AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರೇಟ್ ಇರದಿದ್ರೂ ನಾನು ಟೊಮ್ಯಾಟೋನೆ ಬೆಳೆಯೋದು’; ‘ಫಾದರ್’ ಸಾಂಗ್ ಲಾಂಚ್ ಈವೆಂಟ್​​ನಲ್ಲಿ ಕೃಷ್ಣ ಮಾತು

ಕೆಲವು ಕಲಾವಿದರು ಆ್ಯಕ್ಷನ್ ಸಿನಿಮಾಗಳನ್ನು ಮಾಡದೆ ಕೇವಲ ಫ್ಯಾಮಿಲಿ ಡ್ರಾಮಾ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಏಕೆ ಎಂಬ ಪ್ರಶ್ನೆಗೆ ನಟ ಡಾರ್ಲಿಂಗ್ ಕೃಷ್ಣ ಸ್ಪಷ್ಟನೆ ನೀಡಿದ್ದಾರೆ. ತರಕಾರಿ ಮಾರುಕಟ್ಟೆಯಲ್ಲಿ ಬೆಲೆ ಇರಲಿ ಬಿಡಲಿ ತಾವು ಮಾತ್ರ ಟೊಮ್ಯಾಟೋ ಬೆಳೆಯುವುದಾಗಿ ಹೇಳಿದ್ದಾರೆ. ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಥೆಗಳನ್ನು ಆಯ್ಕೆ ಮಾಡಿಕೊಂಡು ಫ್ಯಾಮಿಲಿ ಓರಿಯಂಟೆಡ್ ಸಿನಿಮಾಗಳನ್ನೇ ಮಾಡುವುದಾಗಿ ಅವರು ತಿಳಿಸಿದ್ದಾರೆ.

‘ರೇಟ್ ಇರದಿದ್ರೂ ನಾನು ಟೊಮ್ಯಾಟೋನೆ ಬೆಳೆಯೋದು’; ‘ಫಾದರ್’ ಸಾಂಗ್ ಲಾಂಚ್ ಈವೆಂಟ್​​ನಲ್ಲಿ ಕೃಷ್ಣ ಮಾತು
ಫಾದರ್ ಸಿನಿಮಾ
ರಾಜೇಶ್ ದುಗ್ಗುಮನೆ
|

Updated on: Oct 24, 2026 | 7:43 AM

Share

ಮುಖ್ಯಾಂಶಗಳು

  • ಫ್ಯಾಮಿಲಿ ಸಿನಿಮಾಗಳ ಬಗ್ಗೆ ಡಾರ್ಲಿಂಗ್ ಕೃಷ್ಣ ಮಾತು
  • ಟೊಮ್ಯಾಟೋ ಕೃಷಿ ಉದಾಹರಣೆ
  • ಈಗ ಫ್ಯಾಮಿಲಿ ಕಥೆಗಳಿಗೆ ಸಿಗುತ್ತಿದೆ ಉತ್ತಮ ಮನ್ನಣೆ

ಕೆಲವು ಕಲಾವಿದರು ಫ್ಯಾಮಿಲಿ ಡ್ರಾಮಾ ಮಾತ್ರ ಮಾಡುತ್ತಾರೆ. ಆ್ಯಕ್ಷನ್ ಸಿನಿಮಾಗಳನ್ನು ಮಾಡಲು ಅವರು ಎಂದಿಗೂ ಮನಸ್ಸು ಮಾಡುವುದಿಲ್ಲ. ಇದರಿಂದ ಕೆಲವೊಮ್ಮೆ ಸೋಲು ಉಂಟಾಗುವ ಸಾಧ್ಯತೆ ಇರುತ್ತದೆ. ಈ ವಿಷಯಗಳ ಬಗ್ಗೆ ಡಾರ್ಲಿಂಗ್ ಕೃಷ್ಣ ಮಾತನಾಡಿದ್ದಾರೆ. ತಾವು ಫ್ಯಾಮಿಲಿ ಡ್ರಾಮಾ ಸಿನಿಮಾಗಳನ್ನು ಮಾತ್ರ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್, ಅಮೃತಾ ಅಯ್ಯಂಗಾರ್, ನಾಗಭೂಷಣ್ ಮೊದಲಾದವರು ‘ಫಾದರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ‘ಗಗನದ ನೇಸರ’ ಸಾಂಗ್ ರಿಲೀಸ್ ಆಗಿದೆ. ಈ ಈವೆಂಟ್​​ನಲ್ಲಿ ಮಾತನಾಡಿದ ಕೃಷ್ಣ, ತಾವು ಯಾಕೆ ಫ್ಯಾಮಿಲಿ ಓರಿಯಂಟೆಡ್ ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದೇನೆ ಎಂಬುದನ್ನು ವಿವರಿಸಿದರು.

