ದೇಹದ ತೂಕ ಇಳಿದ ಭಯದಲ್ಲಿ ಕೋರ್ಟ್ ಮೊರೆ ಹೋದ ದರ್ಶನ್; ಇಟ್ಟ ಬೇಡಿಕೆಗಳೇನು?

| Updated By: ರಾಜೇಶ್ ದುಗ್ಗುಮನೆ

Updated on: Jul 09, 2024 | 2:05 PM

ದರ್ಶನ್​ಗೆ ಕೇಂದ್ರ ಕಾರಾಗೃಹದಲ್ಲಿ ಯಾವ ವ್ಯವಸ್ಥೆಯೂ ಸಿಗುತ್ತಿಲ್ಲ. ಅವರಿಗೆ ಜೈಲಿನಲ್ಲಿರೋ ಊಟ ಸೇರುತ್ತಿಲ್ಲ. ಹೀಗಾಗಿ, ಅವರು ಮಂಕಾಗಿದ್ದಾರೆ. ಮನೆ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ. ದೇಹದ ತೂಕ ಇಳಿಕೆ ಆಗುತ್ತಿರುವ ಭಯವೂ ಕಾಡುತ್ತಿದೆ. ಅವರು ಈಗಾಗಲೇ 10 ಕೆಜಿ ತೂಕ ಕಳೆದುಕೊಂಡಿದ್ದಾರೆ. ಹೀಗಾಗಿ ಕೋರ್ಟ್​ಗೆ ವಿಶೇಷ ಮನವಿ ಮಾಡಿದ್ದಾರೆ.

ದೇಹದ ತೂಕ ಇಳಿದ ಭಯದಲ್ಲಿ ಕೋರ್ಟ್ ಮೊರೆ ಹೋದ ದರ್ಶನ್; ಇಟ್ಟ ಬೇಡಿಕೆಗಳೇನು?
ದರ್ಶನ್
Follow us on

ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರು ಜೈಲಿನಲ್ಲಿ ಇದ್ದು ಇನ್ನೂ ತಿಂಗಳು ಕಳೆದಿಲ್ಲ. ಆಗಲೇ ಹೈರಾಣವಾಗಿ ಹೊಗಿದ್ದಾರೆ. ತಿಂಗಳ ಒಳಗೆ ಅವರು 10 ಕೆಜಿ ದೇಹದ ತೂಕ ಕಳೆದುಕೊಂಡಿದ್ದಾರೆ. ಇದು ದರ್ಶನ್ ಅವರನ್ನು ಮತ್ತಷ್ಟು ಚಿಂತೆಗೆ ಒಳಗಾಗುವಂತೆ ಮಾಡಿದೆ. ಈ ಕಾರಣದಿಂದ ದರ್ಶನ್ ಅವರು ಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಊಟ, ಹಾಸಿಗೆ ಜೊತೆ ಇನ್ನಷ್ಟು ವಸ್ತುಗಳನ್ನು ಕೋರಿ ನಟ ದರ್ಶನ್ ಕೋರ್ಟ್​ಗೆ ಮನವಿ ಮಾಡಿದ್ದಾರೆ.

ನಟ ದರ್ಶನ್ ಅವರು ಹಾಯಾಗಿ ಜೀವನ ನಡೆಸಿದವರು. ವಾರಕ್ಕೆ ಒಂದೆರಡು ಪಾರ್ಟಿ ಮಾಡಿಕೊಂಡು, ಮಾಂಸಾಹಾರ ತಿಂದುಕೊಂಡು ಹಾಯಾಗಿ ಇದ್ದರು. ಈಗ ಕೇಂದ್ರ ಕಾರಾಗೃಹದಲ್ಲಿ ಈ ಯಾವ ವ್ಯವಸ್ಥೆಯೂ ಇಲ್ಲ. ಅವರಿಗೆ ಜೈಲಿನಲ್ಲಿರೋ ಊಟ ಸೇರುತ್ತಿಲ್ಲ. ಹೀಗಾಗಿ, ಅವರು ಮಂಕಾಗಿದ್ದಾರೆ. ಮನೆ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ. ದೇಹದ ತೂಕ ಇಳಿಕೆ ಆಗುತ್ತಿರುವ ಭಯವೂ ಕಾಡುತ್ತಿದೆ.

