ಕೈ ಹಿಡಿಯದ ಹೀರೋ ಪಾತ್ರ; ವಿಲನ್ ಆಗಲು ಮುಂದಾದ ಅಭಿಷೇಕ್ ಬಚ್ಚನ್
‘ಕಿಂಗ್’ ಸಿನಿಮಾ ಈ ವರ್ಷಾಂತ್ಯಕ್ಕೆ ಸೆಟ್ಟೇರೋ ಸಾಧ್ಯತೆ ಇದೆ. ಅಕ್ಟೋಬರ್ 2023ರಿಂದ ಇಲ್ಲಿಯವರೆಗೆ ಸುಜಯ್ ಘೋಷ್ ಅವರು ಅನೇಕ ಬಾರಿ ಶಾರುಖ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಈಗ ಕಥೆ ಫೈನಲ್ ಆಗಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎಂಬುದು ಗೊತ್ತಾಗಿದೆ.
ಅಭಿಷೇಕ್ ಬಚ್ಚನ್ ಅವರು ಹಲವು ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದಾರೆ. ಆದರೆ, ಹೇಳಿಕೊಳ್ಳುವಂಥ ದೊಡ್ಡ ಗೆಲುವು ಅವರಿಗೆ ಇತ್ತೀಚೆಗೆ ಸಿಕ್ಕಿಲ್ಲ. ಅವರು ವಿಲನ್ ಆಗಿಯೂ ಗಮನ ಸೆಳೆದಿದ್ದಾರೆ. ಈಗ ಅವರು ವಿಲನ್ ಪಾತ್ರಗಳಲ್ಲಿ ಮುಂದುವರಿಯಲು ನಿರ್ಧರಿಸಿದರೇ ಎನ್ನುವ ಪ್ರಶ್ನೆ ಮೂಡಿದೆ. ಸುಹಾನಾ ಹಾಗೂ ಶಾರುಖ್ ಖಾನ್ ಒಟ್ಟಾಗಿ ನಟಿಸುತ್ತಿರುವ ಸಿನಿಮಾದಲ್ಲಿ ಅಭಿಷೇಕ್ ವಿಲನ್ ಪಾತ್ರ ಮಾಡಲಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಶಾರುಖ್ ಖಾನ್ ಹಾಗೂ ಸುಹಾನಾ ಖಾನ್ ನಟನೆಯ ಮುಂದಿನ ಚಿತ್ರಕ್ಕೆ ‘ಕಿಂಗ್’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ಸುಜಯ್ ಘೋಷ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಿದ್ದಾರ್ಥ್ ಆನಂದ್ ಅವರು ಆ್ಯಕ್ಷನ್ ದೃಶ್ಯಗಳ ಬಗ್ಗೆ ಕಾಳಜಿವಹಿಸಲಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ವಿಲನ್ ಪಾತ್ರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಅಭಿಷೇಕ್ ಅವರು ಯಾವುದೇ ರೀತಿಯ ಪಾತ್ರ ಕೊಟ್ಟರೂ ಅದು ಮಾಡಿ ತೋರಿಸುತ್ತಾರೆ. ಅವರು ವಿಲನ್ ಪಾತ್ರ ಕೊಟ್ಟರೂ ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ‘ಕಿಂಗ್’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಲು ಅತ್ಯುತ್ತಮ ಕಲಾವಿದನ ಅವಶ್ಯಕತೆ ಇದೆ. ಈ ಕಾರಣದಿಂದಲೇ ಅಭಿಷೇಕ್ ಅವರಿಗೆ ಈ ಸಿನಿಮಾದ ಆಫರ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಅವರು ಪಾತ್ರದ ಬಗ್ಗೆ ಕೇಳುತ್ತಿದ್ದಂತೆ ಸಿನಿಮಾ ಒಪ್ಪಿಕೊಂಡರು ಎನ್ನಲಾಗಿದೆ. ಈ ಬಗ್ಗೆ ತಂಡದ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
‘ಕಿಂಗ್’ ಸಿನಿಮಾ ಈ ವರ್ಷಾಂತ್ಯಕ್ಕೆ ಸೆಟ್ಟೇರೋ ಸಾಧ್ಯತೆ ಇದೆ. ಅಕ್ಟೋಬರ್ 2023ರಿಂದ ಇಲ್ಲಿಯವರೆಗೆ ಸುಜಯ್ ಘೋಷ್ ಅವರು ಅನೇಕ ಬಾರಿ ಶಾರುಖ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಈಗ ಕಥೆ ಫೈನಲ್ ಆಗಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎಂಬುದು ಗೊತ್ತಾಗಿದೆ.
ಸುಹಾನಾ ಅವರು ‘ದಿ ಆರ್ಚೀಸ್’ ಸಿನಿಮಾದಲ್ಲಿ ನಟಿಸಿದ್ದರು. ಅವರ ಫ್ಲ್ಯಾಟ್ ಆ್ಯಕ್ಟಿಂಗ್ ನೋಡಿ ಎಲ್ಲರೂ ತೆಗಳಿದ್ದರು. ಅವರ ನಟನೆಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ‘ಕಿಂಗ್’ ಚಿತ್ರಕ್ಕೆ ಸುಹಾನಾ ಖಾನ್ ಅವರು ನಟನಾ ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಐಪಿಎಲ್ ಫೈನಲ್ ವೇಳೆ ಶಾರುಖ್ ಖಾನ್ ಧರಿಸಿದ ಈ ವಾಚ್ ಬೆಲೆ 11 ಕೋಟಿ ರೂಪಾಯಿ
ಶಾರುಖ್ ಖಾನ್ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಎರಡನೇ ಸಿನಿಮಾದಲ್ಲೇ ಹೋಂ ಬ್ಯಾನರ್ನಲ್ಲಿ ನಟಿಸೋ ಅವಕಾಶ ಸುಹಾನಾಗೆ ಸಿಕ್ಕಿದೆ. ಶಾರುಖ್ ಖಾನ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಡಂಕಿ’ ಸಿನಿಮಾದಲ್ಲಿ. ಇದಾದ ಬಳಿಕ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.