ಅಡ್ಡಬಂದ ಅಮವಾಸ್ಯೆ, ದರ್ಶನ್ ಕಾರ್ಯಯೋಜನೆಯಲ್ಲಿ ಬದಲಾವಣೆ

Darshan Thoogudeepa: ಅನಾರೋಗ್ಯದಿಂದ ಬಳಲುತ್ತಿದ್ದ ದರ್ಶನ್ ತೂಗುದೀಪ, ಚಿಕಿತ್ಸೆ ಪಡೆಯುವ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದು ಬೆಂಗಳೂರಿನ ಮನೆಗೆ ಬಂದಿದ್ದಾರೆ. ಆದರೆ ದರ್ಶನ್ ಇನ್ನೂ ಕೆಲವು ದಿನ ಆಸ್ಪತ್ರೆಗೆ ಹೋಗುತ್ತಿಲ್ಲ.

ಅಡ್ಡಬಂದ ಅಮವಾಸ್ಯೆ, ದರ್ಶನ್ ಕಾರ್ಯಯೋಜನೆಯಲ್ಲಿ ಬದಲಾವಣೆ
Follow us
|

Updated on:Oct 31, 2024 | 1:22 PM

ಸುಮಾರು ಐದು ತಿಂಗಳ ಜೈಲು ವಾಸದ ಬಳಿಕ ನಟ ದರ್ಶನ್ ಗೆ ಜಾಮೀನು ದೊರೆತಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್​ಗೆ ವೈದ್ಯಕೀಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡಲಾಗಿದೆ. ಜಾಮೀನು ಆರುವಾರಗಳ ಮಾತ್ರವೇ ಇರಲಿದ್ದು, ಈ ಆರು ವಾರಗಳಲ್ಲಿ ಚಿಕಿತ್ಸೆ ಮುಗಿಸಿ ಮರಳಿ ಜೈಲು ಸೇರಬೇಕಿದೆ. ಅಲ್ಲದೆ ನ್ಯಾಯಾಲಯ ವಿಧಿಸಿರುವ ಷರತ್ತಿನಂತೆ ಒಂದು ವಾರದ ಒಳಗಾಗಿ ಚಿಕಿತ್ಸೆಯ ಕುರಿತು ಪೂರ್ಣ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.

ದರ್ಶನ್ ನಿನ್ನೆ (ಅಕ್ಟೋಬರ್ 30) ತಡರಾತ್ರಿ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ರಾಜರಾಜೇಶ್ವರಿ ನಗರದ ಮನೆಯ ಬದಲಾಗಿ ತಮ್ಮ ಪತ್ನಿ ನೆಲೆಸಿರುವ ಮನೆಗೆ ದರ್ಶನ್ ಹೋಗಿದ್ದಾರೆ. ಜೈಲಿನಿಂದ ಬಂದ ಕೂಡಲೇ ದರ್ಶನ್ ಆಸ್ಪತ್ರೆಗೆ ತೆರಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ದರ್ಶನ್ ಆಸ್ಪತ್ರೆಗೆ ಹೋಗುತ್ತಿಲ್ಲ. ಇಂದು ಮಾತ್ರವಲ್ಲ ಇನ್ನೂ ಎರಡು ದಿನಗಳ ಕಾಲ ದರ್ಶನ್ ಆಸ್ಪತ್ರೆಗೆ ಹೋಗುತ್ತಿಲ್ಲ. ಇದಕ್ಕೆ ಕಾರಣವೂ ಇದೆ.

ಇಂದು (ಅಕ್ಟೋಬರ್ 31) ದರ್ಶನ್ ಪುತ್ರ ವಿನೀಶ್ ಹುಟ್ಟುಹಬ್ಬ. ಆದ ಕಾರಣ ಇಂದು ಮಗನ ಜೊತೆ, ಪತ್ನಿಯ ಜೊತೆಗೆ ಸಮಯ ಕಳೆಯಲಿದ್ದಾರೆ. ನಾಳೆ ದೀಪಾವಳಿ ಇದ್ದು, ಮನೆಯವರೊಟ್ಟಿಗೆ ದೀಪಾವಳಿ ಆಚರಣೆ ಮಾಡಲಿದ್ದಾರೆ. ಇಂದು ಬೆಳಿಗ್ಗೆಯಷ್ಟೆ ರಾಜರಾಜೇಶ್ವರಿನಗರದ ಮನೆಯಿಂದ ಎಲ್ಲ ಕಾರುಗಳನ್ನು ಸಹ ದರ್ಶನ್ ತಮ್ಮ ಪತ್ನಿಯ ಮನೆಗೆ ತರಿಸಿಕೊಂಡಿದ್ದು, ಎಲ್ಲದಕ್ಕೂ ಪೂಜೆ ಮಾಡಿ ಹಬ್ಬ ಆಚರಣೆ ಮಾಡಲಿದ್ದಾರೆ. ಆ ನಂತರವೇ ದರ್ಶನ್ ಆಸ್ಪತ್ರೆಗೆ ತೆರಳಲಿದ್ದಾರೆ.

