ಮತ್ತೆ ಒಂದಾದ ‘ಪೊಗರು’ ಜೋಡಿ; ಧ್ರುವ ಸರ್ಜಾಗೆ ನಂದ ಕಿಶೋರ್ ಆ್ಯಕ್ಷನ್ ಕಟ್

'ಪೊಗರು' ಸಿನಿಮಾ ನಂತರ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದ ಕಿಶೋರ್ ಕಾಂಬಿನೇಷನ್ ಮತ್ತೆ ಒಂದಾಗಿದೆ. ಧ್ರುವ ಸರ್ಜಾ ಅವರ ಜನ್ಮದಿನದ ಅಂಗವಾಗಿ ಅಕ್ಟೋಬರ್ 6ರಂದು ಈ ಹೊಸ ಸಿನಿಮಾದ ಪ್ರೊಮೊ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಮತ್ತು ಕಾತುರವನ್ನು ಹೆಚ್ಚಿಸಿದೆ.

ಮತ್ತೆ ಒಂದಾದ ‘ಪೊಗರು’ ಜೋಡಿ; ಧ್ರುವ ಸರ್ಜಾಗೆ ನಂದ ಕಿಶೋರ್ ಆ್ಯಕ್ಷನ್ ಕಟ್
ನಂದ ಕಿಶೋರ್-ಧ್ರುವ

Updated on: Oct 02, 2026 | 1:01 PM

ಮುಖ್ಯಾಂಶಗಳು

  • 'ಪೊಗರು' ಕಾಂಬಿನೇಷನ್ ರೀ-ಯೂನಿಯನ್
  • ಧ್ರುವ ಸರ್ಜಾ ಜನ್ಮದಿನಕ್ಕೆ ಸಿಗುತ್ತಾ ಬಿಗ್ ಸರ್ಪ್ರೈಸ್?
  • ಸೈಲೆಂಟ್‌‌ಆಗಿ ನಡೀತಿದೆ ಪ್ರೊಮೊ ಶೂಟ್

ಧ್ರುವ ಸರ್ಜಾ ಹಾಗೂ ನಂದ ಕಿಶೋರ್ ಕಾಂಬಿನೇಷನ್​ನಲ್ಲಿ ‘ಪೊಗರು’ ಸಿನಿಮಾ ತೆರೆಗೆ ಬಂದಿತ್ತು. ಕೊವಿಡ್ ಅಲೆಯ ಮಧ್ಯೆ ಈ ಚಿತ್ರ ತೆರೆಗೆ ಬಂದಿತ್ತು. 2021ರ ಫೆಬ್ರವರಿ 19ರಂದು ಈ ಸಿನಿಮಾ ಬಿಡುಗಡೆ ಕಂಡಿತ್ತು. ಈಗ ಈ ಕಾಂಬಿನೇಷನ್ ಮತ್ತೆ ಒಂದಾಗಿದೆ. ಅಕ್ಟೋಬರ್ 6ರಂದು ಧ್ರುವ ಸರ್ಜಾ ಜನ್ಮದಿನ. ಈ ವಿಶೇಷ ದಿನಕ್ಕೆ ಈ ಚಿತ್ರ ಘೋಷಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

‘ಪೊಗರು’ ಚಿತ್ರದಲ್ಲಿ ಧ್ರುವ ಸರ್ಜಾ ಅವರು ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಅವರು ಈ ಚಿತ್ರಕ್ಕಾಗಿ ಭರ್ಜರಿಯಾಗಿ ಟ್ರಾನ್ಸ್​ಫಾರ್ಮೇಷನ್ ಮಾಡಿಕೊಂಡಿದ್ದರು. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದರು. ಒಂದು ವರ್ಗದ ಜನರು ಈ ಚಿತ್ರವನ್ನು ಇಷ್ಟಪಟ್ಟರೆ, ಇನ್ನೊಂದು ವರ್ಗದ ಜನರು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ನೀಡಿದ್ದರು. ಈಗ ಮತ್ತೊಮ್ಮೆ ಧ್ರುವ-ನಂದ ಕಿಶೋರ್ ಕಾಂಬಿನೇಷನ್ ಬರಲು ರೆಡಿ ಆಗಿದೆ.

ಸದ್ಯ ಸಿನಿಮಾದ ಪ್ರೋಮೊ ಶೂಟ್ ನಡೆಯುತ್ತಿದೆ ಎಂದು ವರದಿ ಆಗಿದೆ. ಜನ್ಮದಿನಕ್ಕೆ ಅಭಿಮಾನಿಗಳಿಗೆ ಹಬ್ಬ ಉಣಿಸಲು ಧ್ರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಯಾರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಇನ್ನೂ ಯಾರೆಲ್ಲ ನಟಿಸುತ್ತಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ರಿವೀಲ್ ಆಗಬೇಕಿದೆ. ಈ ಸಿನಿಮಾ ಕೂಡ ಮಾಸ್ ಆ್ಯಕ್ಷನ್​ನಿಂದ ಕೂಡಿರಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಧ್ರುವ ಸರ್ಜಾ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಕೆಡಿ’ ಸಿನಿಮಾದಲ್ಲಿ. ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ನಿರೀಕ್ಷೆ ತಲುಪುವಲ್ಲಿ ಸಿನಿಮಾ ಬಳಿ ಸಾಧ್ಯವಾಗಿಲ್ಲ. ಇನ್ನು ನಂದ ಕಿಶೋರ್ ನಿರ್ದೇಶನದ ಮಲಯಾಳಂ ಸಿನಿಮಾ ‘ವೃಷಭ’ ಹೀನಾಯ ಸೋಲು ಕಂಡಿತು. ಹೀಗಾಗಿ, ಇಬ್ಬರೂ ಮುಂದಿನ ಚಿತ್ರದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.

ಇದನ್ನೂ ಓದಿ: ಧ್ರುವ ಸರ್ಜಾ ಸಿನಿಮಾದಿಂದ ಹೊರ ಬರುವ ದೃಢನಿರ್ಧಾರ ಮಾಡಿದ ನಿರ್ದೇಶಕ ಸೂರಿ

ಅಭಿಮಾನಿಗಳ ಕೊರಗು

ಈ ಮೊದಲು ಧ್ರುವ ಅವರು ಸೂರಿ ಜೊತೆ ಸಿನಿಮಾ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರುತ್ತಿಲ್ಲ. ಈ ವಿಷಯ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಧ್ರುವ ಅವರು ಈ ಚಿತ್ರದಲ್ಲಿ ನಟಿಸಬೇಕಿತ್ತು ಎಂದು ಅನೇಕರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us