ಧ್ರುವ ಸರ್ಜಾ ಸಿನಿಮಾಗೆ ಕಾಂಪಿಟೇಷನ್ ಕೊಡಲು ಬಂದ ಟಾಲಿವುಡ್ ಸುಂದರಿ

ಧ್ರುವ ಸರ್ಜಾ ಅವರ 'ಕೆಡಿ' ಸಿನಿಮಾ ಏಪ್ರಿಲ್ 30ರಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರಕ್ಕೆ ಪೈಪೋಟಿ ನೀಡಲು ಸಮಂತಾ ರುತ್ ಪ್ರಭು ನಟನೆಯ 'ಮಾ ಇಂಟಿ ಬಂಗಾರಂ' ಸಿನಿಮಾ ಏಪ್ರಿಲ್ 30ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಸಮಂತಾ ವಿವಾಹದ ನಂತರದ ಮೊದಲ ಚಿತ್ರ ಇದಾಗಿದ್ದು, ಕಾರ್ಮಿಕರ ದಿನಾಚರಣೆ ರಜೆಯ ಲಾಭ ಪಡೆಯಲು ಸಿನಿಮಾ ಮುಂದಾಗಿದೆ.

ಧ್ರುವ ಸರ್ಜಾ ಸಿನಿಮಾಗೆ ಕಾಂಪಿಟೇಷನ್ ಕೊಡಲು ಬಂದ ಟಾಲಿವುಡ್ ಸುಂದರಿ
ಸಮಂತಾ-ಧ್ರುವ
Edited By:

Updated on: Mar 30, 2026 | 4:50 PM

ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ ಸಿನಿಮಾ ಏಪ್ರಿಲ್ 30ರಂದು ರಿಲೀಸ್ ಆಗಲು ರೆಡಿ ಆಗಿದೆ. ಅಂದರೆ ಇಂದಿಗೆ ಸರಿಯಾಗಿ ಒಂದು ತಿಂಗಳಿಗೆ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರವನ್ನು ಕೆವಿಎನ್ ನಿರ್ಮಾಣ ಸಂಸ್ಥೆ ನಿರ್ಮಿಸಿದೆ. ಈ ಚಿತ್ರಕ್ಕೆ ಧ್ರುವ ಹೀರೋ ಆದರೆ, ಶಿಲ್ಪಾ ಶೆಟ್ಟಿ ನಾಯಕಿ. ಈ ಸಿನಿಮಾಗೆ ಕಾಂಪಿಟೇಷನ್ ಕೊಡಲು ಟಾಲಿವುಡ್ ಸುಂದರಿಯ ಆಗಮನ ಆಗುತ್ತಿದೆ ಎಂದು ವರದಿ ಆಗಿದೆ. ಅದುವೇ ಸಮಂತಾ ರುತ್ ಫ್ರಭು.

2023ರಲ್ಲಿ ‘ಖುಷಿ’ ಸಿನಿಮಾ ಬಳಿಕ ಸಮಂತಾ ರುತ್ ಪ್ರಭು ಅವರು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಅಂದಿನಿಂದ ಇಂದಿನವರಿಗೆ ಅವರು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡರು. ಈಗ ರಾಜ್ ನಿಧಿಮೋರು ಅವರ ಜೊತೆ ಸಮಂತಾ ವಿವಾಹ ಆಗಿದ್ದಾರೆ. ವಿವಾಹದ ಬಳಿಕ ಅವರ ಮೊದಲ ಸಿನಿಮಾ ರಿಲೀಸ್ ಆಗುತ್ತಿದೆ. ಅದು ಕೂಡ ‘ಕೆಡಿ’ ಸಿನಿಮಾ ಎದುರು.

ನಂದಿನಿ ರೆಡ್ಡಿ ನಿರ್ದೇಶನದ, ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಕ್ರೈಮ್ ಆ್ಯಕ್ಷನ್ ಶೈಲಿಯಲ್ಲಿ ಮೂಡಿ ಬರುತ್ತಿದೆ. ಈ ಚಿತ್ರ ಮೇ 15ಕ್ಕೆ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ. ಆದರೆ, ಏಪ್ರಿಲ್ 30ರಂದು ರಿಲೀಸ್ ಆಗಬೇಕಿದ್ದ, ‘ಪೆದ್ದಿ’ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ‘ಮಾ ಇಂಟಿ ಬಂಗಾರಂ’ ಚಿತ್ರವನ್ನು ಪ್ರೀಪೋನ್ಡ್​ ಮಾಡಲು ತಂಡ ಪ್ಲ್ಯಾನ್ ರೂಪಿಸಿದೆ.

ಇದನ್ನೂ ಓದಿ: ಪ್ರತಿ ಭಾನುವಾರ ಫ್ಯಾನ್ಸ್ ಭೇಟಿ ಮಾಡೋದು ಯಾಕೆ? ಕಾರಣ ತಿಳಿಸಿದ ಧ್ರುವ ಸರ್ಜಾ

ಮೇ 1 ಕಾರ್ಮಿಕರ ದಿನಾಚರಣೆ ಪ್ರಯುಕ್ತ ರಜೆ ಇದೆ. ಈ ದಿನವನ್ನು ತಂಡದವರು ಪರಿಗಣಿಸುವ ಸಾಧ್ಯತೆ ಇದೆ. ಇದರಿಂದ ‘ಕೆಡಿ’ ಸಿನಿಮಾಗೆ ರಾಜ್ಯದಲ್ಲಿ ಸಣ್ಣ ಮಟ್ಟದಲ್ಲಿ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ಮಾ ಇಂಟಿ ಬಂಗಾರಂ ಚಿತ್ರವನ್ನು ಸಮಂತಾ ಅವರೇ ನಿರ್ಮಿಸಿದ್ದಾರೆ. ಅವರ ಪತಿ ಕೂಡ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ. ಸಂತೋಷ್ ನಾರಾಯಣ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:08 pm, Mon, 30 March 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us