GGVV: ಗರುಡ ಗಮನ ವೃಷಭ ವಾಹನ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ ರಾಜ್ ಬಿ. ಶೆಟ್ಟಿ

| Updated By: ಸಾಧು ಶ್ರೀನಾಥ್​

Updated on: Feb 04, 2021 | 4:45 PM

Garudagamana Vrishabhavahana ಚಿತ್ರದಲ್ಲಿ ರಾಜ್​.ಬಿ.ಶೆಟ್ಟಿ ಮತ್ತು ರಿಷಬ್​ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ತೆರೆಯ ಮೇಲೆ ಯಾವ ರೀತಿಯ ಕಮಾಲ್ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ.

GGVV: ಗರುಡ ಗಮನ ವೃಷಭ ವಾಹನ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ ರಾಜ್ ಬಿ. ಶೆಟ್ಟಿ
ಗರುಡ ಗಮನ ವೃಷಭ ವಾಹನ ಚಿತ್ರದ ಪೋಸ್ಟರ್​
Follow us on

ಕನ್ನಡ ಚಿತ್ರರಂಗದಲ್ಲಿ ಒಂದೊಂದೇ ಸಿನಿಮಾಗಳು ತೆರೆ ಕಾಣಲು ಮುಹೂರ್ತ ನಿಗದಿಪಡಿಸಿಕೊಳ್ಳುತ್ತಿವೆ. ಕೊರೊನಾ (Corona) ನಂತರ ಮತ್ತೆ ಚಿತ್ರಮಂದಿರಗಳು ತುಂಬಿಕೊಳ್ಳುವ ಸೂಚನೆ ಸಿಕ್ಕಿದ್ದು, ಈಗ ಕರ್ನಾಟಕ ಸರ್ಕಾರವೂ ಶೇ. 100ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದೆ. ಇದೇ ಹೊತ್ತಿನಲ್ಲಿ ಕನ್ನಡದ ವಿಶಿಷ್ಟ ಪ್ರತಿಭೆ ಎಂದೇ ಗುರುತಿಸಿಕೊಂಡ ರಾಜ್​ ಬಿ. ಶೆಟ್ಟಿ ತಮ್ಮ ನೂತನ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಕಳೆದ ಜೂನ್​ನಲ್ಲೇ ಬಿಡುಗಡೆಯಾಗಬೇಕಿದ್ದ ರಾಜ್​ ಬಿ. ಶೆಟ್ಟಿ (Raj B Shetty) ನಿರ್ದೇಶನದ ‘ಗರುಡಗಮನ ವೃಷಭವಾಹನ’ (Garudagamana Vrishabhavahana) ಚಿತ್ರ ಕೊರೊನಾ ದೆಸೆಯಿಂದ ಬಿಡುಗಡೆಯಾಗದೆ ಬಾಕಿ ಉಳಿದಿದ್ದು, ಇದೀಗ ಹೊಸ ದಿನಾಂಕ ನಿಗದಿಯಾಗಿದೆ.

ಈ ಕುರಿತು ಚಿತ್ರತಂಡ ಅಧಿಕೃತ ಘೋಷಣೆ ಮಾಡಿದ್ದು, ಜೂನ್ 4 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಶಿವ ಮತ್ತು ಹರಿಯ ಪ್ರಪಂಚಕ್ಕೆ ಬರಲು ತಯಾರಾಗಿರಿ, ಮಂಗಳಾದೇವಿಗೆ ಸ್ವಾಗತ ಎಂದು ಪೋಸ್ಟ್ ಮಾಡಿರುವ ರಾಜ್​ ಬಿ.ಶೆಟ್ಟಿ ಚಿತ್ರದ ಕುರಿತು ಮತ್ತಷ್ಟು ಕುತೂಹಲ ಹುಟ್ಟುವಂತೆ ಮಾಡಿದ್ದಾರೆ.

ಚಿತ್ರದಲ್ಲಿ ರಾಜ್​ ಬಿ.ಶೆಟ್ಟಿ ಮತ್ತು ರಿಷಬ್​ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ತೆರೆಯ ಮೇಲೆ ಯಾವ ರೀತಿಯ ಕಮಾಲ್ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ. ಸಿನಿರಸಿಕರಲ್ಲಿ ಗರುಡ ಗಮನ ವೃಷಭ ವಾಹನ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದ್ದು, ಚಿತ್ರ ಬಿಡುಗಡೆಯಾಗುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.

Prayashaha: ‘ಪ್ರಾಯಶಃ’ ಗಿಟಾರ್, ಕೊಳಲಿನ ಕರೆ ನಿಮ್ಮ ಮನಗೆಲ್ಲದೇ ಇರದು