ಇದನ್ನೂ ಓದಿ: ‘ಲವ್ ಮಾಕ್ಟೆಲ್ 3’ ಸೆಟ್​ನಲ್ಲಿ ದಿಲೀಪ್ ರಾಜ್: ಸುಂದರ ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

‘ಫಾದರ್ ಸಿನಿಮಾದಲ್ಲಿ ಕಥೆ ಚೆನ್ನಾಗಿದೆ. ವಿಷಯದಲ್ಲಿ ತಾಕತ್ತಿದೆ. ನನಗೆ ತುಂಬಾನೇ ಎಗ್ಸೈಟ್​​ಮೆಂಟ್ ಇದೆ. ನಾನು ಫ್ಯಾಮಿಲಿ ಸಿನಿಮಾನೇ ಮಾಡೋದು. ಯಾಕೆ ಆ್ಯಕ್ಷನ್ ಮಾಡಲ್ಲ ಎಂದು ಕೇಳ್ತಾರೆ. ನಾನು ಟೊಮ್ಯಾಟೋ ಬೆಳೆಯೋದು. ರೇಟ್ ಇರಲಿ ಬಿಡಲಿ ಅದನ್ನೇ ಬೆಳೆಯುತ್ತಿದ್ದೇನೆ. ಟೊಮ್ಯಾಟೋಗೆ ಸೀಸನ್ (ಫ್ಯಾಮಿಲಿ ಸಿನಿಮಾಗಳಿಗೆ) ರೇಟ್ ಬಂದಿದೆ. ಹೊಡಿಬಡಿಯಿಂದ ಬ್ರೇಕ್ ಪಡೆದಿದ್ದಾರೆ. ಈ ರೀತಿಯ ಸಿನಿಮಾ ನೋಡುತ್ತಿದ್ದಾರೆ. ನಿರ್ಮಾಪಕ ಚಂದ್ರು ಅವರಿಗೆ ಇದರಿಂದ ಲಾಭ ಆಗಲಿ’ ಎಂದು ಕೃಷ್ಣ ಹಾರೈಸಿದ್ದಾರೆ.

‘ಫಾದರ್’ ಚಿತ್ರವನ್ನು ಆರ್ ಚಂದ್ರು ಅವರು ತಮ್ಮ ಆರ್​ಸಿ ಪ್ರೊಡಕ್ಷನ್ ಬ್ಯಾನರ್ ಅಡಿ ನಿರ್ಮಿಸಿದ್ದಾರೆ. ಅವರ ಪತ್ನಿ ಯಮುನಾ ಚಂದ್ರಶೇಖರ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ರಾಜಮೋಹನ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯ್ ಪ್ರಕಾಶ್ ಅವರು ಈ ಹಾಡನ್ನು ಹಾಡಿದ್ದಾರೆ. ಡಿಸೆಂಬರ್ 4ರಂದು ‘ಫಾದರ್’ ಸಿನಿಮಾ ರಿಲೀಸ್ ಆಗುತ್ತಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ಸಿನಿಮಾ ಸಿದ್ಧವಾಗಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬುದು ಚಂದ್ರು ಉದ್ದೇಶ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More