ದರ್ಶನ್ ಆರೋಗ್ಯ ಈಗ ಹೇಗಿದೆ? ವೈದ್ಯರು ನೀಡಿದ್ದಾರೆ ಮಾಹಿತಿ

Darshan Thoogudeepa: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಇಂದು (ಜನವರಿ 15) ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಬೆನ್ನು ನೋವಿಗೆ ಚಿಕಿತ್ಸೆ ಪಡೆದುಕೊಂಡರು. ದರ್ಶನ್​ಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ಅಜಯ್ ಹೆಗ್ಡೆ ದರ್ಶನ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ದರ್ಶನ್ ಆರೋಗ್ಯ ಈಗ ಹೇಗಿದೆ? ವೈದ್ಯರು ನೀಡಿದ್ದಾರೆ ಮಾಹಿತಿ
ದರ್ಶನ್

Updated on: Jan 15, 2025 | 1:12 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತಿರುವ ದರ್ಶನ್ ಆರು ತಿಂಗಳಿಗೂ ಹೆಚ್ಚು ಸಮಯ ಜೈಲಿನಲ್ಲೇ ಕಳೆದಿದ್ದಾರೆ. ಜೈಲಿನಲ್ಲಿದ್ದಾಗ ವಿಪರೀತ ಬೆನ್ನು ನೋವು ಸಮಸ್ಯೆ ಎದುರಿಸಿದ ದರ್ಶನ್, ಅದನ್ನೇ ಕಾರಣವಾಗಿ ನೀಡಿ ಹೈಕೋರ್ಟ್​ನಿಂದ ಮಧ್ಯಂತರ ಜಾಮೀನು ಸಹ ಪಡೆದಿದ್ದರು. ಆ ಬಳಿಕ ಹೈಕೋರ್ಟ್​ನಲ್ಲಿ ಅವರಿಗೆ ನಿಯಮಿತ ಜಾಮೀನು ಸಹ ದೊರೆಯಿತು. ಜಾಮೀನು ದೊರೆತ ಬಳಿಕ ಕೆಲ ವಾರ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇದ್ದ ದರ್ಶನ್ ನಿಧಾನಕ್ಕೆ ಮತ್ತೆ ಸಾರ್ವಜನಿಕ ಜೀವನದತ್ತ ಮರಳುತ್ತಿರುವಂತೆ ತೋರುತ್ತಿದೆ. ನಿನ್ನೆಯಷ್ಟೆ ಅವರು ಆರು ತಿಂಗಳಲ್ಲಿ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಕುಟುಂಬದೊಟ್ಟಿಗೆ ಸಂಕ್ರಾಂತಿ ಆಚರಿಸಿ ಫೋಟೊಗಳನ್ನು ತೆಗೆಸಿಕೊಂಡಿದ್ದಾರೆ.

ಇಂದು (ಜನವರಿ 15) ಮೈಸೂರಿನ ಆಸ್ಪತ್ರೆಗೆ ಭೇಟಿ ನೀಡಿ ಬೆನ್ನು ನೋವಿನ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ನಟ ದರ್ಶನ್ ಭೇಟಿ ನೀಡಿದ್ದರು. ನಟ ಧನ್ವೀರ್ ಗೌಡ ಜೊತೆಗೆ ಅವರು ಆಸ್ಪತ್ರೆಗೆ ಭೇಟಿ ನೀಡಿ, ಅಗತ್ಯ ಚಿಕಿತ್ಸೆ ಮಾಡಿಸಿಕೊಂಡು ತೆರಳಿದರು. ದರ್ಶನ್​ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ವೈದ್ಯ ಡಾ.ಅಜಯ್ ಹೆಗ್ಡೆ ಅವರು ದರ್ಶನ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಇಂದು ಆಸ್ಪತ್ರೆಗೆ ಭೇಟಿ ನೀಡಿದ್ದ ದರ್ಶನ್​ಗೆ ಎಪಿಡ್ಯೂರಲ್ ಇಂಜೆಕ್ಷನ್ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ. ಇನ್ನೂ ಒಂದು ವಾರ ದರ್ಶನ್ ಅವರನ್ನು ವೈದ್ಯಕೀಯ ನಿಗಾವಣೆಯಲ್ಲಿ ಇಟ್ಟಿರುವುದಾಗಿ ಹೇಳಿರುವ ವೈದ್ಯರು. ಒಂದು ವಾರದಲ್ಲಿ ಬ್ಲಾಕ್ ಕ್ಲಿಯರ್ ಆಗದೇ ಇದ್ದಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:Darshan: ದರ್ಶನ್​, ವಿಜಯಲಕ್ಷ್ಮೀ, ವಿನೀಶ್ ; ಹ್ಯಾಪಿ ಫ್ಯಾಮಿಲಿಯ ಫೋಟೋ ನೋಡಿ

