ನಾನ್ ವೆಜ್ ತಿಂದ ವಿಷಯ ವೈರಲ್; ಡಾಲಿ ಧನಂಜಯ್ ದೂರಿದ್ದು ಯಾರನ್ನ?

ನಟ ಡಾಲಿ ಧನಂಜಯ್ ಅವರ ಮಾಂಸಾಹಾರ ಸೇವನೆ ವಿಷಯ ವೈರಲ್ ಆಗಿ ಲಿಂಗಾಯತ ಸಮುದಾಯದ ಹೆಸರಿನಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಧನಂಜಯ್, ಆಹಾರ ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ ಎಂದು ಹೇಳಿದ್ದಾರೆ. ಸಮಾಜದಲ್ಲಿ ಆಹಾರದ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಖಂಡಿಸಿದ ಅವರು, ನಾನ್ ವೆಜ್ ತಿನ್ನೋದು ಅಪರಾಧವಲ್ಲ ಎಂದಿದ್ದಾರೆ.

ನಾನ್ ವೆಜ್ ತಿಂದ ವಿಷಯ ವೈರಲ್; ಡಾಲಿ ಧನಂಜಯ್ ದೂರಿದ್ದು ಯಾರನ್ನ?
ಡಾಲಿ

Updated on: Jan 31, 2026 | 7:00 AM

ಡಾಲಿ ಧನಂಜಯ್ ಅವರು (Dhananjay) ಇತ್ತೀಚೆಗೆ ನಾನ್​ ವೆಜ್ ತಿಂದ ವಿಷಯ ಸಾಕಷ್ಟು ಚರ್ಚೆ ಆಯಿತು. ಅವರು ಲಿಂಗಾಯತ ಆಗಿ ನಾನ್​ ವೆಜ್ ತಿಂದಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಬಹುತೇಕರು ಡಾಲಿ ಅವರನ್ನು ಬೆಂಬಲಿಸಿದ್ದರು. ಆಹಾರ ಅವರ ಆಯ್ಕೆ ಎಂದು ನೇರ ಮಾತುಗಳಲ್ಲಿ ಹೇಳಿದ್ದರು. ಈಗ ಈ ವಿಷಯಕ್ಕೆ ಡಾಲಿ ಧನಂಜಯ್ ಅವರು ಸ್ಪಷ್ಟನೆ ನೀಡಿದ್ದಾರೆ. ಆಹಾರ ಪ್ರತಿಯೊಬ್ಬ ಮನುಷ್ಯನ ಆಯ್ಕೆ ಎಂದಿದ್ದಾರೆ.

ಜನವರಿ 30ರಂದಿ ನಡೆದ ಸುದ್ದಿಗೋಷ್ಠಿಯಲ್ಲಿ ಧನಂಜಯ್ ಮಾತನಾಡಿದ್ದಾರೆ. ‘ನಾನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಷಯ ನೋಡಿದೆ. ಯಾರು ಅದನ್ನು ಎತ್ತಿ ಚರ್ಚೆ ಮಾಡಿದರು ಎಂಬುದು ಗೊತ್ತಿಲ್ಲ. ನನ್ನ ಗೆಳೆಯ ರಾಹುಲ್ ಎಂಬುವವರು ಬಿರಿಯಾನಿ ಶಾಪ್ ಓಪನ್ ಮಾಡಿಕೊಟ್ಟೆ. ಈ ವೇಳೆ ಊಟ ಆಫರ್ ಮಾಡಿದ. ಅದನ್ನು ಮಾಡಿ ಬಂದೆ. ಸುಮಾರು 10-15 ಬಿರಿಯಾನಿ ಶಾಪ್​​​ಗಳನ್ನು ನಾನೇ ಓಪನ್ ಮಾಡಿದ್ದೇನೆ. ಹೆಡ್​ಬುಷ್ ಸಮಯದಲ್ಲಿ ಬಿರಿಯಾನಿ ತಿನ್ನುತ್ತಲೇ ಸಿನಿಮಾ ಪ್ರಚಾರ ಮಾಡಿದ್ದೆ. ಈ ವಿಷಯ ಪಿಕ್ ಆಗಬಹುದು ಎಂಬುದು ಗೊತ್ತಿರಲಿಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಈ ರೀತಿಯ ವಿಷಯಗಳು ಚರ್ಚೆ ಆದಾಗ ಸಮಾಜ ಹೇಗೆ ಯೋಚಿಸುತ್ತಿದೆ ಎಂಬುದು ಗೊತ್ತಾಗುತ್ತದೆ’ ಎಂದಿದ್ದಾರೆ ಡಾಲಿ.

