
ದರ್ಶನ್ ನಟನೆಯ ‘ದಿ ಡೆವಿಲ್’ (The Devil Movie) ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಯಿತು. ಈ ಚಿತ್ರವನ್ನು ಅವರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ಚಿತ್ರದ ಗಳಿಕೆ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಿರುವಾಗಲೇ ಸಿನಿಮಾ ತಂಡದವರು ಕೋರ್ಟ್ನಿಂದ ಆದೇಶ ಒಂದನ್ನು ತಂದಿದ್ದಾರೆ. ಇದರ ಅನುಸಾರ ಚಿತ್ರದ ಬಗ್ಗೆ ನೆಗೆಟಿವ್ ಆಗಿ ಬರೆಯುವುದು ಅಥವಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು ಅಪರಾಧವಾಗಿದೆ.
‘ಶ್ರೀ ಜೈಮಾ ಕಂಬೈನ್ಸ್’ ‘ಡೆವಿಲ್’ ಸಿನಿಮಾ ನಿರ್ಮಾಣ ಮಾಡಿದೆ. ಮಿಲನ ಪ್ರಕಾಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕೆಲವರು ಉದ್ದೇಶ ಪೂರ್ವಕವಾಗಿ ನೆಗೆಟಿವ್ ಮಾಡುವ ಪ್ರಯತ್ನ ಮಾಡಿದ್ದಾರೆ. ಇದನ್ನು ತಡೆಯಲು ಚಿತ್ರ ತಂಡ ಕೋರ್ಟ್ನಿಂದ ಆದೇಶವನ್ನು ತಂದಿದೆ.
‘ದಿ ಡೆವಿಲ್ ಚಿತ್ರದ ಕುರಿತು ಯಾವುದೇ ವ್ಯಕ್ತಿ, ಸಂಸ್ಥೆ, ಚಾನೆಲ್, ಸಾಮಾಜಿಕ ಜಾಲತಾಣದ ಖಾತೆದಾರರು ಅಥವಾ ಸಂಬಂಧಿತ ಪ್ಲಾಟ್‌ಫಾರ್ಮ್ಗಳು, ಅವಹೇಳನಕಾರಿ, ಮಾನಹಾನಿಕರ, ಅಪಪ್ರಚಾರಾತ್ಮಕ ವಿಮರ್ಶೆಗಳು ಅಥವಾ ನೆಗೆಟಿವ್ ರೇಟಿಂಗ್‌ಗಳು ಸೇರಿದಂತೆ ಚಿತ್ರಕ್ಕೆ ಹಾನಿಯುಂಟು ಮಾಡುವ ಅಥವಾ ನಿರ್ಮಾಪಕರಿಗೆ ಯಾವುದೇ ರೀತಿಯ ಆರ್ಥಿಕ, ವಾಣಿಜ್ಯ ಹಾಗೂ ಗೌರವಕ್ಕೆ ಹಾನಿ ಮಾಡುವಂತಹ ವಿಷಯಗಳನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು ಅಥವಾ ಹರಡುವುದನ್ನು ಮಾಡುವಂತಿಲ್ಲ. ಹಾಗೇನಾದರೂ ಮಾಡಿದಲ್ಲಿ ಸಂಬಂಧಪಟ್ಟ ವ್ಯಕ್ತಿಗಳು, ಸಂಸ್ಥೆ, ಚಾನೆಲ್ ಗಳು ವೈಯಕ್ತಿಕವಾಗಿ ಸಂಪೂರ್ಣ ಹೊಣೆಗಾರರಾಗಿದ್ದು, ಅವರ ವಿರುದ್ಧ ಕಾನೂನು ಪ್ರಕಾರ ಸಿವಿಲ್ ಹಾಗೂ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲು ಅವಕಾಶವಿದೆ’ ಎಂದು ಬರೆಯಲಾಗಿದೆ.
‘ಈಗಾಗಲೇ ಪ್ರಕಟಗೊಂಡಿರುವ ಇಂತಹ ಎಲ್ಲ ವಿಷಯಗಳನ್ನು ತೆಗೆದುಹಾಕಿ ನಿಷ್ಕ್ರಿಯಗೊಳಿಸಬೇಕು. ಇಲ್ಲವಾದಲ್ಲಿ ಅಗತ್ಯವಿದ್ದರೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿ ಬಂಧನ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬರೆಯಲಾಗಿದೆ.
ಇದನ್ನೂ ಓದಿ: ಸೋಮವಾರವೂ ‘ಮಾರ್ಕ್’, ‘45’ ಅಬ್ಬರದ ಕಲೆಕ್ಷನ್; ‘ಡೆವಿಲ್’ ಕಥೆ ಏನು?
‘ಡೆವಿಲ್’ ಚಿತ್ರದಲ್ಲಿ ಡಬಲ್ ಶೇಡ್ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಒಳ್ಳೆಯ ಹಾಗೂ ಕೆಟ್ಟ ಪಾತ್ರ ಎರಡನ್ನೂ ಮಾಡಿರುವುದರಿಂದ ಅವರ ಅಭಿಮಾನಿಗಳಿಗೆ ಇದು ಧಮಾಕಾ ಆಗಿದೆ. ಒಂದೇ ಇತ್ರದಲ್ಲಿ ಎರಡು ಶೇಡ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.