ನಿರ್ದೇಶನಕ್ಕೆ ಕಂಬ್ಯಾಕ್ ಮಾಡಲು ರೆಡಿ ಆದ ಕನ್ನಡದ ಇಬ್ಬರು ಹಿರಿಯ ನಿರ್ದೇಶಕರು
ಕೂಡ್ಲು ರಾಮಕೃಷ್ಣ ಹಾಗೂ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶನಕ್ಕೆ ಕಂಬ್ಯಾಕ್ ಮಾಡಲು ರೆಡಿ ಆಗಿದ್ದಾರೆ. ಇಬ್ಬರೂ ನಿರ್ದೇಶಕರಿಗೆ ‘ಅನ್ವೇಷಣೆ’ ನಿರ್ಮಾಣ ಸಂಸ್ಥೆ ಬಂಡವಾಳ ಹೂಡುತ್ತಿದೆ. ತೀರ್ಥಹಳ್ಳಿಯ ಕೆಲವರು ಒಟ್ಟಾಗಿ ಈ ಸಿನಿಮಾನ ನಿರ್ಮಿಸುತ್ತಿದ್ದಾರೆ.

ಹಲವು ರಾಷ್ಟ್ರ ಪ್ರಶಸ್ತಿ ವಿಜೇತ ಗಿರೀಶ್ ಕಾಸರವಳ್ಳಿ ಹಾಗೂ ಕೂಡ್ಲು ರಾಮಕೃಷ್ಣ ಅವರು ನಿರ್ದೇಶನಕ್ಕೆ ಕಂಬ್ಯಾಕ್ ಮಾಡೋಕೆ ರೆಡಿ ಆಗಿದ್ದಾರೆ. ಇಬ್ಬರು ನಿರ್ದೇಶನ ಮಾಡುತ್ತಿರುವ ಎರಡು ಪ್ರತ್ಯೇಕ ಸಿನಿಮಾಗಳಿಗೆ ಒಂದೇ ನಿರ್ಮಾಣ ಸಂಸ್ಥೆ ಬಂಡವಾಳ ಹೂಡುತ್ತಿದೆ ಅನ್ನೋದು ವಿಶೇಷ. ಈ ಎರಡೂ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾದಿದ್ದಾರೆ.
2020ರಲ್ಲಿ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರವನ್ನು ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿದ್ದರು. ಇದಾದ ಬಳಿಕ ಅವರು ಒಂದು ಗ್ಯಾಪ್ ತೆಗೆದುಕೊಂಡಿದ್ದರು. ಈಗ ಅವರು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಕೂಡ್ಲು ರಾಮಕೃಷ್ಣ ಅವರು ಹೊಸ ಸಿನಿಮಾ ನಿರ್ದೇಶನ ಮಾಡಲು ರೆಡಿ ಆಗಿದ್ದಾರೆ.
ಇಬ್ಬರೂ ನಿರ್ದೇಶಕರಿಗೆ ‘ಅನ್ವೇಷಣೆ’ ನಿರ್ಮಾಣ ಸಂಸ್ಥೆ ಬಂಡವಾಳ ಹೂಡುತ್ತಿದೆ. ತೀರ್ಥಹಳ್ಳಿಯ ಕೆಲವರು ಒಟ್ಟಾಗಿ ಈ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಒಂದೇ ರೀತಿಯ ಮನಸ್ಥಿತಿಯ ಕೆಲವರು ಸೇರಿಕೊಂಡು ಸಿನಿಮಾಗೆ ಹಣ ಹೂಡುತ್ತಿದ್ದಾರೆ. ಇದು ಕ್ರೌಡ್ ಫಂಡಿಗ್ ಸಿನಿಮಾ ಆಗಿದ್ದು, ಈ ಚಿತ್ರದ ಕಥೆ, ಚಿತ್ರಕಥೆ ಬರಹಗಾರರು, ಕಲಾವಿದರು, ತಂತ್ರಜ್ಞರು ತೀರ್ಥಹಳ್ಳಿಯವರೇ ಅನ್ನೋದು ವಿಶೇಷ.
ಗಿರೀಶ್ ಕಾಸರವಳ್ಳಿ ಅವರು ಈ ಬಾರಿ ಡಾ. ಯುಆರ್ ಅನಂತಮೂರ್ತಿ ಅವರು ಬರೆದ ‘ಆಕಾಶ ಮತ್ತು ಬೆಕ್ಕು’ ಪುಸ್ತಕ ಆಧರಿಸಿ ಸಿನಿಮಾ ಮಾಡುತ್ತಿದ್ದಾರೆ. ಅನಂತಮೂರ್ತಿ ಬರೆದ ಕೃತಿ ಆಧರಿಸಿ ಗಿರೀಶ್ ಕಾಸರವಳ್ಳಿ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಈ ಮೊದಲು ‘ಘಟಶ್ರಾದ್ಧ’ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ಇದಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು.
ಇದನ್ನೂ ಓದಿ: ಗಿರೀಶ್ ಕಾಸರವಳ್ಳಿಯವರ ಮೊದಲ ಚಿತ್ರ ‘ಘಟಶ್ರಾದ್ಧ’ಕ್ಕೆ ತಂತ್ರಜ್ಞಾನದ ಲೇಪ
ರಾಮಕೃಷ್ಣ ಅವರು ‘ಕಾಡಿನ ನೆಂಟರು’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಿತ್ ತೀರ್ಥಳ್ಳಿ ಅವರು ಈ ಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್ ಮಂಚಾಲೆ, ರಾಕೇಶ್ ಅಡಿಗ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾಗೆ ಕೊಡಚಾದ್ರಿ, ಆಗುಂಬೆ, ಕವಿಶೈಲ ಮೊದಲಾದ ಕಡೆ ಶೂಟಿಂಗ್ ನಡೆದಿದೆ. ಭಾಗ್ಯ ಕೃಷ್ಣಮೂರ್ತಿ ಅವರು ಬರೆದ ‘ಶಾನಭೋಗರ ಮಗಳು’ ಕಾದಂಬರಿ ಆಧರಿಸಿ ರಾಮಕೃಷ್ಣ ಸಿನಿಮಾ ಮಾಡಿದ್ದು, ಇದು ರಿಲೀಸ್ಗೆ ರೆಡಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




