‘ಕಾಮಿಡಿ ಕಿಲಾಡಿ’ ಅಪ್ಪಣ್ಣ ಮೇಲೆ ಕಿರುಕುಳ ಆರೋಪ; ಸ್ಪಷ್ಟನೆ ನೀಡಿದ ಕಲಾವಿದ

ಕಾಮಿಡಿ ಕಿಲಾಡಿಗಳು ಸೀಸನ್ 2 ರ ಸ್ಪರ್ಧಿಯೊಬ್ಬರು ಮಡೆನೂರು ಮನು ಅವರ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಈಗ ಅದೇ ಸೀಸನ್‌ನಲ್ಲಿದ್ದ ಅಪ್ಪಣ್ಣ ರಾಮದುರ್ಗ ಅವರ ಮೇಲೆ ಸಹ ಆರೋಪ ಹೊರಿಸಿರುವ ಆಡಿಯೋ ವೈರಲ್ ಆಗಿದೆ. ಅಪ್ಪಣ್ಣ ರಾಮದುರ್ಗ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ ಮತ್ತು ಆಡಿಯೋವನ್ನು ಮನು ಒತ್ತಾಯದಿಂದ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮಡೆನೂರು ಮನು (Madenuru Manu) ಅವರ ಮೇಲೆ ‘ಕಾಮಿಡಿ ಕಿಲಾಡಿಗಳು ಸೀಸನ್ 2’ ಮಹಿಳಾ ಸ್ಪರ್ಧಿ ಗಂಭೀರ ಆರೋಪ ಮಾಡಿದ್ದರು. ಅವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ದೂರಿದ್ದರು. ಈ ಬೆನ್ನಲ್ಲೇ ಇದೇ ಸೀಸನ್​ನಲ್ಲಿ ಇದ್ದ ಅಪ್ಪಣ್ಣ ರಾಮದುರ್ಗ ಮೇಲೆ ಅವರು ಆರೋಪ ಮಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರೋ ಅಪ್ಪಣ್ಣ, ಇದು ಸುಳ್ಳು ಎಂದಿದ್ದಾರೆ.

ಮಡೆನೂರು ಮನು ಅವರು ಸಂತ್ರಸ್ತೆಗೆ 2018ರಿಂದ ಪರಿಚಯ. ಆ ಬಳಿಕ ಇಬ್ಬರ ಮಧ್ಯೆ ಆಪ್ತತೆ ಬೆಳೆಯಿತು. 2022ರಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಮನು ವಿರುದ್ಧ ಸಂತ್ರಸ್ತೆ ದೂರಿದ್ದಾರೆ. ಅಲ್ಲದೆ, ಒತ್ತಾಯಪೂರ್ವಕವಾಗಿ ತಾಳಿ ಕಟ್ಟಿದ್ದಾಗಿಯೂ ಹೇಳಿದ್ದಾರೆ. ಅವರ ದೂರನ್ನು ಆಧರಿಸಿ ಮನು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಅವರನ್ನು ಕೋರ್ಟ್ ಎದುರು ಹಾಜರುಪಡಿಸೋ ಸಾಧ್ಯತೆ ಇದೆ. ಈಗ ಸಂತ್ರಸ್ತೆ ಮಾಡಿರೋ ಹೊಸ ಆರೋಪ ವೈರಲ್ ಆಗಿದೆ.

‘ನನಗೆ ಕಾಮಿಡಿ ಕಿಲಾಡಿಗಳು ಅಪ್ಪಣ್ಣ ರಾಮದುರ್ಗ ಅಂತ ಇದಾನೆ. ಎರಡನೇ ಸೀಸನ್​ನಿಂದ ತೊಂದರೆ ಕೊಡುತ್ತಾ ಇದ್ದ. ಶೋಗೆ ಕರೆದು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾನೆ. ಅವನ ಕಾಟ ಇನ್ನೂ ತಪ್ಪಿಲ್ಲ. ದಿನವೂ ಅವನ ಕಾಟ ಹೆಚ್ಚುತ್ತಿದೆ. ನನ್ನ ಹಾಗೂ ಬಾಯ್​ಫ್ರೆಂಡ್ ಅಲೋಕ ಮಧ್ಯೆ ಬ್ರೇಕಪ್ ಆಗಿದೆ. ಇದಕ್ಕೆ ಕಾರಣ ಅಪ್ಪಣ್ಣ. ನಾನು ಆತ್ಮಹತ್ಯೆ ಮಾಡಿಕೊಂಡರೆ ಅವನೇ ಕಾರಣ. ಅವನ ಸುಮ್ಮನೆ ಬಿಡಬೇಡಿ’ ಎಂದು ಸಂತ್ರಸ್ತೆ ಹೇಳಿರೋ ಆಡಿಯೋ ವೈರಲ್ ಆಗಿದೆ.

ಇದನ್ನೂ ಓದಿ
‘ಕಾಂತಾರ: ಚಾಪ್ಟರ್ 1’ ಅಡಚಣೆ; ಅಂದುಕೊಂಡ ದಿನಾಂಕದಲ್ಲೇ ಚಿತ್ರ ರಿಲೀಸ್
ಮಹೇಶ್ ಬಾಬು ಕುಟುಂಬದಲ್ಲಿ ಕೊವಿಡ್; ಅಭಿಮಾನಿಗಳಲ್ಲಿ ಹೆಚ್ಚಿತು ಆತಂಕ
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
25ನೇ ವಯಸ್ಸಿಗೆ ಕಾಲಿಟ್ಟ ಸುಹಾನ; ಶಾರುಖ್ ಮಗಳ ಬಳಿ ಇದೆ ದುಬಾರಿ ವಸ್ತುಗಳು

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿಕೊಂಡಿದ್ದಾನೆ: ಮಡೆನೂರು ಮನು ಮೇಲೆ ಆರೋಪಗಳ ಸುರಿಮಳೆ

ಇದಕ್ಕೆ ಸ್ಪಷ್ಟನೆ ನೀಡಿರೋ ಅಪ್ಪಣ್ಣ, ‘ಒಂದೂವರೆ ವರ್ಷದ ಹಿಂದೆ ನಾನು ಅವರ ಸಂಪರ್ಕದಲ್ಲಿ ಇದ್ದಿದ್ದು ನಿಜ. ಆದರೆ, ಆ ಬಳಿಕ ಅವರ ಸಂಪರ್ಕ ಇಲ್ಲ. ಈ ರೀತಿ ಮಾತನಾಡು ಎಂದು ಮನು ಒತ್ತಾಯ ಪೂರ್ವಕವಾಗಿ ಆಕೆಯ (ಸಂತಸ್ತೆ) ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us