ಪಟ್ಟಣಗೆರೆ ಶೆಡ್​ನ ಸಿಸಿಟಿವಿಯಲ್ಲಿದೆ ಶವ ಎಳೆದೊಯ್ಯೋ ದೃಶ್ಯ; ಆದರೆ…

| Updated By: ರಾಜೇಶ್ ದುಗ್ಗುಮನೆ

Updated on: Jul 20, 2024 | 11:46 AM

ಹಲ್ಲೆ ಬಳಿಕ ನಿತ್ರಾಣವಾಗಿದ್ದ ರೇಣುಕಾಸ್ವಾಮಿ ಮೇಲೆ ನಿಖಿಲ್, ಪವನ್, ರಾಘವೇಂದ್ರ ಅವರಿಂದ ಹಲ್ಲೆ ನಡೆದಿದೆ. ಬಳಿಕ ಶೆಡ್​ನಲ್ಲೇ ರೇಣುಕಾ ಸ್ವಾಮಿ ಕೊನೆಯುಸಿರೆಳೆದಿದ್ದರು. ನಂತರ ಶವವನ್ನು ನಿಖಿಲ್, ಪವನ್ ಹಾಗೂ ಇನ್ನಿತರ ಆರೋಪಿಗಳು ಸಾಗಿಸಿದ್ದರು. ಸಿಸಿಟಿವಿ ದೃಶ್ಯವನ್ನು ನಾಶ ಮಾಡಲಾಗಿತ್ತು.

ಪಟ್ಟಣಗೆರೆ ಶೆಡ್​ನ ಸಿಸಿಟಿವಿಯಲ್ಲಿದೆ ಶವ ಎಳೆದೊಯ್ಯೋ ದೃಶ್ಯ; ಆದರೆ...
ದರ್ಶನ್
Follow us on

ಬೆಂಗಳೂರಿನಲ್ಲಿರುವ ಪಟ್ಟಣಗೆರೆಯಲ್ಲಿ ರೇಣುಕಾ ಸ್ವಾಮಿ ಹತ್ಯೆ ಮಾಡಲಾಗಿತ್ತು. ಈ ಬೆನ್ನಲ್ಲೇ ಆ ಶವವನ್ನು ತೆಗೆದುಕೊಂಡು ಹೋಗಿ ಬೇರೆ ಕಡೆಯಲ್ಲಿ ಎಸೆಯಲಾಗಿತ್ತು. ಪಟ್ಟಣಗೆರೆ ಶೆಡ್​ನ ಸಿಸಿಟಿಯವಲ್ಲಿ ಶವ ಎಳೆದೊಯ್ಯೋ ದೃಶ್ಯ ಇತ್ತು. ಆದರೆ, ಸಿಸಿಟಿವಿ ವಿಡಿಯೋನ ಆರೋಪಿಗಳು ಡಿಲೀಟ್ ಮಾಡಿದ್ದಾರೆ. ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯವನ್ನೇ ಪ್ಲಾನ್ ಮಾಡಿ ಆರೋಪಿಗಳು ನಾಶ ಮಾಡಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ರಿಟ್ರೀವ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

ರೇಣುಕಾ ಸ್ವಾಮಿ ಅವರು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಾದ ದರ್ಶನ್ ಅವರು ತಮ್ಮ ಸಂಗಡಿಗರ ಜೊತೆ ಸೇರಿ ರೇಣುಕಾ ಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಇದೆ. ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗಲೇ ಆರೋಪಿಗಳ ವಿರುದ್ಧ ಪ್ರಮುಖ ಸಾಕ್ಷಿಯನ್ನೇ ನಾಶ ಮಾಡಿದ ಆರೋಪ ಬಂದಿದೆ.

ಹಲ್ಲೆ ಬಳಿಕ ನಿತ್ರಾಣವಾಗಿದ್ದ ರೇಣುಕಾಸ್ವಾಮಿ ಮೇಲೆ ನಿಖಿಲ್, ಪವನ್, ರಾಘವೇಂದ್ರ ಅವರಿಂದ ಹಲ್ಲೆ ನಡೆದಿದೆ. ಬಳಿಕ ಶೆಡ್​ನಲ್ಲೇ ರೇಣುಕಾ ಸ್ವಾಮಿ ಕೊನೆಯುಸಿರೆಳೆದಿದ್ದರು. ನಂತರ ಶವವನ್ನು ನಿಖಿಲ್, ಪವನ್ ಹಾಗೂ ಇನ್ನಿತರ ಆರೋಪಿಗಳು ಸಾಗಿಸಿದ್ದರು. ಶೆಡ್​ನ‌ ಒಂದು ರೂಮ್​ನಿಂದ ಮತ್ತೊಂದು ಸೈಡ್​ನಲ್ಲಿದ್ದ ರೂಮ್​ಗೆ ಎಳೆದು ಸಾಗಾಟ ಮಾಡಲಾಗಿದೆ.

ಇದನ್ನೂ ಓದಿ: ಪವಿತ್ರಾ ಆಪ್ತರಿಂದಲೇ ನಡೆಯಿತಾ ರೇಣುಕಾ ಸ್ವಾಮಿ ಮರಣೋತ್ತರ ಪರೀಕ್ಷೆ?

ರೂಮ್​ನಲ್ಲಿದ್ದ ಸಿಸಿಟಿವಿಯಲ್ಲಿ ಆರೋಪಿಗಳ ಚಲನವಲನ ಸೆರೆಯಾಗಿತ್ತು. ಮೃತದೇಹ ಎಳೆದು ತರೋ ವಿಡಿಯೋ ಸ್ಪಷ್ಟವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನು ಗಮನಿಸಿದ್ದ ವಿನಯ್ ಸಿಸಿಟಿವಿ ಫುಟೇಜ್ ಡಿಲೀಟ್ ಮಾಡಿದ್ದ. ಸದ್ಯ ಸಿಸಿಟಿವಿ ಡಿವಿಆರ್ ಕೂಡ ರಿಟ್ರಿವ್​ಗೆ ರವಾನೆ ಮಾಡಲಾಗಿದೆ. ವಿಡಿಯೋ ರಿಟ್ರೀವ್ ಆದರೆ ಪ್ರಕರಣಕ್ಕೆ ಮತ್ತೊಂದು ಪ್ರಬಲ ಸಾಕ್ಷ್ಯ ಸಿಕ್ಕಂತೆ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.