ಬೆಂಗಳೂರು: ಥಿಯೇಟರ್ ಭರ್ತಿಯಾಗುವಷ್ಟು ಪ್ರೇಕ್ಷಕರಿಗೆ ಪ್ರವೇಶ ಅವಕಾಶ ಸಿಗಬೇಕು ಎಂಬ ಕೂಗು ಜೋರಾಗುತ್ತಿದೆ. ಸ್ಯಾಂಡಲ್ವುಡ್ನ ನಟ, ನಟಿ, ತಂತ್ರಜ್ಞರು, ನಿರ್ಮಾಪಕರು ಸಿನಿಮಾ ಹಾಲ್ ಭರ್ತಿಗೊಳಿಸಲು ಅನುಮತಿ ನೀಡಬೇಕು ಎಂಬ ಬಗ್ಗೆ ಒಕ್ಕೊರಲ ಆಗ್ರಹ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ, ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ, ಸಿಂಪಲ್ ಸುನಿ, ಧ್ರುವ ಸರ್ಜಾ ಮುಂತಾದವರು ಟ್ವೀಟ್ ಮಾಡಿದ್ದಾರೆ.
ಇದೀಗ #KFIDemandsFullOccupancy ಟ್ವಿಟರ್ ಆಂದೋಲನಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ನಮಗೆ ಚಿತ್ರಮಂದಿರಗಳಲ್ಲಿ ಶೇ 100 ಸೀಟು ಭರ್ತಿಗೆ ಅವಕಾಶಬೇಕು ಎಂದು ವಿಡಿಯೊ ಹೇಳಿಕೆಯನ್ನು ಟ್ವೀಟ್ ಮಾಡಿದ್ದಾರೆ.
We want 100% occupancy for our movie theatres. #KFIDemandsFullOccupancy pic.twitter.com/YTE7IrGZvq
— DrShivaRajkumar (@NimmaShivanna) February 3, 2021
ಎಲ್ಲರಿಗೂ NORMAL ನಮಗ್ಯಾಕೆ ABNORMAL? We want 100% occupancy for movie theatres @drashwathcn @CMofKarnataka @mla_sudhakar #KFIDemandsFullOccupancy pic.twitter.com/n4pPcPH5rO
— DrShivaRajkumar (@NimmaShivanna) February 3, 2021
ಥಿಯೇಟರ್ನಲ್ಲಿ ಶೇ. 100 ಪ್ರೇಕ್ಷಕರಿಗೆ ಅವಕಾಶ ನೀಡುವ ವಿಚಾರಕ್ಕೆ ಸ್ಯಾಂಡಲ್ವುಡ್ ನಲ್ಲಿಗ ಒಗ್ಗಟ್ಟಿನ ಮಂತ್ರ ಕೇಳಿಬಂದಿದೆ. ಬೆಳಗಿನಿಂದ ಹಲವಾರು ಮಂದಿ ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಹೇಳಿಕೆಗಳನ್ನು ಕೊಡುತ್ತಿದ್ದಾರೆ.
ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಶೇ 50 ಆಕ್ಯೂಪೆನ್ಸಿ ಇದ್ದಾಗ ಆರ್ಥಿಕವಾಗಿ ನಷ್ಟ ಆಗ್ತಿತ್ತು. ಒಂದು ವರ್ಷ ನಷ್ಟದ ನೋವು ಅನುಭವಿಸಿದ್ದೇವೆ. ನಿನ್ನೆ ಸಂಜೆ ಮತ್ತೆ ಶೇ 50 ಜನರಿಗೆ ಮಾತ್ರ ಅವಕಾಶ ಎಂದು ಮಾಹಿತಿ ಸಿಕ್ಕಿದಾಗ ತುಂಬಾ ಬೇಸರ ಆಯಿತು ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ, ಈಗ ಮನವಿ ಪತ್ರ ಕೊಟ್ಟಿದ್ದೇವೆ. ಹಾಗಾಗಿ ಇಂದು ಸಂಜೆಯೇ ಒಳ್ಳೆ ಸುದ್ದಿ ಸಿಗುವ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಚಿತ್ರಮಂದಿರಕ್ಕೆ ಶೇ. 50 ನಿರ್ಬಂಧ ಏಕೆ? Housefull ಪ್ರದರ್ಶನಕ್ಕೆ ಅವಕಾಶ ನೀಡಿ: ಸಿನಿ ದಿಗ್ಗಜರಿಂದ ಆಗ್ರಹ
Published On - 3:45 pm, Wed, 3 February 21