ನನ್ನ ಬರವಣಿಗೆಯನ್ನೂ ಮೆಚ್ಚಬೇಕು; ಸಿಲ್ಲಿ ಲಲ್ಲಿಯಲ್ಲಿ ಹೇಳಿದ್ದ ಯಶ್
ಯಶ್ KGF 2 ಯಶಸ್ಸಿನ ನಂತರ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಆದರೆ, ಅವರಿಗೆ ಬರವಣಿಗೆಯ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. "ನನ್ನ ಬರವಣಿಗೆಯನ್ನೂ ಮೆಚ್ಚಬೇಕು" ಎಂಬ ಅವರ ಹಳೆಯ ಮಾತು ಈಗ ನಿಜವಾಗಿದೆ. ತಮ್ಮ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರಕ್ಕೆ ಸ್ವತಃ ಕಥೆ ಬರೆಯುವ ಮೂಲಕ ಯಶ್ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಈ ಮೂಲಕ ಅವರು ನಟನೆ ಜೊತೆಗೆ ಕಥೆಗಾರನಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ.

ನಟ ಯಶ್ ಅವರ ಖ್ಯಾತಿ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದವರು. ‘ಕೆಜಿಎಫ್ 2’ ಬಳಿಕ ಅವರ ಜನಪ್ರಿಯತೆ ಬೇರೆಯದೇ ಹಂತಕ್ಕೆ ಹೋಗಿದೆ. ಈ ಚಿತ್ರಕ್ಕೆ ಅವರು ಕೂಡ ಕಥೆ ಬರೆದಿದ್ದಾರೆ. ಅವರಿಗೆ ಬರವಣಿಗೆ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿದ್ದು ಯಶ್ ಅವರು ನೀಡಿದ ಹೇಳಿಕೆ.
ಯಶ್ ಅವರು ಈಗ ದೊಡ್ಡ ಸ್ಟಾರ್ ಆಗಿ ಬೆಳೆದಿರಬಹುದು. ಆದರೆ, ಅಂದು ಅವರು ಆ ರೀತಿ ಇರಲಿಲ್ಲ. ಅವರು ಕಿರುತೆರೆಯಲ್ಲಿ ನಟಿಸುತ್ತಿದ್ದರು. ಕಿರುತೆರೆಯಿಂದ ಹಿರಿ ತೆರೆಗೆ ಕಾಲಿಟ್ಟರು. ಆ ಬಳಿಕ ಯಶ್ ಅವರನ್ನು ತಡೆಯುವವರೇ ಯಾರೂ ಇಲ್ಲ ಎಂಬಂತಾಯಿತು. ಪರಭಾಷೆಯಲ್ಲೂ ಯಶ್ ಬ್ಯುಸಿ ಇದ್ದಾರೆ. ಅವರು ಒಂದು ವಿಡಿಯೋ ಈಗ ವೈರಲ್ ಆಗಿದೆ.
‘ಸಾಹಿತ್ಯನ ಮೆಚ್ಚಬೇಕು, ಸ್ವಂತ ಬರೆಯಬೇಕು’ ಎಂದು ಧಾರಾವಾಹಿಯಲ್ಲಿ ಹೇಳಲಾಗುತ್ತದೆ. ‘ಹೃದಯ ಮಾತ್ರವಲ್ಲ, ನನ್ನ ಬರವಣಿಗೆಯನ್ನೂ ಜನರು ಮೆಚ್ಚಬೇಕು’ ಎಂದು ಯಶ್ ಹೇಳುತ್ತಾರೆ. ಈಗ ಆ ಮಾತು ನಿಜವಾಗಿದೆ. ಯಶ್ ಅವರು ‘ಟಾಕ್ಸಿಕ್’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ಕಥೆ ಯಾವ ರೀತಿಯಲ್ಲಿ ಇರುತ್ತದೆ ಎಂಬ ಕುತೂಹಲ ಮೂಡಿದೆ.
View this post on Instagram
‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರ ಗೆಲ್ಲುವ ಭರವಸೆ ಅಭಿಮಾನಿಗಳಿಗೆ ಇದೆ. ಈ ಚಿತ್ರಕ್ಕೆ ಗೀತು ಮೋಹನ್ದಾಸ್ ನಿರ್ದೇಶನ ಇದೆ. ಕನ್ನಡ ಮಾತ್ರವಲ್ಲದೆ, ಇಂಗ್ಲಿಷ್ನಲ್ಲೂ ಸಿನಿಮಾ ಶೂಟ್ ಆಗಿದೆ. ಪರಭಾಷೆಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಾ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



