ಬೆತ್ತಲೆ ಪಾರ್ಟಿಗೆ ಹೋಗಿ, ಭಯಾನಕ ಅನುಭವ ಹಂಚಿಕೊಂಡ ನಟಿ
ಕನ್ನಡದ ಸಿನಿಮಾ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ಸುಚಿತ್ರ ಇತ್ತೀಚೆಗೆ ಜರ್ಮನಿ ರಾಜಧಾನಿ ಬರ್ಲಿನ್ನಲ್ಲಿ ಬೆತ್ತಲೆ ಪಾರ್ಟಿಗೆ ಹೋಗಿದ್ದರಂತೆ. ಆ ಪಾರ್ಟಿಯ ಅನುಭವವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಬಾಡಿ ಪಾಸಿಟಿವಿಟಿ ಬಗ್ಗೆ ಜೋರು ಚರ್ಚೆಯಾಗುತ್ತಿದೆ. ತಮ್ಮ ದೇಹ ಹೇಗಿದ್ದರೂ ಅದರ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳದೆ ಅದರ ಬಗ್ಗೆ ಹೆಮ್ಮೆ ಪಡುವುದನ್ನು ಹೇಳಿಕೊಡಲಾಗುತ್ತಿದೆ. ಇದು ವಿಶ್ವಮಟ್ಟದ ಚಳವಳಿಯಾಗಿ ರೂಪುಗೊಂಡಿದೆ. ಭಾರತದ ಹಲವು ನಟ-ನಟಿಯರು ಸಹ ಬಾಡಿ ಪಾಸಿಟಿವಿಯನ್ನು ಬೆಂಬಲಿಸಿದ್ದಾರೆ. ವಿದೇಶದಲ್ಲಂತೂ ಈ ಚಳವಳಿ ಜೋರಾಗಿದೆ. ಬಾಡಿ ಪಾಸಿಟಿವಿಟಿ ಪ್ರಚಾರಕ್ಕೆ ಕರೆಯಲಾಗಿದ್ದ ನ್ಯೂಡ್ ಪಾರ್ಟಿಯಲ್ಲಿ ಭಾರತದ ನಟಿಯೊಬ್ಬರು ಇತ್ತೀಚೆಗೆ ಭಾಗವಹಿಸಿದ್ದರು. ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನುಭವ ಬರೆದುಕೊಂಡಿದ್ದಾರೆ.
ಕನ್ನಡದ ಸೂಪರ್ ಹಿಟ್ ಸಿನಿಮಾ ‘ವಿಶ್ವ’ (ಶಿವರಾಜ್ ಕುಮಾರ್ ನಾಯಕ) ಸೇರಿದಂತೆ ಮಲಯಾಳಂ, ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಸಿರುವ ಸುಚಿತ್ರ ಕೃಷ್ಣಮೂರ್ತಿ, ಜರ್ಮನಿಯಲ್ಲಿ ನಡೆದ ಬಾಡಿ ಪಾಸಿಟಿವಿಟಿ/ ನ್ಯೂಡ್ ಪಾರ್ಟಿಯಲ್ಲಿ ಇತ್ತೀಚೆಗೆ ಭಾಗಿಯಾಗಿದ್ದರಂತೆ. ಆದರೆ ಅಲ್ಲಿ ತಮಗೆ ಆದ ಕೆಟ್ಟ ಅನುಭವದ ಬಗ್ಗೆ ನಟಿ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಎರಡು ದಿನದ ಹಿಂದೆ ನಟಿ ಸುಚಿತ್ರ ಕೃಷ್ಣಮೂರ್ತಿ ಜರ್ಮನಿಯಲ್ಲಿ ನೇಕೆಡ್ ಪಾರ್ಟಿಯಲ್ಲಿ ಭಾಗವಹಿಸಿದ್ದರಂತೆ. ‘ಬರ್ಲಿನ್ನ (ಜರ್ಮನಿ ರಾಜಧಾನಿ) ಬಾಡಿ ಪಾಸಿಟಿವಿಟಿ/ ನೇಕೆಡ್ ಪಾರ್ಟಿಯಲ್ಲಿ ಭಾಗವಹಿಸಿದೆ. ಅಲ್ಲಿಗೆ ಹೋದ ಬಳಿಕ ‘ಮೆದುಳೇ ಬಿದ್ದು ಹೋಗುವಷ್ಟು ಓಪನ್ ಮೈಂಡೆಡ್ ಆಗಬಾರದು’ ಎಂಬ ಮಾತು ನೆನಪಾಯ್ತು. ನಾನು ಯಾವತ್ತಿದ್ದರೂ ದೇಸಿ ಹುಡುಗಿಯೇ, ಈ ಕೂಡಲೇ ಸ್ನಾನ ಮಾಡಿ, ಗಾಯತ್ರಿ ಮಂತ್ರ ಪಠಣ ಮಾಡಬೇಕು’ ಎಂದು ನಟಿ ಬರೆದುಕೊಂಡಿದ್ದಾರೆ. ಅಲ್ಲಿಗೆ ಹೋಗಿ ಪಾಪ ಮಾಡಿದ ಅನುಭವ ನಟಿ ಸುಚಿತ್ರ ಕೃಷ್ಣಮೂರ್ತಿಗೆ ಆಯ್ತಂತೆ, ಅದಕ್ಕೆಂದೆ ಸ್ನಾನ ಮಾಡಿ ಶುದ್ಧವಾಗಿ ಗಾಯತ್ರಿ ಮಂತ್ರ ಪಠಿಸಬೇಕು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಗ್ಲಾಮರ್ ಗೊಂಬೆ ಅಪ್ಸರ ರಾಣಿ
ಈ ಬಗ್ಗೆ ಬಾಲಿವುಡ್ ಹಂಗಾಮ ಜೊತೆಗೆ ಈ ಬಗ್ಗೆ ಮಾತನಾಡಿರುವ ನಟಿ ಸುಚಿತ್ರ, ‘ನನ್ನ ಗೆಳೆಯರ ಹತ್ತಿರದ ಗೆಳೆಯರೊಬ್ಬರ ಬಾರ್ನಲ್ಲಿ ಈ ನ್ಯೂಡ್ ಪಾರ್ಟಿ ಆಯೋಜಿತವಾಗಿತ್ತು. ಸರಿ ಒಮ್ಮೆ ನೋಡಿಬಿಡೋಣ ಎಲ್ಲದರ ಅನುಭವ ಇರಬೇಕು ಎಂದುಕೊಂಡು ಹೋಗಿದ್ದೆ. ಆದರೆ ಅಲ್ಲಿಗೆ ಹೋದ ಮೇಲೆ ಕೇವಲ 20 ನಿಮಿಷಕ್ಕೆ ಅಲ್ಲಿಂದ ವಾಪಸ್ ಓಡಿ ಬಂದೆ. ನನಗೆ ಅಲ್ಲಿ ಇರಲು ಸಾಧ್ಯವಾಗಲಿಲ್ಲ. ನನಗೆ ಇನ್ನೊಬ್ಬರ ಸ್ತನ, ನಿತಂಬಗಳನ್ನು ನೋಡಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ.
‘ಆದರೆ ಇಂಥಹ ಪಾರ್ಟಿಗಳೆಲ್ಲ ಇಲ್ಲಿ ತೀರ ಸಾಮಾನ್ಯ. ಫನ್ ಗಾಗಿ ಹಾಗೂ ಪಾಸಿಟಿವಿಟಿ ಹೆಚ್ಚಿಸಲು ಈ ರೀತಿಯ ಇವೆಂಟ್ಗಳನ್ನು ಆರ್ಗನೈಜ್ ಮಾಡುತ್ತಿರುತ್ತಾರೆ. ಅದು ಅಸಹ್ಯ ಎಂದೇನೂ ಅಲ್ಲ. ಆದರೆ ನಾವು ಭಾರತೀಯರು ಭಿನ್ನವಾಗಿ ಬೆಳೆದಿರುತ್ತೇವೆ. ನಮ್ಮ ದೇಹದ ಬಗ್ಗೆ ನಾವು ಹೆಚ್ಚು ಜಾಗೃತರಾಗಿಯೂ, ಗುಪ್ತಭಾವವನ್ನೂ ಹೊಂದಿರುತ್ತೇವೆ. ದೇಹವನ್ನು ಮುಚ್ಚಿಟ್ಟುಕೊಳ್ಳಬೇಕು ಎಂದು ನಮಗೆ ಕಲಿಸಲಾಗಿರುತ್ತದೆ ಹಾಗಾಗಿ ಇದೆಲ್ಲ ನಮಗೆ ಸರಿ ಎನಿಸುವುದಿಲ್ಲ’ ಎಂದಿದ್ದಾರೆ ನಟಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