ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಡಿವೋರ್ಸ್ ಪಡೆಯುತ್ತಾರೆ ಎಂಬ ಸುದ್ದಿ ಭರ್ಜರಿ ಚರ್ಚೆ ಆಗುತ್ತಿದೆ. ಈ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಅಭಿಷೇಕ್ ಹಾಗೂ ಐಶ್ವರ್ಯಾ ಒಟ್ಟಿಗೆ ಇಲ್ಲ ಎಂಬುದಕ್ಕೆ ಸಾಕಷ್ಟು ಆಧಾರಗಳು ಸಿಕ್ಕಿವೆ. ಈ ಮಧ್ಯೆ ವಿಚ್ಛೇದನ ತೆಗೆದುಕೊಳ್ಳೋದು ಯಾರಿಗೂ ಸುಲಭ ಅಲ್ಲ ಎಂಬ ಪೋಸ್ಟ್ನ ಅಭಿಷೇಕ್ ಬಚ್ಚನ್ ಅವರು ಲೈಕ್ ಮಾಡಿದ್ದಾರೆ. ಈ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದೆ.
ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ಜೊತೆ ಮದುವೆ ಆಗಿ ಹಲವು ವರ್ಷಗಳು ಕಳೆದಿವೆ. ಈಗ ಆರಾಧ್ಯಾ ಹೆಸರಿನ ಮಗಳು ಈ ದಂಪತಿಗೆ ಇದ್ದಾರೆ. ಐಶ್ವರ್ಯಾ ಅವರು ಮಗಳನ್ನು ಬೆಳೆಸೋ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಆರಾಧ್ಯಾ ಎಲ್ಲೇ ಹೋದರೂ ಐಶ್ವರ್ಯಾ ಜೊತೆಯೇ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅಂಬಾನಿ ಮನೆಯ ವಿವಾಹ ಕಾರ್ಯ ನಡೆದಿದೆ. ಈ ಮದುವೆಗೆ ಐಶ್ವರ್ಯಾ ರೈ ಅವರು ಮಗಳ ಜೊತೆ ಬಂದಿದ್ದಾರೆ. ಅತ್ತ ಅಭಿಷೇಕ್ ಅವರು ಅಮಿತಾಭ್ ಹಾಗೂ ಜಯಾ ಜೊತೆ ಬಂದಿದ್ದಾರೆ. ಎಲ್ಲರೂ ಪ್ರತ್ಯೇಕವಾಗಿ ಬಂದಿರೋದ ಚರ್ಚೆ ಹುಟ್ಟುಹಾಕಿದೆ.
ಲೇಖಕಿ ಹೀನಾ ಖಂಡೇವಾಲ ಅವರು ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್ ಡಿವೋರ್ಸ್ಗೆ ಸಂಬಂಧಿಸಿದೆ. ಇದಕ್ಕೆ ಅವರು ಕ್ಯಾಪ್ಶನ್ ಕೂಡ ನೀಡಿದ್ದಾರೆ. ‘ಡಿವೋರ್ಸ್ ಯಾರಿಗೂ ಸುಲಭ ಅಲ್ಲ. ಕೆಲವೊಮ್ಮೆ ನಾವು ನಿರೀಕ್ಷಿಸಿದಂತೆ ಜೀವನವು ತೆರೆದುಕೊಳ್ಳುವುದಿಲ್ಲ. ಒಟ್ಟಿಗೆ ಇದ್ದು ದಶಕಗಳ ನಂತರ ಬೇರ್ಪಟ್ಟಾಗ, ಪ್ರಮುಖ ವಿಷಯಗಳಿಗೆ ಪರಸ್ಪರ ಅವಲಂಬಿಸಿರುವ ನಂತರ ಹೇಗೆ ಜೀವನ ನಿಭಾಯಿಸುತ್ತಾರೆ? ಸಂಬಂಧಗಳನ್ನು ಕಡಿದುಕೊಳ್ಳಲು ಅವರನ್ನು ಯಾವುದು ಪ್ರೇರೇಪಿಸುತ್ತದೆ ಮತ್ತು ಅವರು ಯಾವ ಸವಾಲುಗಳನ್ನು ಎದುರಿಸುತ್ತಾರೆ? ಈ ಕಥೆಯು ಈ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ’ ಎಂದು ಬರೆಯಲಾಗಿದೆ.
ಅಭಿಷೇಕ್ ಬಚ್ಚನ್ ಅವರಿಗೆ ಈ ಪೋಸ್ಟ್ ಇಷ್ಟವಾಗಿದೆ. ಹೀಗಾಗಿ ಅವರು ಇದನ್ನು ಲೈಕ್ ಮಾಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇದನ್ನು ವೈರಲ್ ಮಾಡಲಾಗುತ್ತಿದೆ. ಅಭಿಷೇಕ್ ಜೀವನದಲ್ಲಿ ಏನೋ ಪ್ರಮುಖವಾದುದ್ದು ನಡೆಯಲಿದೆ ಎಂದು ಕೆಲವರು ಊಹಿಸಿದ್ದಾರೆ.
ಇದನ್ನೂ ಓದಿ: ಕೈ ಹಿಡಿಯದ ಹೀರೋ ಪಾತ್ರ; ವಿಲನ್ ಆಗಲು ಮುಂದಾದ ಅಭಿಷೇಕ್ ಬಚ್ಚನ್
ಅಭಿಷೇಕ್ ಬಚ್ಚನ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಮಗ ಎನ್ನುವ ಕಾರಣಕ್ಕೂ ಅವರಿಗೆ ಬೇಡಿಕೆ ಇದೆ. ಆದರೆ, ಅವರ ಸಿನಿಮಾಗಳು ಅಂದುಕೊಂಡ ರೀತಿಯಲ್ಲಿ ಯಶಸ್ಸು ಕಾಣುತ್ತಿಲ್ಲ ಅನ್ನೋದು ಬೇಸರದ ವಿಚಾರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.