ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಕುರಿತಾಗಿ ಧ್ರುವ ಸರ್ಜಾ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಇದು ಅವರ ವೃತ್ತಿ ಜೀವನದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಹೊರರಾಜ್ಯಗಳಿಗೂ ಹೋಗಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾವನ್ನು ಪ್ಯಾನ್ ವರ್ಲ್ಡ್ ಎಂದು ಸಹ ಚಿತ್ರತಂಡ ಘೋಷಣೆ ಮಾಡಿದ್ದು, ಕೆಲವು ವಿದೇಶಿ ಪತ್ರಕರ್ತರನ್ನು ಕರೆಸಿ ಪ್ರೆಸ್ಮೀಟ್ ಮಾಡಿ ಟ್ರೈಲರ್ ಬಿಡುಗಡೆ ಮಾಡಿತ್ತು. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸಿನಿಮಾದ ಬಜೆಟ್ ಬಗ್ಗೆ ಮಾತನಾಡಿರುವ ಧ್ರುವ ಸರ್ಜಾ, ಸಿನಿಮಾ ಬಿಡುಗಡೆ ಮುಂಚೆ ಅಂದರೆ ಪ್ರೀರಿಲೀಸ್ ಕಲೆಕ್ಷನ್ ಎಷ್ಟಾಗಿದೆ ಎಂಬುದನ್ನು ಸಹ ಹೇಳಿದ್ದಾರೆ.
ಕನ್ನಡದ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಧ್ರುವ ಸರ್ಜಾಗೆ ‘ಮಾರ್ಟಿನ್’ ಸಿನಿಮಾ ಬಜೆಟ್ ಮತ್ತು ಪ್ರೀ ರಿಲೀಸ್ ಬ್ಯುಸಿನೆಸ್ ಬಗ್ಗೆ ಪ್ರಶ್ನೆ ಎದುರಾಯ್ತು. ಇದಕ್ಕೆ ಉತ್ತರಿಸಿದ ಧ್ರುವ ಸರ್ಜಾ, ‘ಸಿನಿಮಾಕ್ಕೆ ಸುಮಾರು 75 ಕೋಟಿ ಬಂಡವಾಳ ಹಾಕಲಾಗಿದೆ’ ಎಂದು ಮಾಹಿತಿ ನೀಡಿದರು. ಸಿನಿಮಾದ ಪ್ರೀ ರಿಲೀಸ್ ಎಷ್ಟಾಗಿರಬಹುದು ಎಂದಿದ್ದಕ್ಕೆ, ‘ಸಿನಿಮಾಕ್ಕೆ ಹಾಕಿರುವ ಬಂಡವಾಳ ಈಗಾಗಲೇ ವಾಪಸ್ ಬಂದು ಬಿಟ್ಟಿದೆ. ಸಿನಿಮಾದ ಹಕ್ಕುಗಳು ಒಳ್ಳೆ ಬೆಲೆಗೆ ಮಾರಾಟ ಆಗಿವೆ’ ಎಂದಿದ್ದಾರೆ. ಅಲ್ಲಿಗೆ ಧ್ರುವ ನೀಡಿರುವ ಮಾಹಿತಿ ಪ್ರಕಾರ, ಸಿನಿಮಾದ ಒಟಿಟಿ ಹಕ್ಕು, ಆಡಿಯೋ ಹಕ್ಕು, ರೀಮೇಕ್ ಹಕ್ಕು, ಡಬ್ಬಿಂಗ್ ಹಕ್ಕುಗಳಿಂದಲೇ ಸಿನಿಮಾ 75ಕೋಟಿ ಹಣ ಕಲೆಕ್ಷನ್ ಮಾಡಿಬಿಟ್ಟಿದೆ. ಇನ್ನು ಚಿತ್ರಮಂದಿರದಿಂದ ಬರುವ ಕಲೆಕ್ಷನ್ ಎಲ್ಲ ಲಾಭವಷ್ಟೆ ಎಂದಿದ್ದಾರೆ ಧ್ರುವ.
ಇದನ್ನೂ ಓದಿ:‘ಮಾರ್ಟಿನ್’ ವಿವಾದ; ನಿರ್ದೇಶಕ ಎಪಿ ಅರ್ಜುನ್ಗೆ ಗೆಲುವು
ಸಿನಿಮಾಕ್ಕಾಗಿ ಸುಮಾರು 3 ವರ್ಷ ಧ್ರುವ ಸರ್ಜಾ ಕೆಲಸ ಮಾಡಿದ್ದಾರೆ. ಸಿನಿಮಾದ ನಿರ್ಮಾಣ ಪ್ರಾರಂಭವಾಗಿ ಅಷ್ಟೆ ಸಮಯವಾಗಿದೆ. ಹಾಗಾಗಿ ಸಿನಿಮಾದ ಬಜೆಟ್ ಸಾಮಾನ್ಯಕ್ಕಿಂತಲೂ ತುಸು ಹೆಚ್ಚಾಗಿದೆ. ಸಿನಿಮಾದ ವಿಎಫ್ಎಕ್ಸ್, ಗ್ರಾಫಿಕ್ಸ್ ವಿಚಾರದಲ್ಲಿ ಸಂಸ್ಥೆಯೊಂದು ನಿರ್ಮಾಪಕರಿಗೆ ಮೋಸ ಮಾಡಿದ್ದು ಇನ್ನಿತರೆ ಕಾರಣಗಳಿಂದಾಗಿ ಸಿನಿಮಾದ ಬಜೆಟ್ ತುಸು ಹೆಚ್ಚಾಗಿ 75 ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಮೇಲೆ ಭಾರಿ ಹಣವನ್ನು ನಿರ್ಮಾಪಕ ಉದಯ್ ಮೆಹ್ತಾ ಮಾಡುತ್ತಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯ, ದೇಶಗಳಲ್ಲಿಯೂ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ ಎನ್ನಲಾಗುತ್ತಿದೆ.
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ರಂದು ತೆರೆಗೆ ಬರಲಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಉದಯ್ ಮೆಹ್ತಾ ಬಂಡವಾಳ ಹೂಡಿದ್ದಾರೆ. ಸುಮಾರು ಮೂರು ವರ್ಷಗಳಿಂದಲೂ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿ ಕೆಲ ವಿದೇಶಿ ನಟರು ಸಹ ನಟಿಸಿದ್ದಾರೆ. ಸಿನಿಮಾದ ನಾಯಕಿಯಾಗಿ ಅನ್ವೇಷಿ ಜೈನ್, ವೈಭವಿ ಶಾಂಡಿಲ್ಯ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