವರ್ ಕಾರ್ತಿಕ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. 2020ರಲ್ಲಿ ‘ಪೆಂಗ್ವಿನ್’ ಹೆಸರಿನ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ಅವರು ‘ಜಿಬ್ರ’ ಚಿತ್ರವನ್ನು ಪ್ರೇಕ್ಷಕರ ಎದುರು ಇಡುತ್ತಿದ್ದಾರೆ.

ಟಾಲಿವುಡ್ ವೇದಿಕೆಯಲ್ಲಿ ಧನಂಜಯ್​ನ ಹಾಡಿ ಹೊಗಳಿದ ಚಿರಂಜೀವಿ
ಚಿರಂಜೀವಿ-ಧನಂಜಯ್

Updated on: Nov 13, 2024 | 9:03 AM

ನಟ ಧನಂಜಯ್ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಪುಷ್ಪ’ ಚಿತ್ರದಿಂದ ಅವರಿಗೆ ಟಾಲಿವುಡ್​ನಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಈಗ ಅವರ ನಟನೆಯ ‘ಜಿಬ್ರ’ ಟ್ರೇಲರ್ ಹೈದರಾಬಾದ್​ನಲ್ಲಿ ರಿಲೀಸ್ ಆಗಿದೆ. ಈ ಈವೆಂಟ್​ಗೆ ಚಿರಂಜೀವಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಧನಂಜಯ್ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ‘ಧನಂಜಯ್ ತೆಲುಗಿನಲ್ಲಿ ಅವರು ಸೆಟಲ್​ ಆಗ್ತಾರೆ’ ಎಂದು ಚಿರಂಜೀವಿ ಭವಿಷ್ಯ ನುಡಿದಿದ್ದಾರೆ.

‘ಕನ್ನಡದ ಅದ್ಭುತ ನಟ ಎಂದರೆ ಅದು ಧನಂಜಯ್. ನಾನು ಅವರ ಬಗ್ಗೆ ಕೇಳಿದ್ದೇನೆ, ಆದರೆ ಸಿನಿಮಾ ನೋಡಿಲ್ಲ. ಪುಷ್ಪ ಚಿತ್ರದಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಜಿಬ್ರಾ ಸಿನಿಮಾದಿಂದ ಅವರಿಗೆ ಒಳ್ಳೆಯ ಜನಪ್ರಿಯತೆ ಸಿಗುತ್ತದೆ. ಈ ಸಿನಿಮಾ ಬಳಿಕ ಅವರು ತೆಲುಗಿನಲ್ಲಿ ಸೆಟಲ್ ಆಗುತ್ತಾರೆ ಎಂಬುದಕ್ಕೆ ಯಾವುದೇ ಅನುಮಾನ ಬೇಡ’ ಎಂದು ಚಿರಂಜೀವಿ ಹೇಳಿದ್ದಾರೆ.

ಧನಂಜಯ್ ಅವರಿಗೆ ಟಾಲಿವುಡ್​ ಚಿತ್ರರಂಗದ ಜೊತೆ ಒಳ್ಳೆಯ ನಂಟು ಬೆಳೆದಿದೆ. ಈ ಮೊದಲು ‘ಭೈರವ ಗೀತ’ ಹೆಸರಿನ ತೆಲುಗು ಸಿನಿಮಾ ಮಾಡಿದ್ದರು. ಈ ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ನಿರ್ಮಾಣ ಮಾಡಿದ್ದರು. ‘ಪುಷ್ಪ’ ಚಿತ್ರದಲ್ಲಿ ಜಾಲಿ ರೆಡ್ಡಿ ಆಗಿ ಕಾಣಿಸಿಕೊಂಡಿದ್ದರು. ‘ಪುಷ್ಪ 2’ ಚಿತ್ರದಲ್ಲೂ ಅವರ ಪಾತ್ರ ಮುಂದುವರಿಯಲಿದೆ.

ಈಗ ಧನಂಜಯ್ ಅವರು ‘ಜಿಬ್ರ’ ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಈಶ್ವರ್ ಕಾರ್ತಿಕ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. 2020ರಲ್ಲಿ ‘ಪೆಂಗ್ವಿನ್’ ಹೆಸರಿನ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ಅವರು ‘ಜಿಬ್ರ’ ಚಿತ್ರವನ್ನು ಪ್ರೇಕ್ಷಕರ ಎದುರು ಇಡುತ್ತಿದ್ದಾರೆ.

ಇದನ್ನೂ ಓದಿ: ಡಾಲಿ ಧನಂಜಯ್ ಮದುವೆ ಫಿಕ್ಸ್, ಕಾಲೆಳೆದ ಟ್ರೋಲ್​ಗಳಿಗೆ ದಿಟ್ಟ ಉತ್ತರ ಕೊಟ್ಟ ಅಮೃತಾ

‘ಜಿಬ್ರ’ ಸಿನಿಮಾದಲ್ಲಿ ಧನಂಜಯ್ ಅವರು ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಬ್ಯಾಂಕ್ ಸ್ಕ್ಯಾಮ್ ಬಗ್ಗೆ ಈ ಸಿನಿಮಾದಲ್ಲಿ ಇದೆ. ಧನಂಜಯ್ ಅಲ್ಲದೆ, ಸತ್ಯದೇವ್, ಸತ್ಯರಾಜ್, ಪ್ರಿಯಾ ಭವಾನಿ ಶಂಕರ್, ಅಮೃತಾ ಅಯ್ಯಂಗಾರ್, ಸುನಿಲ್ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us