ಸೌಹಾರ್ದಯುತವಾಗಿ ಚರ್ಚಿಸಿ ಬಗೆಹರಿಸಲು ನಿರ್ಧಾರ -ಫಿಲ್ಮ್​ ಚೇಂಬರ್​ ಅಧ್ಯಕ್ಷ ಜೈರಾಜ್​

| Updated By: ಸಾಧು ಶ್ರೀನಾಥ್​

Updated on: Jan 29, 2021 | 2:18 PM

ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ನಮ್ಮ ನಿರ್ಮಾಪಕರು ನಮಗೆ ದೂರು ನೀಡಿದ್ದಾರೆ. ಈ ಬಗ್ಗೆ ಭಾನುವಾರ ಸೌತ್​ ಇಂಡಿಯಾ ಫಿಲ್ಮ್​ ಚೇಂಬರ್ ಜತೆ ಸಭೆ ನಡೆಸಿ ಸೌಹಾರ್ದಯುತವಾಗಿ ಸಮಸ್ಯಯನ್ನು ಬಗೆಹರಿಸುವ ಬಗ್ಗೆ ಚರ್ಚೆ ಮಾಡುತ್ತೇವೆ. -ಫಿಲ್ಮ್​ ಚೇಂಬರ್​ ಅಧ್ಯಕ್ಷ ಜೈರಾಜ್​

ಸೌಹಾರ್ದಯುತವಾಗಿ ಚರ್ಚಿಸಿ ಬಗೆಹರಿಸಲು ನಿರ್ಧಾರ -ಫಿಲ್ಮ್​ ಚೇಂಬರ್​ ಅಧ್ಯಕ್ಷ ಜೈರಾಜ್​
Follow us on

ಬೆಂಗಳೂರು: ತೆಲುಗು ಚಿತ್ರರಂಗದ ಹೊಸ ನೀತಿ ವಿರೋಧಿಸಿ ಸ್ಯಾಂಡಲ್​ವುಡ್ ನಟ ದರ್ಶನ್ ಹಾಗೂ ನಿರ್ಮಾಪಕರು ಇಂದು ಫಿಲ್ಮ್​ ಚೇಂಬರ್​ಗೆ ಭೇಟಿ ನೀಡಿ ದೂರು ನೀಡಿದ್ರು. ದೂರಿನ ಬಳಿಕ ಫಿಲ್ಮ್​ ಚೇಂಬರ್​ ಅಧ್ಯಕ್ಷ ಜೈರಾಜ್​ ಸುದ್ದಿಗೋಷ್ಠಿ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಜೈರಾಜ್, ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ನಿರ್ಮಾಪಕರು ನಮಗೆ ದೂರು ನೀಡಿದ್ದಾರೆ. ಈ ಬಗ್ಗೆ ಭಾನುವಾರ ಸೌತ್​ ಇಂಡಿಯಾ ಫಿಲ್ಮ್​ ಚೇಂಬರ್ ಜತೆ ಸಭೆ ನಡೆಸಿ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಚರ್ಚೆ ಮಾಡುತ್ತೇವೆ.

ತೆಲುಗು ಚಿತ್ರರಂಗದವರು ರಿಲೀಸ್​ಗೆ ವಿರೋಧ ಮಾಡಿಲ್ಲ..
ತೆಲುಗು ಚಿತ್ರರಂಗದವರು ರಿಲೀಸ್​ಗೆ ವಿರೋಧ ಮಾಡಿಲ್ಲ. ಅದೇ ದಿನ ಅಲ್ಲಿಯೂ ಚಿತ್ರಗಳ ರಿಲೀಸ್​ ಆಗುತ್ತಿವೆ ಈ ಹಿನ್ನೆಲೆಯಲ್ಲಿ ಥಿಯೇಟರ್​ಗಳ ಸಮಸ್ಯೆಯಾಗುವ ಬಗ್ಗೆ ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಚರ್ಚೆ ಮಾಡಿ ಸಮಸ್ಯೆ ಬಗೆ ಹರಿಸೋಣ ಎಂದು ಹೇಳಿದ್ರು.

ತೆಲುಗು ಚಿತ್ರರಂಗದ ಸ್ವಜನ ಪಕ್ಷಪಾತ ನೀತಿಗೆ ದಚ್ಚು ಡಿಚ್ಚಿ, ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ದೂರು ಸಲ್ಲಿಸಿದ ರಾಬರ್ಟ್​ ನಿರ್ಮಾಪಕರು