ಹರ್ಷಿಕಾ ಪೂಣಚ್ಚ ಜೀವನಕ್ಕೆ ಸಿಕ್ತು ಹೊಸ ಅರ್ಥ; ಅಭಿಮಾನಿಗಳ ಜತೆ ಖುಷಿ ಹಂಚಿಕೊಂಡ ನಟಿ

|

Updated on: Jun 12, 2021 | 6:43 PM

ಕೊವಿಡ್​ ಸಂಕಷ್ಟದ ಸಂದರ್ಭದಲ್ಲಿ ಹರ್ಷಿಕಾ ಮಾಡಿದ ಸಹಾಯವನ್ನು ಅಭಿಮಾನಿಗಳು ನೆನೆದಿದ್ದು, ಮಗಳಿಗೆ ಹರ್ಷಿಕಾ ಎಂದು ಹೆಸರಿಟ್ಟಿದ್ದಾರೆ.

ಹರ್ಷಿಕಾ ಪೂಣಚ್ಚ ಜೀವನಕ್ಕೆ ಸಿಕ್ತು ಹೊಸ ಅರ್ಥ; ಅಭಿಮಾನಿಗಳ ಜತೆ ಖುಷಿ ಹಂಚಿಕೊಂಡ ನಟಿ
ಹರ್ಷಿಕಾ ಪೂಣಚ್ಚ
Follow us on

ಕೊವಿಡ್​ ಸಂದರ್ಭದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಜನಸಾಮಾನ್ಯರ ಸಹಾಯಕ್ಕೆ ನಿಂತಿದ್ದಾರೆ. ಅವರೆಲ್ಲರೂ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಕೂಡ ಇದ್ದಕ್ಕೆ ಹೊರತಾಗಿಲ್ಲ. ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಾಗಿನಿಂದಲೂ ಅವರು ಜನಸಾಮಾನ್ಯರ ಸಹಾಯಕ್ಕೆ ನಿಂತಿದ್ದಾರೆ. ಮಾಡಿದ ಕೆಲಸಕ್ಕೆ ಈಗ ಅವರಿಗೆ ಸಾರ್ಥಕ ಭಾವನೆ ಮೂಡಿದೆ.

ಭುವನ್ ಪೊನ್ನಣ್ಣ ಜತೆಗೂಡಿ ಹರ್ಷಿಕಾ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಕೊವಿಡ್ ಸಂಕಷ್ಟದಲ್ಲಿರುವವರಿಗೆ ಬೆಡ್​, ಆಮ್ಲಜನಕದ ಸಿಲಿಂಡರ್​ ಒದಗಿಸಲು ಮುಂದೆ ಬಂದಿರುವ ಅವರು, ನಾನಾ ಊರುಗಳಿಗೆ ತೆರಳಿ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಇತ್ತೀಚೆಗೆ ಕೊಡಗಿಗೆ ತೆರಳಿದ್ದ ಹರ್ಷಿಕಾ, ಅಲ್ಲಿ ಕೊವಿಡ್ ವಾರ್ಡ್​ನಲ್ಲಿ ರೋಗಿಗಳನ್ನು ರಂಜಿಸಿದ್ದರು. ಅವರು ಸುಮಾರು 15,000 ಕುಟುಂಬಗಳಿಗೆ ನೆರವಾಗಿದ್ದಾರೆ.

ಕೊವಿಡ್​ ಸಂಕಷ್ಟದ ಸಂದರ್ಭದಲ್ಲಿ ಹರ್ಷಿಕಾ ಮಾಡಿದ ಸಹಾಯವನ್ನು ಅಭಿಮಾನಿಗಳು ನೆನೆದಿದ್ದು, ಮಗಳಿಗೆ ಹರ್ಷಿಕಾ ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ವಾಟ್ಸ್​ಆ್ಯಪ್​ನಲ್ಲಿ ಬಂದಿರುವ ಮೆಸೇಜ್​ ಒಂದರ ಸ್ಕ್ರೀನ್​ಶಾಟ್​ ಹಂಚಿಕೊಂಡಿದ್ದಾರೆ ಹರ್ಷಿಕಾ. ‘ಇವತ್ತು ನನ್ನ ತಮ್ಮನ ಮಗಳಿಗೆ ನಾಮಕರಣ ಮಾಡುತ್ತಿದ್ದೇವೆ. ಹೆಣ್ಣು ಮಗುವಿಗೆ ಹರ್ಷಿಕಾ ಎಂದು ಹೆಸರಿಡುತ್ತಿದ್ದೇವೆ. ಅಂದರೆ, ಇವಳು ನಿಮ್ಮ ತರಹದಲ್ಲೇ ಜನರ ಕಷ್ಟಕ್ಕೆ ಸ್ಪಂದಿಸುವಂತವಳಾಗಬೇಕು, ನಿಮ್ಮಂತೆ ಜನ ಸೇವಕಿ ಆಗಬೇಕು. ಆಶೀರ್ವಾದ ಮಾಡಿ ಮೇಡಂ’ ಎಂದು ಸಂದೇಶದಲ್ಲಿದೆ.

ಈ ಸಂದೇಶ ನೋಡಿದ ಹರ್ಷಿಕಾಗೆ ಸಂತಸವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಹರ್ಷಿಕಾ, ‘ನನ್ನ ಜೀವನಕ್ಕೆ ಹೊಸ ಅರ್ಥ ಸಿಕ್ಕಿರುವ ಹಾಗಿದೆ. ಈ ಮುದ್ದು ಪುಟಾಣಿ ಕಂದಮ್ಮನಿಗೆ ನನ್ನ ಹೆಸರು ಇಟ್ಟಿದ್ದಾರೆ. ನಿಮ್ಮ ಪ್ರೀತಿಗೆ ನನ್ನ ಮನಸ್ಸು ತುಂಬಿದೆ . ಈ ವಿಶ್ವಾಸಕ್ಕೆ ನಾನೆಂದೂ ಚಿರಋಣಿ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಇಷ್ಟೆಲ್ಲಾ ಸಾಧ್ಯವಾಗಿದ್ದು ಟಿವಿ9ನಿಂದ, TV9ಗೆ ಧನ್ಯವಾದ ತಿಳಿಸಿದ ನಟಿ ಹರ್ಷಿಕಾ ಪೂಣಚ್ಚ

ಅಣ್ಣಾವ್ರ ಹಾಡು ಹೇಳಿ ಕನ್ನಡಿಗರ ಮನ ಗೆದ್ದ ಬಾಲಿವುಡ್​ ನಟ ಗೋವಿಂದ! ಹರ್ಷಿಕಾ ಜತೆಗಿನ ವಿಡಿಯೋ ವೈರಲ್​

Published On - 6:34 pm, Sat, 12 June 21