ಪಿಸಿಯೋ ಥೆರಪಿಯನ್ನು ದರ್ಶನ್ ಮಾಡಿಸಿಕೊಳ್ಳುತ್ತಿದ್ದು, ಅದರಿಂದ ಬೆನ್ನು ನೋವು ಸ್ವಲ್ಪ ಗುಣ ಆಗಿದೆ. 20 ದಿನದ ಹಿಂದೆ ಇದ್ದ ನೋವಿಗೂ ಈಗ ದರ್ಶನ್​ಗೆ ಇರುವ ನೋವಿಗೂ ಬಹಳ ವ್ಯತ್ಯಾಸ ಇರುವುದಾಗಿ ದರ್ಶನ್ ಹೇಳಿಕೊಂಡಿದ್ದಾರಂತೆ. 20% ಗಿಂತ ಬೆನ್ನುನೋವಿನಲ್ಲಿ ಚೇತರಿಕೆ ಆಗಿದೆ. ಹಾಗಾಗಿ ಫಿಸಿಯೋ ಥೆರಪಿ ಮುಂದುವರೆಸುವಂತೆ ದರ್ಶನ್​ಗೆ ವೈದ್ಯರು ಮಾಹಿತಿ ನೀಡಿದ್ದಾರೆ.

ಇಂದು ಎಪಿಡ್ಯೂರಲ್ ಇಂಜೆಕ್ಷನ್ ಕೊಡುವ ಮುನ್ನ ದರ್ಶನ್ ಗೆ ಇಂಜೆಕ್ಷನ್ ಇಂದ ಆಗಬಹುದಾದ ಸೈಡ್ ಎಫೆಕ್ಟ್ ವರ್ಕ್ ಆಗುವ ರೀತಿ ಎಲ್ಲವನ್ನು ವಿವವರಿಸಿದ್ದಾಗಿ ಹೇಳಿದ ವೈದ್ಯರು, ವಾರದ ಬಳಿಕ ನಡೆಯುವ ಪರೀಕ್ಷೆಯ ವರದಿಯಲ್ಲಿ ಅಪರೇಷನ್ ನಿಶ್ಚಿತವಾದರೆ ದರ್ಶನ್, ಪತ್ನಿ ವಿಜಯಲಕ್ಷ್ಮಿ, ದರ್ಶನ್ ಸಹೋದರ ದಿನಾಕರ್, ಮಗ ವಿನೀಶ್ ನಾಲ್ವರನ್ನು ಕರೆಸಿ ಅಪರೇಷನ್ ಬಗ್ಗೆ, ಅಪರೇಷನ್ ನಂತರ ಎಫೆಕ್ಟ್ ಬಗ್ಗೆ ಕೌನ್ಸಿಲಿಂಗ್ ರೂಪದಲ್ಲಿ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಒಂದು ವಾರದ ಬಳಿಕ ಕುಟುಂಬದ ಒಟ್ಟಿಗೆ ಆಸ್ಪತ್ರೆಗೆ ಬರುವುದಾಗಿ ದರ್ಶನ್ ಹೇಳಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