AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧನ್ವೀರ್ ಒಂದು ದಿನವೂ ಬಂದಿಲ್ಲ’: ದರ್ಶನ್ ಪರ ವಕೀಲ

ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವೆ ಮುನಿಸು ಬೀದಿ ಜಗಳವಾಗಿ ಮಾರ್ಪಟ್ಟಿದೆ. ಇದರ ನಡುವೆ ಆಡಿಯೋ ಒಂದು ವೈರಲ್ ಆಗಿದ್ದು, ಆಡಿಯೋನಲ್ಲಿ ಮಾತನಾಡಿರುವ ಧನ್ವೀರ್ ಆಪ್ತನೊಬ್ಬ, ‘ವಿಜಯಲಕ್ಷ್ಮಿ ಅವರಿಗೆ ದರ್ಶನ್ ಅನ್ನು ಹೊರಗೆ ಕರೆದುಕೊಂಡು ಬರಲು ಇಷ್ಟವೇ ಇಲ್ಲ’ ಎಂದಿದ್ದಾರೆ. ಆ ಆಡಿಯೋ ವೈರಲ್ ಆದ ಬೆನ್ನಲ್ಲೆ ದರ್ಶನ್ ಪರ ವಕೀಲರ ತಂಡದ ಸದಸ್ಯರೊಬ್ಬರು ಟಿವಿ9 ಜೊತೆಗೆ ಮಾತನಾಡಿದ್ದು, ವಿಜಯಲಕ್ಷ್ಮಿ ಅವರು ಪಡುತ್ತಿರುವ ಶ್ರಮದ ಬಗ್ಗೆ ವಿವರಿಸಿದ್ದಾರೆ.

‘ಧನ್ವೀರ್ ಒಂದು ದಿನವೂ ಬಂದಿಲ್ಲ’: ದರ್ಶನ್ ಪರ ವಕೀಲ
Dhanveer Vijayalakshmi
ಮಂಜುನಾಥ ಸಿ.
|

Updated on: Oct 24, 2026 | 8:19 PM

Share

ಮುಖ್ಯಾಂಶಗಳು

  • ವಿಜಯಲಕ್ಷ್ಮಿ ಪರ ಬೆಂಬಲಕ್ಕೆ ನಿಂತ ದರ್ಶನ್ ಪರ ವಕೀಲ
  • ವಿಜಯಲಕ್ಷ್ಮಿ ಪಡುತ್ತಿರುವ ಕಷ್ಟ ನಮಗೆ ಗೊತ್ತು
  • ಧನ್ವೀರ್ ಒಂದು ದಿನವೂ ತಲೆಕೆಡಿಸಿಕೊಂಡಿಲ್ಲ

ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವಿನ ಮುನಿಸು ಬೀದಿ ಜಗಳವಾಗಿ ಮಾರ್ಪಟ್ಟಿದೆ. ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಆಪ್ತರು ಕೆಲವರು ದೂರುಗಳನ್ನು ದಾಖಲಿಸಿದ್ದಾರೆ. ಧನ್ವೀರ್ ತಂದೆಯೂ ಸಹ ವಿಜಯಲಕ್ಷ್ಮಿ ವಿರುದ್ಧ ದೂರು ನೀಡಿದ್ದಾರೆ. ಇದರ ನಡುವೆ ಆಡಿಯೋ ಒಂದು ವೈರಲ್ ಆಗಿದ್ದು, ಆಡಿಯೋನಲ್ಲಿ ಮಾತನಾಡಿರುವ ಧನ್ವೀರ್ ಆಪ್ತನೊಬ್ಬ, ‘ವಿಜಯಲಕ್ಷ್ಮಿ ಅವರಿಗೆ ದರ್ಶನ್ ಅನ್ನು ಹೊರಗೆ ಕರೆದುಕೊಂಡು ಬರಲು ಇಷ್ಟವೇ ಇಲ್ಲ’ ಎಂದಿದ್ದಾರೆ. ಆ ಆಡಿಯೋ ವೈರಲ್ ಆದ ಬೆನ್ನಲ್ಲೆ ದರ್ಶನ್ ಪರ ವಕೀಲರ ತಂಡದ ಸದಸ್ಯರೊಬ್ಬರು ಟಿವಿ9 ಜೊತೆಗೆ ಮಾತನಾಡಿದ್ದು, ವಿಜಯಲಕ್ಷ್ಮಿ ಅವರು ಪಡುತ್ತಿರುವ ಶ್ರಮದ ಬಗ್ಗೆ ವಿವರಿಸಿದ್ದಾರೆ.

ದರ್ಶನ್ ಪರವಾಗಿ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸುತ್ತಿದ್ದು, ಅವರ ತಂಡದಲ್ಲಿರುವ ಮುಬಾರಕ್ ಎಂಬ ಯುವ ವಕೀಲರು ಮಾತನಾಡಿದ್ದು, ‘ವಿಜಯಲಕ್ಷ್ಮಿ ಅವರು ದರ್ಶನ್ ಅವರನ್ನು ಬಿಡಿಸಿ ತರಲು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಅವರ ಬಗ್ಗೆ ಹೀಗೆ ನಾಲಗೆ ಹರಿಯ ಬಿಡುವುದು ಸರಿಯಲ್ಲ. ಇದೆಲ್ಲ ಬಾಯಿ ಚಪಲಕ್ಕಾಗಿ ಹೇಳಿರುವ ಮಾತುಗಳು’ ಎಂದು ಕಟುವಾಗಿ ಟೀಕೆ ಮಾಡಿದ್ದಾರೆ. ಅಲ್ಲದೆ ಧನ್ವೀರ್ ಬಗ್ಗೆಯೂ ಮಾತನಾಡಿರುವ ವಕೀಲ ಮುಬಾರಕ್, ‘ಧನ್ವೀರ್ ಒಂದು ದಿನವೂ ಕಚೇರಿಗೆ ಬಂದು ನಮ್ಮನ್ನು ಭೇಟಿ ಆಗಿಲ್ಲ’ ಎಂದಿದ್ದಾರೆ.