‘ಡಾಲಿ ನಾನ್ ವೆಜ್ ತಿನ್ನುತ್ತಾರಾ ಎಂದು ಕೇಳೋದು ಓಕೆ. ಲಿಂಗಾಯತರು ಹಾಗೂ ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಪ್ರಶ್ನಿಸೋದು ತಪ್ಪು. ಅದು ಅಗತ್ಯವಿಲ್ಲ. ಇದರ ಹಿಂದೆ ಒಂದಷ್ಟು ಜನರನ್ನು ಎತ್ತಿಕಟ್ಟೋ ಉದ್ದೇಶ ಇದ್ದಿರಬಹುದು’ ಎಂದು ದುಷ್ಟ ಆಲೋಚನೆ ಹೊಂದಿದ್ದವರ ವಿರುದ್ಧ ಡಾಲಿ ಕಿಡಿಕಾರಿದ್ದಾರೆ. ‘ಇದೆಲ್ಲ ಮೊದಲು ನನಗೆ ತೊಂದರೆ ಕೊಡುತ್ತಿತ್ತು. ಆದರೆ, ಈಗ ಹಾಗೆ ಆಗುತ್ತಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ತಂದೆ ಆಗುತ್ತಿದ್ದಾರೆ ಡಾಲಿ ಧನಂಜಯ್: ಸಿಹಿ ಸುದ್ದಿ ಹಂಚಿಕೊಂಡ ನಟ

‘ನಾನು ಓಪನ್ ಬುಕ್. ಊಟ, ಚಟ ಎಲ್ಲವೂ ನನ್ನ ಆಯ್ಕೆ. ಅದರಿಂದ ಯಾರಿಗೂ ತೊಂದರೆ ಆಗುತ್ತಿಲ್ಲ ಎಂದರೆ ಸಮಸ್ಯೆಯೇ ಇಲ್ಲವಲ್ಲ. ನಾನು ಸಿನಿಮಾಗಾಗಿ ಸ್ಮೋಕ್ ಮಾಡುತ್ತಿದ್ದೆ. ನಿಜ ಜೀವನದಲ್ಲೂ ಅದನ್ನು ಮುಂದುವರಿಸಿದೆ. ಈಗ ಅದನ್ನು ನಿಲ್ಲಿಸಿದ್ದೇನೆ. ನಾನು ಬಿಯರ್ ಬಾಯ್ ಎಂದೇ ಫೇಮಸ್. ಈಗ ನಾನು ಅಪರೂಪಕ್ಕೆ ಕುಡಿಯುತ್ತೇನೆ ಅಷ್ಟೇ. ನಾನು ಅದನ್ನು ಮಾಡಿ ಎಂದು ಯಾರಿಗೂ ಹೇಳಲ್ಲ. ಏನೇ ಮಾಡಿದರೂ ಇತಮಿತವಾಗಿ ಮಾಡಿ’ ಎಂದು ಧನಂಜಯ್ ಕಿವಿಮಾತು ಹೇಳಿದ್ದಾರೆ.

‘ನನಗೆ ಸಮುದ್ರ ಆಹಾರ ಎಂದರೆ ಇಷ್ಟ. ಕದ್ದು ಮುಚ್ಚಿ ಮಾಡೋಕೆ ಅದು ಕ್ರೈಮ್ ಅಲ್ಲ.ನನಗೆ ಅದು ಇಷ್ಟ. ಡಾಲಿ ಏನು ತಿಂತೀರಾ ಎಂದು ನನಗೆ ಕೇಳಿದರೆ ನಾನು ಖುಷಿಯಿಂದ ಉತ್ತರ ನೀಡುತ್ತೇನೆ’ ಎಂದು ಡಾಲಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.