ಇದನ್ನೂ ಓದಿ:ದರ್ಶನ್​ಗೆ ಶೀಘ್ರವೇ ಬಿಗ್ ಶಾಕ್; ಬೆಂಗಳೂರು ಪೊಲೀಸರಿಂದ ಮಹತ್ವದ ನಿರ್ಧಾರ

ಅಮವಾಸ್ಯೆ ಇರುವ ಕಾರಣ ಅಮವಾಸ್ಯೆ ಕಳೆದುಕೊಂಡು ದರ್ಶನ್ ಆಸ್ಪತ್ರೆಗೆ ಹೋಗಲಿದ್ದಾರೆ. ಅಲ್ಲಿ ವೈದ್ಯರೊಟ್ಟಿಗೆ ಚರ್ಚೆ ಮಾಡಿ ಮುಂದಿನ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಈಗ ಪತ್ನಿಯ ಮನೆಯಲ್ಲಿ ವೈದ್ಯರ ಸಲಹೆ ಮೇರೆಗೆ ಕೆಲವು ಔಷಧ ಹಾಗೂ ಬೆನ್ನಿಗೆ ಕೆಲವು ಪಟ್ಟಿಗಳನ್ನು ದರ್ಶನ್ ಧರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್​ಗೆ ಬೆನ್ನುಹುರಿಯ ಸಮಸ್ಯೆ ಎದುರಾಗಿದೆ. ಬೆನ್ನು ಹುರಿಯ ಎಲ್​1 ಎಲ್​5 ಮೂಳೆಗಳ ಸಮಸ್ಯೆಯನ್ನು ದರ್ಶನ್ ಅನುಭವಿಸುತ್ತಿದ್ದು, ದರ್ಶನ್​ ಕಾಲಿನ ಸ್ಪರ್ಷ ಜ್ಞಾನವನ್ನು ತುಸು ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ದರ್ಶನ್​ಗೆ ಶೀಘ್ರ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ವೈದ್ಯರು ವರದಿ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:12 pm, Thu, 31 October 24

ಚಿಕ್ಕಮಗಳೂರು: ದೇವಿರಮ್ಮ ದರ್ಶನಕ್ಕೆ ಬಂದಿದ್ದ ಭಕ್ತೆ ಅಸ್ವಸ್ಥ
ಚಿಕ್ಕಮಗಳೂರು: ದೇವಿರಮ್ಮ ದರ್ಶನಕ್ಕೆ ಬಂದಿದ್ದ ಭಕ್ತೆ ಅಸ್ವಸ್ಥ
ಬೆನ್ನುನೋವಿನ ಸಮಸ್ಯೆಗಾಗಿ ಇಂದು ಮಧ್ಯಾಹ್ನ ವೈದ್ಯರನ್ನು ಕಾಣಲಿರುವ ದರ್ಶನ್
ಬೆನ್ನುನೋವಿನ ಸಮಸ್ಯೆಗಾಗಿ ಇಂದು ಮಧ್ಯಾಹ್ನ ವೈದ್ಯರನ್ನು ಕಾಣಲಿರುವ ದರ್ಶನ್
ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಕಡಿತಗೊಳಿಸುವ ಸಾಧ್ಯತೆ: ಕುಮಾರಸ್ವಾಮಿ
ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಕಡಿತಗೊಳಿಸುವ ಸಾಧ್ಯತೆ: ಕುಮಾರಸ್ವಾಮಿ
‘ನಿಮ್ಮ ಗುಣವೇ ಸರಿಯಿಲ್ಲ’; ಮಂಜು-ಭವ್ಯಾ ಮಧ್ಯೆ ನಡೆಯಿತು ಜಗಳ
‘ನಿಮ್ಮ ಗುಣವೇ ಸರಿಯಿಲ್ಲ’; ಮಂಜು-ಭವ್ಯಾ ಮಧ್ಯೆ ನಡೆಯಿತು ಜಗಳ
Daily Devotional: ಅಭ್ಯಂಜನ ಸ್ನಾನದ ಮಹತ್ವ ಹಾಗೂ ಪ್ರಯೋಜನ ತಿಳಿಯಿರಿ
Daily Devotional: ಅಭ್ಯಂಜನ ಸ್ನಾನದ ಮಹತ್ವ ಹಾಗೂ ಪ್ರಯೋಜನ ತಿಳಿಯಿರಿ
Nithya Bhavishya: ನರಕ ಚತುರ್ದಶಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನರಕ ಚತುರ್ದಶಿ ದಿನದ ರಾಶಿ ಭವಿಷ್ಯ ತಿಳಿಯಿರಿ
ಜಾಮೀನು ಪಡೆದು ಬಳ್ಳಾರಿಯಿಂದ ಹೊರಟ ದರ್ಶನ್ ಕಾರಿಗೆ ಮುಗಿಬಿದ್ದ ಅಭಿಮಾನಿಗಳು
ಜಾಮೀನು ಪಡೆದು ಬಳ್ಳಾರಿಯಿಂದ ಹೊರಟ ದರ್ಶನ್ ಕಾರಿಗೆ ಮುಗಿಬಿದ್ದ ಅಭಿಮಾನಿಗಳು
ಪ್ರಚಾರಕ್ಕೆ ಹೋದ ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ತರಾಟೆಗೆ ತೆಗೆದುಕೊಂಡ ಜನ
ಪ್ರಚಾರಕ್ಕೆ ಹೋದ ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ತರಾಟೆಗೆ ತೆಗೆದುಕೊಂಡ ಜನ
‘ಕಾಟೇರ’ ಶೂಟಿಂಗ್ ವೇಳೆಯೇ ದರ್ಶನ್​ಗೆ ಬೆನ್ನು ನೋವು ಇತ್ತು: ತರುಣ್ ಸುಧೀರ್
‘ಕಾಟೇರ’ ಶೂಟಿಂಗ್ ವೇಳೆಯೇ ದರ್ಶನ್​ಗೆ ಬೆನ್ನು ನೋವು ಇತ್ತು: ತರುಣ್ ಸುಧೀರ್
ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು
ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು