ಗೋವಾದಲ್ಲಿ ರಕ್ತದ ಕೋಡಿಯೇ ಹರಿಯಿತು: ನಿರ್ಮಾಪಕರ ಗಲಾಟೆ ಬಗ್ಗೆ ಎನ್​ಎಂ ಸುರೇಶ್ ವಿವರಣೆ

|

Updated on: May 30, 2024 | 1:07 PM

ನಿರ್ಮಾಪಕರ ಗೋವಾ ಪ್ರವಾಸದಲ್ಲಿ ಆಗಿರುವ ಗಲಾಟೆ ಬಗ್ಗೆ ಫಿಲಂ ಚೇಂಬರ್ ನಲ್ಲಿ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಲಾಗಿದ್ದು, ನಿರ್ಮಾಪಕ ಸತೀಶ್ ವಿರುದ್ಧ ದೂರು ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ನಿರ್ಮಾಪಕ ಸತೀಶ್ ಹದ್ದು ಮೀರಿ ವರ್ತಿಸಿದರೆಂದು ಸುರೇಶ್ ಆರೋಪಿಸಿದ್ದಾರೆ.

ಗೋವಾದಲ್ಲಿ ರಕ್ತದ ಕೋಡಿಯೇ ಹರಿಯಿತು: ನಿರ್ಮಾಪಕರ ಗಲಾಟೆ ಬಗ್ಗೆ ಎನ್​ಎಂ ಸುರೇಶ್ ವಿವರಣೆ
Follow us on

ಕನ್ನಡ ಸಿನಿಮಾ (Sandalwood) ನಿರ್ಮಾಪಕರು ಕೆಲವರು ಇತ್ತೀಚೆಗೆ ಗೋವಾ (Goa) ಪ್ರವಾಸ ಹೋಗಿದ್ದಾಗ ಗಲಾಟೆ ನಡೆದಿದ್ದು, ಈ ಬಗ್ಗೆ ಫಿಲಂ ಚೇಂಬರ್ ಅಧ್ಯಕ್ಷ ಎನ್​ಎಂ ಸುರೇಶ್ ಇಂದು (ಮೇ 30) ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ‘ಗೋವಾದಲ್ಲಿ ನಡೆದ ಘಟನೆ ನನಗೆ ಭಯ ಹುಟ್ಟಿಸಿತು. ಅಂಥಹಾ ಘಟನೆ ನಡೆಯಬಾರದಿತ್ತು. ಗೋವಾದಲ್ಲಿ ರಕ್ತದ ಕೋಡಿಯೇ ಹರಿಯಿತು. ಫಿಲಂ ಚೇಂಬರ್ ಇತಿಹಾಸದಲ್ಲಿಯೇ ಕೈ-ಕೈ ಮಿಲಾಯಿಸಿರಲಿಲ್ಲ. ನನಗೆ ಬಹಳ ಬೇಸರವಾಯ್ತು. ನಿರ್ಮಾಪಕ ಸತೀಶ್​ ಹಲವು ಎಚ್ಚರಿಕೆಗಳ ಬಳಿಕವೂ ಹೀಗೆ ಮಾಡಿದ್ದಾರೆ’ ಎಂದಿದ್ದಾರೆ.

ಅಧ್ಯಕ್ಷ ಆದ ಮೇಲೆ ಪದಾಧಿಕಾರಿಗಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು ಎಂಬ ಆಸೆಯಿತ್ತು. ಹಾಗಾಗಿ ಗೋವಾಗೆ ಹೋಗಿದ್ದೆವು. ಸತೀಶ್ ಈ ಹಿಂದೆಯೂ ಏರು ಧ್ವನಿಯಲ್ಲಿ ಮಾತಾಡಿದ್ದರು. ಈ ಹಿಂದೆ ಕೂಡ ಅವರಿಗೆ ನೋಟೀಸ್ ಕೊಟ್ಟಿದ್ದೆವು.
ಬೈಲಾ ಕಮಿಟಿ ಫಾರ್ ಮೇಶನ್ ನ ಒಂದು ಸಂದೇಶವನ್ನು ಬಹಿರಂಗವಾಗಿ ಮಾಡಿದ್ದರು. ಅದನ್ನ ಹಲವರಿಗೆ ಹಂಚಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುವಂತೆ ಮಾಡಿದ್ದರು. ಆಗಲೂ ಗಟ್ಟಿ ಧ್ವನಿಯಲ್ಲಿ ಮಾತನಾಡಿ ರೌಡಿತನ ತೋರಿದ್ದರು. ಆಗಲೂ ಸಹ ಸತೀಶ್​ಗೆ ಮೆಮೋ ನೀಡಿದ್ದೆ’ ಎಂದಿದ್ದಾರೆ ಸುರೇಶ್.

‘ರಥಾವರ’ ಮಂಜು ಅಲ್ಲೇ ಗೋವಾನಲ್ಲಿಯೇ ಇದ್ದರು, ಅವರು ನಮ್ಮೊಟ್ಟಿಗೆ ಬಂದಿರಲಿಲ್ಲ. ನಾವು ಬಂದಿದ್ದೇವೆಂದು ಗೊತ್ತಾಗಿ ನಮ್ಮೊಂದಿಗೆ ಊಟಕ್ಕೆ ಬಂದರು. ಗೋವಾ ಪ್ರವಾಸದಲ್ಲಿ ಎಲ್ಲರೂ ಊಟ ಮಾಡುತ್ತಾ ಇದ್ವಿ, ಇದ್ದಕ್ಕಿದ್ದಂತೆ ‘ರಥಾವರ’ ಮಂಜುನಾಥ್ ಹಾಗೂ ಸತೀಶ್​ ನಡುವೆ ಜೋರು ಮಾತುಕತೆ ಶುರುವಾಯ್ತು. ಬೈಲಾ, ವಾಣಿಜ್ಯ ಸಮಿತಿ ಬಗ್ಗೆ ಜೋರಾಗಿ ಸತೀಶ್ ಮಾತನಾಡಲು ಶುರು ಮಾಡಿದರು. ಸತೀಶ್ ರುದ್ರಾವತಾರ ನೋಡಿ ಭಯ ಆಯ್ತು. ನಾನು ಸ್ವಲ್ಪ ಅವಾಯ್ಡ್ ಮಾಡಿದೆ. ಏಕಾಏಕಿ ರಥಾವರ ಮಂಜು ಅವರ ಮೇಲೆ ಸತೀಶ್ ಹಲ್ಲೆ ಮಾಡಿದರು. ‘ರಥಾವರ’ ಮಂಜು ಅವರು ಸತೀಶ್​ಗೆ ಊಟ ಮಾಡಿ ಆರಾಮಾಗಿ ಮಲ್ಕೊಳ್ಳಿ ಅಷ್ಟೆ ಹೇಳಿದ್ದರು, ಅಷ್ಟಕ್ಕೆ ನೀನ್ಯಾರು ಹೇಳಲು ಎಂದು ಸತೀಶ್ ರೌದ್ರಾವತಾರ ತಾಳಿದರು. ಅಲ್ಲಿ ಎರಡು ಫೋರ್ಕು ತೆಗದುಕೊಂಡು, ಪ್ಲೇಟ್ ತಗೊಂಡು ಹೊಡೆದರು. ಅತ್ಯಂತ ಕೆಟ್ಟದಾಗಿ ಸತೀಶ್ ವರ್ತಿಸಿದರು. ರಕ್ತ ಕೋಡಿ ಹರಿದು ಹೋಗ್ತಿದೆ ಅನ್ನಿಸಿತು. ಅಷ್ಟಕ್ಕೆ ಸುಮ್ಮನಾಗದೆ, ಗನ್ ಇದೆ ತಗೀಲಾ ಅಂತ ಸತೀಶ್ ಬೆದರಿಕೆ ಸಹ ಹಾಕಿದರು’ ಎಂದಿದ್ದಾರೆ ಸುರೇಶ್.

ಇದನ್ನೂ ಓದಿ:‘ಫೈಟ್ ಬಿಡಿಸೋಕೆ ಹೋಗಿ ಕಣ್ಣಿಗೆ ಚುಚ್ಚಿಸಿಕೊಂಡೆ’; ನಿರ್ಮಾಪಕ ಸತೀಶ್ ವಿರುದ್ಧ ಗಣೇಶ್ ಆಕ್ರೋಶ

‘ರಥಾವರ ಮಂಜು ಹಾಗೂ ಸತೀಶ್ ನಡುವೆ ನಡೆಯುತ್ತದ್ದ ಜಗಳವನ್ನು ಗಣೇಶ್ ಬಿಡಿಸಲು ಹೋದರು ಆದರೆ ಅವರ ಮೇಲೂ ಹಲ್ಲೆ ಮಾಡಿದರು. ಗಣೇಶ್ ಏನೂ ತಪ್ಪು ಮಾಡದೆ ಸತೀಶ್​ರಿಂದ ದೌರ್ಜನ್ಯಕ್ಕೆ ಒಳಗಾದರು. ಆ ಸಮಯದಲ್ಲಿ ಗಣೇಶ್ ಹಾಗೂ ಸತೀಶ್ ಅನ್ನು ಅಲ್ಲಿಂದ ವಾಪಸ್ ಕಳಿಸಿದೆವು. ‘ರಥಾವರ’ ಮಂಜು ಪರವಾಗಿ ಮೂವತ್ತು ಜನ ಹುಡುಗರು ಗೋವಾದಲ್ಲಿದ್ದರು. ಅಲ್ಲಿ ಸುಮ್ಮನೆ ಸಮಸ್ಯೆ ಆಗೋದು ಬೇಡವೆಂದು ಆ ಕ್ಷಣದಲ್ಲಿ ಆ ನಿರ್ಧಾರ ತೆಗೆದುಕೊಂಡೆ. ಆದರೆ ನಾವು ಅಲ್ಲಿಯೇ ದೂರು ನೀಡಬೇಕಿತ್ತು, ದೂರು ನೀಡದೆ ನಾನು ತಪ್ಪು ಮಾಡಿದೆ. ಸತೀಶ್ ಅಂಥಹವರನ್ನು ಬೆಳೆಯಲು ಬಿಡಬಾರದು’ ಎಂದರು ಸುರೇಶ್.

ಜೀವನದಲ್ಲಿಯೇ ನಾನು ಅಂಥಹಾ ಘಟನೆ ನೋಡಿರಲಿಲ್ಲ. ಗಾಯಗೊಂಡಿದ್ದ ಗಣೇಶ್ ಅವರನ್ನು ರಾತ್ರೋ ರಾತ್ರಿ ಊರಿಗೆ ಕಳಿಸಿದೆವು. ಇಂಥಹಾ ಘಟನೆ ನಡೆಯಬಾರದಿತ್ತು. ಗೋವಾದ ಕಲ್ಲಂಗೂಟ ಬೀಚ್​ನಲ್ಲಿ ಕಂಪ್ಲೇಂಟ್ ಕೊಡಲೇ‌ಬೇಕು ಅಂತ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ ಸುರೇಶ್. ಹಲ್ಲೆಗೆ ಒಳಗಾದ ನಿರ್ಮಾಪಕ ಗಣೇಶ್ ಸಹ ತಾವು ದೂರು ನೀಡಬೇಕೆಂದು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