ಊಟ, ಹಾಸಿಗೆ, ಪುಸ್ತಕ, ಬಟ್ಟೆ, ಚಮಚವನ್ನು ಮನೆಯಿಂದ ತರಿಸಿಕೊಳ್ಳಲು ದರ್ಶನ್ ಕೋರ್ಟ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇವುಗಳನ್ನೆಲ್ಲಾ ಮನೆಯಿಂದ ಪಡೆಯಲು ಜೈಲು ಅಧಿಕಾರಿಗಳು ಅನುಮತಿಸಿಲ್ಲ. ಜೈಲಿನಲ್ಲಿ ನೀಡುತ್ತಿರುವ ಊಟ ಅವರಿಗೆ ಜೀರ್ಣವಾಗುತ್ತಿಲ್ಲ. ಅವರಿಗೆ ಫುಡ್ ಪಾಯಿಸನಿಂಗ್ ಆಗುತ್ತಿದೆ. ಇದರ ಜೊತೆಗೆ ಭೇದಿ ಕೂಡ ಆಗುತ್ತಿದೆ.

‘ಅತಿಸಾರ / ಭೇದಿಯಿಂದಾಗಿ ದರ್ಶನ್ ಅವರ ತೂಕ ತುಂಬಾ ಕಡಿಮೆಯಾಗಿದೆ. ಹಲವು ಕೆಜಿಗಳಷ್ಟು ತೂಕವನ್ನು ದರ್ಶನ್ ಕಳೆದುಕೊಂಡಿದ್ದಾರೆ. ಹೀಗೆಂದು ಜೈಲಿನ ವೈದ್ಯರೇ ಅಭಿಪ್ರಾಯ ನೀಡಿದ್ದಾರೆ. ಮನೆ ಊಟಕ್ಕೆ ಅನುಮತಿ ಕೋರಿದ್ದಕ್ಕೆ ಕೋರ್ಟ್ ಆದೇಶವಿಲ್ಲವೆಂದು ಜೈಲು ಅಧಿಕಾರಿಗಳು ಅನುಮತಿ ನೀಡಿಲ್ಲ’ ಎಂದು ಎಂದು ದರ್ಶನ್ ಪರ ವಕೀಲರು ಹೇಳಿದ್ದಾರೆ.

ಇದನ್ನೂ ಓದಿ: ಜುಲೈ 12ಕ್ಕೆ ದರ್ಶನ್​ ನಟನೆಯ ‘ಶಾಸ್ತ್ರಿ’ ಸಿನಿಮಾ ಮರು ಬಿಡುಗಡೆ; ಏನಿದು ಪ್ಲ್ಯಾನ್? 

‘ಜೈಲು ಅಧಿಕಾರಿಗಳ ನಿರಾಕರಣೆ ಕಾನೂನು ಬಾಹೀರ, ಅಮಾನವೀಯ. ಹೀಗೇ ಮುಂದುವರಿದರೆ ದರ್ಶನ್ ಮತ್ತಷ್ಟು ತೂಕ ಕಳೆದುಕೊಳ್ಳಬಹುದು. ಇದು ದರ್ಶನ್ ಅನಾರೋಗ್ಯಕ್ಕೂ ಕಾರಣವಾಗಬಹುದು. ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆಯಾಗಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಹೊರೆ ಕಡಿಮೆಯಾಗುತ್ತದೆ. ಹೀಗಾಗಿ ಕುಟುಂಬದವರಿಂದ ಮನೆ ಊಟ ಪಡೆಯಲು ಅನುಮತಿ ನೀಡಬೇಕು’ ಎಂದು ದರ್ಶನ್ ಪರ ವಕೀಲರು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.