
ಗಿಲ್ಲಿ ನಟ ಅವರು ಬಿಗ್ ಬಾಸ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಸ್ಯ ಪಾತ್ರಗಳ ಮೂಲಕ ಗಮನ ಸೆಳೆದ ಅವರು ಈಗ ದೊಡ್ಮನೆಗೆ ಅತಿಥಿಯಾಗಿದ್ದಾರೆ. ಅವರು ಈ ವೇದಿಕೆ ಮೂಲಕ ಸಾಕಷ್ಟು ಜನಪ್ರಿಯತೆ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ಹಿನ್ನೆಲೆ ಬಗ್ಗೆ, ಅವರು ಮಾಡಿದ ಶೋಗಳ ಬಗ್ಗೆ ಇಲ್ಲಿದೆ ವಿವರ.
ನಟರಾಜ್ ಎಂಬುದು ಗಿಲ್ಲಿ ನಟನ ನಿಜವಾದ ಹೆಸರು. ಅವರು ಹುಟ್ಟಿ ಬೆಳೆದಿದ್ದು. ಮಂಡ್ಯ ಜಿಲ್ಲೆಯ ಮಳವಳ್ಳಿಯ ಮಟದಪುದಲ್ಲಿ. ನಟರಾಜ್ ಅವರಿಗೆ ರೈತಾಪಿ ಕುಟುಂಬದ ಹಿನ್ನೆಲೆ ಇದೆ. ಅವರು ಎಸ್ಎಸ್ಎಲ್ಸಿ ಪಾಸ್ ಮಾಡಿ ನಂತರ ಐಟಿಐ ಓದಿದರು. ಡೈಲಾಗ್ಗಳನ್ನು ಹೇಳಿಕೊಂಡು, ಅದರಲ್ಲೂ ಲವ್ ಸಂಬಂಧಿತ ಡೈಲಾಗ್ನ ಹೇಳಿ ಫೇಮಸ್ ಆದವರು ಗಿಲ್ಲಿ ನಟ. ಈ ಮೂಲಕ ಅವರು ಎಲ್ಲರ ಗಮನ ಸೆಳೆದರು.
ನಟರಾಜ್ ಅವರು ಜೀ ಕನ್ನಡದ ‘ಕಾಮಿಡಿ ಕಿಲಾಡಿಗಳು ಸೀಸನ್ 4’ ಶೋ ಮೂಲಕ ಗಮನ ಸೆಳೆದರು. ಆ ಬಳಿಕ ‘ಭರ್ಜರಿ ಬ್ಯಾಚುಲರ್ಸ್’, ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್’, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 8’ನ ಭಾಗ ಆದರು. ಇತ್ತೀಚೆಗೆ ಪ್ರಸಾರ ಕಂಡ ಕಲರ್ಸ್ನ ‘ಕ್ವಾಟ್ಲೆ ಕಿಚನ್’ ಶೋನಲ್ಲೂ ನಟರಾಜ್ ಕಾಣಿಸಿಕೊಂಡರು.
ಇದನ್ನೂ ಓದಿ: ‘ಕಾಮಿಡಿ ಕಿಲಾಡಿಗಳು’ ಹಾಸ್ಯ ಕಲಾವಿದ ಗಿಲ್ಲಿ ನಟನ ಹೊಸ ಸಿನಿಮಾ ‘ಸರ್ವೇ ನಂಬರ್ 45’
ವೇದಿಕೆ ಮೇಲೆ ಬರುವಾಗ ಗಿಲ್ಲಿ ಅವರು ಲುಂಗಿ ಧರಿಸಿ ಬಂದಿದ್ದರು. ಈ ವೇಳೆ ಸುದೀಪ್ ಅವರು ಅವರಿಗೆ ಕೌಂಟರ್ ಕೊಟ್ಟಿದ್ದಾರೆ. ‘ಕಳೆದ ಬಾರಿ ಹನುಮಂತ ಕೂಡ ಹೀಗೆ ಬಂದ್ರು ಗೆದ್ದರು. ಇದೆಲ್ಲ ವರ್ಕ್ ಆಗುತ್ತೆ’ ಎಂದು ಸುದೀಪ್ ಅವರು ಗಿಲ್ಲಿಯ ಕಾಲೆಳೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.