ಕನ್ನಡ ಚಿತ್ರರಂಗದ ಕಾರ್ಮಿಕರಿಗೆ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ಕೆ.ಮಂಜು ಕಡೆಯಿಂದ ಸಿಕ್ತು ನೆರವು

ಕನ್ನಡ ಚಲನಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ರಮೇಶ್ ರೆಡ್ಡಿ ಹಾಗೂ ಕೆ.ಮಂಜು ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಕಾರ್ಮಿಕರಿಗೆ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ಕೆ.ಮಂಜು ಕಡೆಯಿಂದ ಸಿಕ್ತು ನೆರವು

ಕೊವಿಡ್ ಸಂಕಷ್ಟದ ಸಂದರ್ಭದಲ್ಲಿ ಸಿನಿಮಾ ಕಲಾವಿದರು, ಕಾರ್ಮಿಕರು ಕೆಲಸವಿಲ್ಲದೆ ಕೂತಿದ್ದಾರೆ. ಅನೇಕರಿಗೆ ಊಟಕ್ಕೂ ಪರಿತಪಿಸುವ ಸ್ಥಿತಿ ನಿರ್ಮಾಣ ಆಗಿದೆ. ಈ ಸಂದರ್ಭದಲ್ಲಿ ಸಾಕಷ್ಟು ಜನರು ಕನ್ನಡ ಚಿತ್ರರಂಗದ ಕಾರ್ಮಿಕರಿಗೆ ಸಹಾಯ ಮಾಡೋಕೆ ಮುಂದೆ ಬಂದಿದ್ದಾರೆ. ಈಗ ಕನ್ನಡ ಚಿತ್ರರಂಗದ ಕಾರ್ಮಿಕರಿಗೆ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ಕೆ.ಮಂಜು ಕಡೆಯಿಂದ ನೆರವು ಸಿಕ್ಕಿದೆ.

ಕನ್ನಡ ಚಲನಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ರಮೇಶ್ ರೆಡ್ಡಿ ಹಾಗೂ ಕೆ.ಮಂಜು ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದ್ದಾರೆ. ಜೂನ್ 11ರ ಬೆಳಗ್ಗೆ 8:30ಕ್ಕೆ ಕೆ.ಆರ್. ರಸ್ತೆಯ ಗರಡಿ ಅಪಾರ್ಟ್ಮೆಂಟ್ ಪಕ್ಕದ ಮೈದಾನದಲ್ಲಿ ಬರಹಗಾರರು, ಸಂಕಲನ‌ ಹಾಗೂ ಛಾಯಾಗ್ರಹಣ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರು ಮತ್ತು ಆರ್ಪಿಗಳು ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ಜನರಿಗೆ ಉತ್ತಮ ದರ್ಜೆಯ ಆಹಾರ ಪದಾರ್ಥಗಳನ್ನು ಇವರು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕೆ. ಮಂಜು, ಈ ಹಿಂದೆ ಕೂಡ ನಿರ್ಮಾಪಕ ರಮೇಶ್ ರೆಡ್ಡಿ ಅವರ ನೇತೃತ್ವದಲ್ಲಿ ನಾವು ಹಲವರಿಗೆ ಆಹಾರ ಪದಾರ್ಥಗಳನ್ನು ಹಂಚಿದ್ದೇವೆ. ಮುಂದೆ ಕೂಡ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ’ ಎನ್ನುತ್ತಾರೆ.

ಈ ಮೊದಲು ಸ್ಯಾಂಡಲ್ವುಡ್​​ನ ಸಾಕಷ್ಟು ನಟ-ನಟಿಯರು, ನಿರ್ಮಾಪಕರು ಹಾಗೂ ನಿರ್ದೇಶಕರು ಚಿತ್ರರಂಗದ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ. ಯಶ್ ತಮ್ಮ ದುಡಿಮೆಯಲ್ಲಿ ಒಂದೂವರೆ ಕೋಟಿ ರೂಪಾಯಿ ಹಣವನ್ನು ಸಿನಿಮಾ ಕಾರ್ಮಿಕರಿಗೆ ಮೀಸಲಿಡುವ ಮೂಲಕ ಮಾದರಿ ಆಗಿದ್ದರು. ಉಪೇಂದ್ರ, ‘ಕೆಜಿಎಫ್ 2’ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು, ನಟಿ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಕೂಡ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ: ಸಂಕಷ್ಟದಲ್ಲಿ ಇರುವವರಿಗೆ ಕೆಜಿಎಫ್​ ನಿರ್ಮಾಪಕ ವಿಜಯ್​ ಕಿರಗಂದೂರು ಸದ್ದಿಲ್ಲದೇ ಮಾಡಿದ ಸಹಾಯಗಳು ಒಂದೆರಡಲ್ಲ

ಅಭಿಮಾನಿಗಳ ಮನಗೆದ್ದ ರಾಧಿಕಾ ಪಂಡಿತ್​ ಮಗು ಯಥರ್ವ್​ ಯಶ್​ ಮುದ್ದಾದ ನಗು; ಇಲ್ಲಿದೆ ವಿಡಿಯೋ