ದರ್ಶನ್​​ಗೆ​ ವಂಚನೆ ಪ್ರಯತ್ನ; ನಾನು ಈ ಪ್ರಕರಣದಲ್ಲಿ ಮಾತಾಡಿ ಬಾಯಿ ಗಲೀಜು ಮಾಡಿಕೊಳ್ಳಲ್ಲ: ಉಮಾಪತಿ ಗೌಡ

| Updated By: ಮದನ್​ ಕುಮಾರ್​

Updated on: Jul 12, 2021 | 4:41 PM

ನಾನು ದರ್ಶನ್‌ರನ್ನು ಅರುಣಾ ಕುಮಾರಿಗೆ ಭೇಟಿ ಮಾಡಿಸಿರಲಿಲ್ಲ. ಜೂನ್ ನಾಲ್ಕನೇ ವಾರದಲ್ಲಿ ಪೊಲೀಸರು ಠಾಣೆಗೆ ಕರೆದಿದ್ದರು. ನಾನು ಹೋದಾಗ ಠಾಣೆಯಲ್ಲಿ ಅರುಣಾ ಕುಮಾರಿ ಕುಳಿತಿದ್ದರು. ದರ್ಶನ್‌ರವರಿಗೆ ಬೆಲೆ ನೀಡಿ ಎಲ್ಲದಕ್ಕೂ ಸ್ಪಷ್ಟನೆ ನೀಡುತ್ತಿದ್ದೇನೆ ಎಂದಿದ್ದಾರೆ ಉಮಾಪತಿ.

ದರ್ಶನ್​​ಗೆ​ ವಂಚನೆ ಪ್ರಯತ್ನ; ನಾನು ಈ ಪ್ರಕರಣದಲ್ಲಿ ಮಾತಾಡಿ ಬಾಯಿ ಗಲೀಜು ಮಾಡಿಕೊಳ್ಳಲ್ಲ: ಉಮಾಪತಿ ಗೌಡ
ಉಮಾಪತಿ, ದರ್ಶನ್​
Follow us on

ನಟ ದರ್ಶನ್​ ಹೆಸರಲ್ಲಿ ವಂಚನೆ ಪ್ರಯತ್ನ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ನಿಮ್ಮ ಗೆಳೆಯರು ದೊಡ್ಡ ಮೊತ್ತ ಸಾಲಕ್ಕೆ ಅರ್ಜಿ ಹಾಕಿದ್ದಾರೆ. ಶ್ಯೂರಿಟಿಯಲ್ಲಿ ನಿಮ್ಮ ಹೆಸರಿದೆ ಎಂದು ನಕಲಿ ಬ್ಯಾಂಕ್​ ಸಿಬ್ಬಂದಿ ದರ್ಶನ್​ ಬಳಿ ತೆರಳಿದ್ದರು. ಈಗ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣ ನಿತ್ಯ ತಿರುವು ಪಡೆದುಕೊಳ್ಳುತ್ತಿದೆ. ಈ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಇಂದು (ಜು.12) ಪತ್ರಿಕಾಗೋಷ್ಠಿ ಕರೆದು ಮಾತನಾಡಿದ್ದಾರೆ. 

‘ನಾನು, ದರ್ಶನ್‌ ಫೋನ್‌ನಲ್ಲಿ ಅರುಣಾ ಕುಮಾರಿ ಜತೆ ಚರ್ಚೆ ಮಾಡಿದ್ದೇವೆ. ಫೋನ್‌ನಲ್ಲಿ ಮಾತನಾಡಿದ ನಂತರ ದರ್ಶನ್‌ ಜತೆ ನಾನು ಕುಳಿತಿದ್ದಾಗಲೇ ಅರುಣಾ ಕುಮಾರಿ ಭೇಟಿಯಾಗಿದ್ದರು. ದರ್ಶನ್‌ರನ್ನು ಅರುಣಾ ಕುಮಾರಿಗೆ ನಾನು ಭೇಟಿ ಮಾಡಿಸಿರಲಿಲ್ಲ. ಜೂನ್ ನಾಲ್ಕನೇ ವಾರದಲ್ಲಿ ಪೊಲೀಸರು ಠಾಣೆಗೆ ಕರೆದಿದ್ದರು. ನಾನು ಹೋದಾಗ ಠಾಣೆಯಲ್ಲಿ ಅರುಣಾ ಕುಮಾರಿ ಕುಳಿತಿದ್ದರು. ದರ್ಶನ್‌ರವರಿಗೆ ಬೆಲೆ ನೀಡಿ ಎಲ್ಲದಕ್ಕೂ ಸ್ಪಷ್ಟನೆ ನೀಡುತ್ತಿದ್ದೇನೆ’ ಎಂದಿದ್ದಾರೆ ಉಮಾಪತಿ.

