AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮವಾರದ ಪರೀಕ್ಷೆಯಲ್ಲಿ ‘ಧುರಂಧರ್ 2’ ಫಸ್ಟ್​​​ಕ್ಲಾಸ್​​ನಲ್ಲಿ ಪಾಸ್; ‘ಲವ್ ಮಾಕ್ಟೇಲ್ 3’ ಕಥೆ ಏನು?

ಮಾರ್ಚ್ 19ರಂದು ರಿಲೀಸ್ ಆದ 'ಧುರಂಧರ್ 2' ಸೋಮವಾರದ ಬಾಕ್ಸ್ ಆಫೀಸ್ ಪರೀಕ್ಷೆಯಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಮೊದಲ ಸೋಮವಾರವೇ 77 ಕೋಟಿ ರೂ. ಗಳಿಸಿ, ವಿಶ್ವ ಮಟ್ಟದಲ್ಲಿ ಒಟ್ಟು 751 ಕೋಟಿ ರೂ ಗಳಿಕೆ ಮಾಡಿದೆ. ಆದರೆ, 'ಲವ್ ಮಾಕ್ಟೇಲ್ 3' ಸೋಮವಾರದ ಕಲೆಕ್ಷಮ್ ಕೊಂಚ ತಗ್ಗಿದೆ. 'ಧುರಂಧರ್ 2' 'ಪುಷ್ಪ 2' ದಾಖಲೆ ಮುರಿಯುವ ಸಾಧ್ಯತೆ ಇದೆ.

ಸೋಮವಾರದ ಪರೀಕ್ಷೆಯಲ್ಲಿ ‘ಧುರಂಧರ್ 2’ ಫಸ್ಟ್​​​ಕ್ಲಾಸ್​​ನಲ್ಲಿ ಪಾಸ್; ‘ಲವ್ ಮಾಕ್ಟೇಲ್ 3’ ಕಥೆ ಏನು?
ಧುರಂಧರ್ 2-ಲವ್ ಮಾಕ್ಟೇಲ್ 3
ರಾಜೇಶ್ ದುಗ್ಗುಮನೆ
|

Updated on: Mar 24, 2026 | 7:09 AM

Share

ಯಾವುದೇ ಸಿನಿಮಾ ರಿಲೀಸ್ ಆದರೂ ಮೊದಲ ಮೂರುದಿನದ ಕಲೆಕ್ಷನ್ ಮೇಲೆ ಚಿತ್ರದ ಭವಿಷ್ಯ ನಿರ್ಧಾರ ಮಾಡೋದು ಕಷ್ಟ. ಮೊದಲ ಸೋಮವಾರ ಎಷ್ಟು ಕಲೆಕ್ಷನ್ ಮಾಡಿತು ಎಂಬುದು ಸಿನಿಮಾಗಳ ಪಾಲಿಗೆ ಬಹುಮುಖ್ಯವಾಗುತ್ತದೆ. ಸೋಮವಾರದ ಪರೀಕ್ಷೆಯಲ್ಲಿ ಪಾಸ್ ಆದರೆ ಸಿನಿಮಾ ಒಂದು ಹಂತಕ್ಕೆ ಗೆದ್ದಂತೆ. ಹಾಗಾದರೆ, ಮಾರ್ಚ್ 19ರಂದು ರಿಲೀಸ್ ಆದ ‘ಲವ್ ಮಾಕ್ಟೇಲ್ 3’ ಹಾಗೂ ‘ಧುರಂಧರ್ 2’ (Dhurandhar 2) ಚಿತ್ರಗಳು ಈ ಪರೀಕ್ಷೆಯಲ್ಲಿ ಪಾಸ್ ಆದವೇ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ‘ಧುರಂಧರ್ 2’

