
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್, ಜಾಮೀನು ಪಡೆದಿದ್ದು ಪ್ರಸ್ತುತ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಜೈಲಿನಲ್ಲಿರುವಾಗ ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಜನವರಿ ತಿಂಗಳಲ್ಲಿ ಮತ್ತೆ ಚಿತ್ರೀಕರಣಕ್ಕೆ ಮರಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದು ಸುಳ್ಳಾಗಿದೆ. ಇದರ ನಡುವೆ ದರ್ಶನ್ ಈ ಹಿಂದೆ ಸಿನಿಮಾಗಳಿಗಾಗಿ ಪಡೆದಿದ್ದ ಅಡ್ವಾನ್ಸ್ ಹಣವನ್ನು ಮರಳಿಸಲಿದ್ದಾರೆ ಎನ್ನಲಾಗುತ್ತಿದೆ.
ಜೈಲಿಗೆ ಹೋಗುವ ಮುನ್ನ ದರ್ಶನ್ ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದರು. ಆ ಸಿನಿಮಾದ ಚಿತ್ರೀಕರಣ ಬಾಕಿ ಉಳಿದಿದೆ. ‘ಡೆವಿಲ್’ ಸಿನಿಮಾದ ಜೊತೆಗೆ ಇನ್ನೆರಡು ಸಿನಿಮಾಗಳಿಗಾಗಿ ದರ್ಶನ್ ಅಡ್ವಾನ್ಸ್ ಹಣ ಪಡೆದಿದ್ದರು. ಆದರೆ ದರ್ಶನ್, ಎರಡು ನಿರ್ಮಾಪಕರಿಗೆ ದರ್ಶನ್ ಹಣ ಮರಳಿಸಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಈ ಹಿಂದೆ ಸಂದರ್ಶನವೊಂದರಲ್ಲಿ ‘ಸ್ಮಶಾನಕ್ಕೆ ಹೋದ ಹೆಣ, ನನಗೆ ಬಂದ ಅಡ್ವಾನ್ಸ್ ಹಣ ವಾಪಸ್ ಬರುವುದಿಲ್ಲ’ ಎಂದಿದ್ದರು. ಆದರೆ ಈಗ ಸ್ವತಃ ದರ್ಶನ್ ಅವರೇ ಅಡ್ವಾನ್ಸ್ ಹಣ ಮರಳಿಸಿದ್ದಾರೆ.
ಕೆವಿಎನ್ ನಿರ್ಮಾಣ ಸಂಸ್ಥೆಯ ಸಿನಿಮಾದಲ್ಲಿ ದರ್ಶನ್ ನಟಿಸಲಿಕ್ಕಿದ್ದರು, ಈ ಸಿನಿಮಾವನ್ನು ಪ್ರೇಮ್ ನಿರ್ದೇಶನ ಮಾಡುವುದಾಗಿ ಘೋಷಣೆ ಸಹ ಆಗಿತ್ತು. ಆದರೆ ಆ ಸಿನಿಮಾದ ಅಡ್ವಾನ್ಸ್ ಹಣವನ್ನು ದರ್ಶನ್ ಮರಳಿಸಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ತೆಲುಗಿನ ನಿರ್ಮಾಪಕರೊಬ್ಬರಿಗೆ ಸಹ ಸಿನಿಮಾ ಒಪ್ಪಂದ ಮಾಡಿಕೊಂಡಿದ್ದರು. ಆ ಹಣವನ್ನು ದರ್ಶನ್ ಮರಳಿಸಿದ್ದಾರೆ ಎನ್ನಲಾಗಿದೆ.
ನಿರ್ಮಾಪಕ ಸೂರಪ್ಪ ಬಾಬು ನಿರ್ಮಿಸಲಿರುವ ಸಿನಿಮಾದಲ್ಲಿ ನಟಿಸಲೆಂದು ದರ್ಶನ್ ಅಡ್ವಾನ್ಸ್ ಹಣ ಪಡೆದಿದ್ದರು. ಈ ಹಣವನ್ನು ದರ್ಶನ್ ಮರಳಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿಯನ್ನು ಸೂರಪ್ಪ ಬಾಬು ತಳ್ಳಿಹಾಕಿರುವ ಸೂರಪ್ಪ ಬಾಬು, ದರ್ಶನ್ ತಮಗೆ ಹಣ ಮರಳಿಸಿಲ್ಲ ಎಂದಿದ್ದಾರೆ. ಇನ್ನು ‘ಡೆವಿಲ್’ ಸಿನಿಮಾದ ಚಿತ್ರೀಕರಣ ಅರ್ಧದಷ್ಟು ಈಗಾಗಲೇ ಮುಗಿದಿರುವ ಕಾರಣ ಆ ಸಿನಿಮಾವನ್ನು ದರ್ಶನ್ ಪೂರ್ತಿ ಮಾಡಿಕೊಡಲಿದ್ದಾರೆ. ‘ವೀರ ಸಿಂಧೂರ ಲಕ್ಷ್ಮಣ’ ಸಿನಿಮಾ ಮಾಡಲು ಒಪ್ಪಿಕೊಂಡಿದ್ದ ದರ್ಶನ್, ಒಪ್ಪಂದದಂತೆ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.