ರೇಟಿಂಗ್ ವಿಚಾರದಲ್ಲಿ ‘ಲಿಯೋ’, ‘ಭಗವಂತ್ ಕೇಸರಿ’ ಚಿತ್ರಗಳನ್ನು ಹಿಂದಿಕ್ಕಿದ ‘ಘೋಸ್ಟ್’

|

Updated on: Oct 20, 2023 | 12:04 PM

ನವರಾತ್ರಿ ಪ್ರಯುಕ್ತ ಕನ್ನಡದಲ್ಲಿ ‘ಘೋಸ್ಟ್​’, ತಮಿಳಿನಲ್ಲಿ ‘ಲಿಯೋ’ ಹಾಗೂ ತೆಲುಗಿನಲ್ಲಿ ‘ಭಗವಂತ್ ಕೇಸರಿ’ ಸಿನಿಮಾ ರಿಲೀಸ್ ಆಗಿದೆ. ಅಕ್ಟೋಬರ್ 19ರಂದು ರಿಲೀಸ್ ಆದ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿವೆ.

ರೇಟಿಂಗ್ ವಿಚಾರದಲ್ಲಿ ‘ಲಿಯೋ’, ‘ಭಗವಂತ್ ಕೇಸರಿ’ ಚಿತ್ರಗಳನ್ನು ಹಿಂದಿಕ್ಕಿದ ‘ಘೋಸ್ಟ್’
ಲಿಯೋ, ಶಿವಣ್ಣ, ಬಾಲಯ್ಯ
Follow us on

ಹಬ್ಬದ ಸಂದರ್ಭದಲ್ಲಿ ಬಾಕ್ಸ್ ಆಫೀಸ್ ಕ್ಲ್ಯಾಶ್​ಗಳು ಸಾಮಾನ್ಯ. ಹಲವು ಸಿನಿಮಾಗಳು ಈ ಸಂದರ್ಭದಲ್ಲಿ ರಿಲೀಸ್ ಆಗುತ್ತವೆ. ಆದರೆ, ಗೆಲುವು ಎಲ್ಲಾ ಸಿನಿಮಾಗಳಿಗೂ ಸಿಗುವುದಿಲ್ಲ. ನವರಾತ್ರಿ ಪ್ರಯುಕ್ತ ಕನ್ನಡದಲ್ಲಿ ‘ಘೋಸ್ಟ್​’, ತಮಿಳಿನಲ್ಲಿ ‘ಲಿಯೋ’ ಹಾಗೂ ತೆಲುಗಿನಲ್ಲಿ ‘ಭಗವಂತ್ ಕೇಸರಿ’ ಸಿನಿಮಾ (Bhagavant Kesari) ರಿಲೀಸ್ ಆಗಿದೆ. ಅಕ್ಟೋಬರ್ 19ರಂದು ರಿಲೀಸ್ ಆದ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿವೆ. ಹಾಗಾದರೆ ಈ ಚಿತ್ರಗಳು ಪಡೆದ ರೇಟಿಂಗ್ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ವಿವರ.

‘ಘೋಸ್ಟ್’

ಶಿವರಾಜ್​ಕುಮಾರ್ ನಟನೆಯ, ಶ್ರೀನಿ ನಿರ್ದೇಶನದ ‘ಘೋಸ್ಟ್’ ಸಿನಿಮಾ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಸೃಷ್ಟಿ ಮಾಡಿತ್ತು. ಈ ನಿರೀಕ್ಷೆಯನ್ನು ಸಿನಿಮಾ ಹುಸಿ ಮಾಡಿಲ್ಲ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕ ಮಾಡಿದೆ. ‘ಬುಕ್​ ಮೈ ಶೋ’ ಆ್ಯಪ್​​ನಲ್ಲಿ ಈ ಚಿತ್ರಕ್ಕೆ ಈವರೆಗೆ (ಅಕ್ಟೋಬರ್ 20, ಮಧ್ಯಾಹ್ನ 12 ಗಂಟೆ) 2.8 ಸಾವಿರ ಮಂದಿ ವೋಟ್ ಮಾಡಿದ್ದು, 9.2 ರೇಟಿಂಗ್ ಸಿಕ್ಕಿದೆ.

ಲಿಯೋ

‘ಲಿಯೋ’ ಸಿನಿಮಾ ಜನರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈ ಚಿತ್ರವನ್ನು ಕೆಲವರು ಅತಿಯಾಗಿ ಇಷ್ಟಪಟ್ಟರೆ ಇನ್ನೂ ಕೆಲವರು ತೆಗಳಿದ್ದಾರೆ. ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ ಉತ್ತಮ ರೀತಿಯಲ್ಲಿ ಕಮಾಯಿ ಮಾಡುತ್ತಿದೆ. ಈ ಚಿತ್ರಕ್ಕೆ 1.25 ಲಕ್ಷ ಮಂದಿ ವೋಟ್ ಮಾಡಿದ್ದು, 8.5 ರೇಟಿಂಗ್ ಪಡೆದುಕೊಂಡಿದೆ.

ಭಗವಂತ್ ಕೇಸರಿ

ನಂದಮೂರಿ ಬಾಲಕೃಷ್ಣ, ಕಾಜಲ್ ಅಗರ್​ವಾಲ್, ಶ್ರೀಲೀಲಾ, ಅರ್ಜುನ್ ರಾಮ್​ಪಾಲ್ ಮೊದಲಾದವರು ನಟಿಸಿರುವ ‘ಭಗವಂತ್ ಕೇಸರಿ’ ಸಿನಿಮಾ ಅಕ್ಟೋಬರ್ 19ರಂದು ಬಿಡುಗಡೆ ಆಗಿದೆ. ಈ ಸಿನಿಮಾಗೆ 37 ಸಾವಿರ ಮಂದಿ ರೇಟಿಂಗ್ ನೀಡಿದ್ದು, 8.9 ಅಂಕ ಪಡೆದಿದೆ.

ಇದನ್ನೂ ಓದಿ: ಮೊದಲ ದಿನ ಭರ್ಜರಿ ಗಳಿಕೆ ಮಾಡಿದ ‘ಘೋಸ್ಟ್’ ಸಿನಿಮಾ; ಇಲ್ಲಿದೆ ಕಲೆಕ್ಷನ್ ವಿವರ

ಇನ್ನೂ ಇದೆ ಸಿನಿಮಾ

ತೆಲುಗಿನಲ್ಲಿ ರವಿ ತೇಜ ನಟನೆಯ ‘ಟೈಗರ್ ನಾಗೇಶ್ವರ್ ರಾವ್’, ಹಿಂದಿಯಲ್ಲಿ ಟೈಗರ್ ಶ್ರಾಫ್ ಅಭಿನಯದ ‘ಗಣಪತ್’ ಸಿನಿಮಾ ಇಂದು (ಅಕ್ಟೋಬರ್ 20) ರಿಲೀಸ್ ಆಗಿದೆ. ಇವುಗಳ ರೇಟಿಂಗ್ ಇನ್ನಷ್ಟೇ ಗೊತ್ತಾಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