‘ಸ್ಪಷ್ಟನೆ ನೀಡೋಕೆ ದರ್ಶನ್ ನನಗೆ ಯಾವುದೇ ಗಡುವು ನೀಡಿಲ್ಲ. ನನ್ನ ವಿರುದ್ಧ ಜನರು ಸಾವಿರ ಹೇಳಬಹುದು. ಪೊಲೀಸರ ತನಿಖೆ ಬಳಿಕ ಅಂತಿಮ ಸತ್ಯಾಸತ್ಯತೆ ಗೊತ್ತಾಗುತ್ತೆ. ನಟ ದರ್ಶನ್​ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ಪ್ರಕರಣದಲ್ಲಿ ಯಾರೋ ನನ್ನನ್ನು ಸಿಕ್ಕಿಸೋಕೆ ಪ್ರಯತ್ನ ಮಾಡುತ್ತಿದ್ದಾರೆ. ಚರ್ಚೆ ಮೂಲಕ ಇದನ್ನು ಬಗೆಹರಿಸಿಕೊಳ್ಳಲ್ಲ. ಕಾನೂನು ಮೂಲಕವೇ ಇದನ್ನು ಬಗೆಹರಿಸಿಕೊಳ್ಳುತ್ತೇವೆ. ಇದನ್ನು ದರ್ಶನ್ ಎದುರೇ ಪೊಲೀಸರ ಬಳಿ ಹೇಳಿದ್ದೇನೆ’ ಎಂದಿದ್ದಾರೆ ಅವರು.

‘ಅರುಣಾ ಕುಮಾರಿ ಜೊತೆ ನಡೆಸಿದ್ದ ವಾಟ್ಸಾಪ್ ಚಾಟ್​, ವಾಯ್ಸ್‌ ಕಾಲ್ಸ್‌ಅನ್ನು ನಾನೇ ನಟ ದರ್ಶನ್‌ಗೆ ಕಳಿಸಿದ್ದೆ. ಪೊಲೀಸರ ವಿಚಾರಣೆ ವೇಳೆಯೂ ನನ್ನನ್ನು ಕರೆದಿಲ್ಲ. ಕೆಲವರು ಆರೋಪ ಒಪ್ಪಿಕೊಳ್ಳಿ ಅಂದ್ರು, ನಾನು ಒಪ್ಪಿಕೊಳ್ಳಲಿಲ್ಲ. ತನಿಖೆ ನಡೆಸಿ ನಂತರ ಸತ್ಯ ಗೊತ್ತಾಗುತ್ತೆ ಎಂದು ಹೇಳಿದೆ. ನಾನೇ ಕೋಟ್ಯಧೀಶ, ಇನ್ನೊಬ್ಬರ ಆಸ್ತಿ ನನಗೆ ಬೇಕಾಗಿಲ್ಲ’ ಎಂದಿದ್ದಾರೆ ಉಮಾಪತಿ.

ಇದನ್ನೂ ಓದಿ:

‘ಇದರಲ್ಲಿ ಯಾರೇ ಇದ್ರೂ ಬಿಡಲ್ಲ‘; ವಂಚನೆ ಪ್ರಯತ್ನದ ಬಗ್ಗೆ ದರ್ಶನ್​ ಎಚ್ಚರಿಕೆ

ಎಲ್ಲ ಕಡೆ ಉಮಾಪತಿ ಹೆಸರು ಕೇಳಿ ಬರುತ್ತಿದೆ, ನಾನು ಅವರ ವಿರುದ್ಧ ಆರೋಪ ಮಾಡುತ್ತಿಲ್ಲ; ನಟ ದರ್ಶನ್

Published On - 4:22 pm, Mon, 12 July 21