‘ಧುರಂಧರ್ 2’ ಸಿನಿಮಾ ಸೋಮವಾರ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಅಲ್ಲಿ ಪಾಸ್ ಆಗಿದೆ! ಹೌದು, ‘ಧುರಂಧರ್ ’ ಸಿನಿಮಾ ಮೊದಲ ನಾಲ್ಕು ದಿನಕ್ಕೆ 450 ಕೋಟಿ ರೂಪಾಯಿ ಗಳಿಕೆ ಮಾಡಿತು. ಸೋಮವಾರವೂ ಚಿತ್ರ ಅಬ್ಬರಿಸಿ, ಬೊಬ್ಬಿರಿದಿದೆ! ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಮೊದಲ ಸೋಮವಾರ ಈ ಚಿತ್ರ ಗಳಿಕೆ ಮಾಡಿದ್ದು 77 ಕೋಟಿ ರೂಪಾಯಿ. ಸಾಮಾನ್ಯವಾಗಿ ಬಾಲಿವುಡ್ ಸ್ಟಾರ್ ನಟರ ಸಿನಿಮಾಗಳ ಮೊದಲ ದಿನದ ಗಳಿಕೆ 50 ಕೋಟಿ ರೂಪಾಯಿ ದಾಟಿದರೆ ಅದು ಅದ್ಭುತ ಎನ್ನುವ ರೀತಿಯಲ್ಲಿ ಇತ್ತು. ಆದರೆ, ‘ಧುರಂಧರ್ 2’ ಈ ಕಲ್ಪನೆ ತಪ್ಪು ಎಂಬುದನ್ನು ಸಾಬೀತು ಮಾಡಿದೆ.

‘ಧುರಂಧರ್ 2’ ಚಿತ್ರದ ವಿಶ್ವ ಮಟ್ಟದ ಗಳಿಕೆ 751 ಕೋಟಿ ರೂಪಾಯಿ ಆಗಿದೆ. ಭಾರತದಲ್ಲಿ 541 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಚಿತ್ರದ ಗ್ರಾಸ್ ಕಲೆಕ್ಷನ್. ನೆಟ್ ಕಲೆಕ್ಷನ್ 519 ಕೋಟಿ ರೂಪಾಯಿ ಇದೆ. ಈವರೆಗೆ ಸಿನಿಮಾ 1,15,553 ಶೋಗಳನ್ನು ಪ್ರದರ್ಶನ ಕಂಡಿದೆ. ಈ ಚಿತ್ರ ‘ಪುಷ್ಪ 2’ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಭಾನುವಾರ ಭರ್ಜರಿ ಗಳಿಕೆ ಮಾಡಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಒಟ್ಟಾರೆ ಕಲೆಕ್ಷನ್ ಎಷ್ಟು?

‘ಲವ್ ಮಾಕ್ಟೇಲ್ 3’ ಚಿತ್ರದ ಗಳಿಕೆ ಸೋಮವಾರ ಕೋಟಿ ರೂಪಾಯಿ ಸಮೀಪಿಸಿದೆ. ಈ ಚಿತ್ರ ಸೋಮವಾರ 75 ಲಕ್ಷ ರೂಪಾಯಿ ಗಳಿಕೆ ಮಾಡಿದೆ ಎಂದು sacnilk ಹೇಳಿದೆ. ಈ ಚಿತ್ರಕ್ಕೆ ‘ಧುರಂಧರ್ 2’ ಸಿನಿಮಾದ ಎಫೆಕ್ಟ್ ಕೊಂಚ ತಟ್ಟಿರಬಹುದು ಎಂದು ಊಹಿಸಲಾಗಿದೆ. ಈ ಸಿನಿಮಾದ ಒಟ್ಟಾರೆ ಗ್ರಾಸ್ ಕಲೆಕ್ಷನ್ 6.65 ಕೋಟಿ ರೂಪಾಯಿ ಎಂಬುದು ವಿಶೇಷ. ಈ ಸಿನಿಮಾ ಮೇಲೆ ಕೃತಿ ಚೌರ್ಯದ ಆರೋಪ ಕೇಳಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