‘ಈ ಘಟನೆಯಿಂದ (ದರ್ಶನ್ ಜೈಲುವಾಸ) ಪತ್ನಿ ವಿಜಯಲಕ್ಷ್ಮಿ, ಅವರ ಮಗ, ಸಹೋದರ ದಿನಕರ್, ತಾಯಿ ಮೀನಾ ಅವರಿಗೆ ಎಷ್ಟು ನೋವಾಗಿದೆ. ಅವರುಗಳು ಪರಿತಪಿಸುತ್ತಿದ್ದಾರೆ ಎಂಬುದು ನಮಗೆ (ವಕೀಲರ ತಂಡಕ್ಕೆ) ಗೊತ್ತಿದೆ. ಏಕೆಂದರೆ ಈ ಪ್ರಕರಣದ ಕಾರಣಕ್ಕೆ ನಾವು ಅವರೊಟ್ಟಿಗೆ ಪದೇ ಪದೇ ಸಂವಾದ ಮಾಡುತ್ತಲೇ ಇದ್ದೀವಿ. ಯಾರೋ ಕೆಲವರು ತಮ್ಮ ಸ್ವಹಿತಾಸಕ್ತಿಗೆ, ಲಾಭಕ್ಕಾಗಿ ವಿಜಯಲಕ್ಷ್ಮಿ ಅವರ ಬಗ್ಗೆ ಇಲ್ಲದ ಆರೋಪ ಮಾಡುವುದು ಸರಿಯಲ್ಲ. ಈಗ ದರ್ಶನ್ ಪ್ರಕರಣವನ್ನು ವಾದಿಸುತ್ತಿರುವ ಹಷ್ಮತ್ ಪಾಷಾ ಅವರನ್ನು ನೇಮಕ ಮಾಡುವಾಗ ವಿಜಯಲಕ್ಷ್ಮಿ ಅವರಿಗೆ ಎಷ್ಟು ಕಷ್ಟವಾಯಿತು, ಅದನ್ನು ಅವರು ಹೇಗೆ ನಿಭಾಯಿಸಿದರು ಎಂಬುದನ್ನು ನಾನು ಖುದ್ದು ಕಂಡಿದ್ದೇನೆ’ ಎಂದು ಮುಬಾರಕ್ ಹೇಳಿದ್ದಾರೆ.

ಇದನ್ನೂ ಓದಿ:ಮನೆಗೆ ನುಗ್ಗಿ ಬೆದರಿಕೆ, ವಿಜಯಲಕ್ಷ್ಮಿ ವಿರುದ್ಧ ಧನ್ವೀರ್ ತಂದೆಯಿಂದ ದೂರು ದಾಖಲು

‘ಈ ಪ್ರಕರಣದ ತಮಗೆ ಗೊತ್ತಿರುವ ವಿವರ ನೀಡಲು ನಮ್ಮ ಕಚೇರಿಯಲ್ಲಿ ಅವರು ಹಲವಾರು ಬಾರಿ ನಾಲ್ಕೈದು ಗಂಟೆಗಳ ಕಾಲ ಕೂತಿದ್ದಾರೆ. ಸಮಯದ ಪರಿವೆ ಇಲ್ಲದೆ ನಮ್ಮೊಂದಿಗೆ ಕೆಲಸ ಮಾಡಿದ್ದಾರೆ. ದರ್ಶನ್​​ ಬಗ್ಗೆ ಕಾಳಜಿ ಇಲ್ಲದೇ ಇದ್ದಿದ್ದರೆ ಅವರು ಹಾಗೆ ನಮ್ಮೊಂದಿಗೆ ಕೂರುತ್ತಾರಾ? ಮೂಟೆ ಹೊರುವವನಿಗಷ್ಟೆ ಅದರ ಭಾರ ಗೊತ್ತಿರುತ್ತದೆ. ತಲೆಯಲ್ಲಿ ಮೆದುಳಿಲ್ಲದವರು ಆಡುವ ಮಾತುಗಳಿಗೆ ಯಾರೂ ಗಮನ ಕೊಡಬಾರದು’ ಎಂದು ಮುಬಾರಕ್ ಹೇಳಿದ್ದಾರೆ. ಅಲ್ಲದೆ, ‘ನಮಗೆ ಪ್ರಕರಣ ಹಸ್ತಾಂತರ ಆದ ಬಳಿಕ ಧನ್ವೀರ್ ಅವರು ಈ ವರೆಗೆ ಒಮ್ಮೆಯೂ ಸಹ ನಮ್ಮ ಕಚೇರಿಗೆ ಬಂದಿಲ್ಲ, ನಮ್ಮೊಂದಿಗೆ ಚರ್ಚಿಸಿಲ್ಲ’ ಎಂದು ಸಹ ಮುಬಾರಕ್ ಸ್ಪಷ್ಟಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