ಗಣೇಶ್ ಹಾಗೂ ದಿಗಂತ್ ಒಂದೇ ವೇದಿಕೆಯಲ್ಲಿ; ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿದ ಗೋಲ್ಡನ್ ಸ್ಟಾರ್

| Updated By: shivaprasad.hs

Updated on: Jul 08, 2021 | 2:44 PM

Kshamisi Nimma Khateyalli Hanavilla: ಸ್ಯಾಂಡಲ್​ವುಡ್​ನ ಜನಪ್ರಿಯ ತಾರಾ ಜೋಡಿ ದಿಗಂತ್ ಹಅಗೂ ಐಂದ್ರಿತಾ ರೇ ಅವರ ನಟನೆಯ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದ ಮೊದಲ ಲಿರಿಕಲ್ ವಿಡಿಯೊವನ್ನು ಗೋಲ್ಡನ್ ಸ್ಟಾರ್ ಗಣೇಶ್ ಇಂದು ಬಿಡುಗಡೆ ಮಾಡಿದ್ದಾರೆ.

ಗಣೇಶ್ ಹಾಗೂ ದಿಗಂತ್ ಒಂದೇ ವೇದಿಕೆಯಲ್ಲಿ; ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿದ ಗೋಲ್ಡನ್ ಸ್ಟಾರ್
ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದ ಮೊದಲ ಹಾಡಿನ ಬಿಡುಗಡೆಯ ಪೋಸ್ಟರ್
Follow us on

ಬೆಂಗಳೂರು: ತನ್ನ ಶೀರ್ಷಿಕೆಯಿಂದಲೇ ಕುತೂಹಲ ಕೆರಳಿಸಿರುವ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಲಿರಿಕಲ್ ವಿಡಿಯೊ ಸಾಂಗ್ ಅನ್ನು ನಟ ಗೋಲ್ಡನ್​ ಸ್ಟಾರ್ ಗಣೇಶ್ ಅವರು ಇದೀಗ ಬಿಡುಗಡೆ ಮಾಡಿದ್ದಾರೆ. ದಿಗಂತ್, ಐಂದ್ರಿತಾ ರೇ ಮತ್ತು ರಂಜನಿ ರಾಘವನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವು ಮಲೆನಾಡ ಸೊಗಡನ್ನು ಹೊಂದಿರುವುದು ವಿಶೇಷ. ಈಗ ಚಿತ್ರ ಮೊದಲ ಹಾಡು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್​ನಲ್ಲಿ ಅಭಿಮಾನಿಗಳ ವೀಕ್ಷಣೆಗೆ ಲಭ್ಯವಾಗಿದೆ. ಈ ಚಿತ್ರವನ್ನು ವಿನಾಯಕ ಕೋಡ್ಸರ ಅವರು ನಿರ್ದೇಶಿಸಿದ್ದಾರೆ.

ಹಾಡಿನ ಬಿಡುಗಡೆಗೆ ಬಂದಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಹಾಗು ದಿಗಂತ್ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ದಿಗಂತ್ ನಟಿಸಿರೋ ಸಿನಿಮಾದ ಹಾಡನ್ನ ರಿಲೀಸ್ ಮಾಡಿದ ಗಣೇಶ್, ಸಿನಿಮಾರಂಗದ ಚಟುವಟಿಕೆ ಆರಂಭ ಆಗಿರೋ ಹಿನ್ನೆಲೆ ಸಂಭ್ರಮ ಹಂಚಿಕೊಂಡಿರು. ನಟಿ ರಂಜನಿ ರಾಘವನ್ ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮದಲ್ಲಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ರಂಜನಿ ರಾಘವನ್ ಗಾಳಿಪಟ ಸಿನಿಮಾ ಬ್ಲಾಕಲ್ಲಿ ಟಿಕೇಟ್ ತಗೊಂಡ್ ಸಿನಿಮಾ ನೋಡಿದ್ದೆ ಅಂತ ಗಣೇಶ್ ದಿಗಂತ್ ಜೋಡಿ ನೋಡಿ ಹಳೆಯ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

ಇದೀಗ ಬಿಡುಗಡೆಯಾಗಿರುವ ‘ಒಲವೇ ಒಲವೇ’ ಎಂಬ ಈ ಹಾಡಿನ ಸಾಹಿತ್ಯವನ್ನು ವಿಶ್ವಜಿತ್ ರಾವ್ ಬರೆದಿದ್ದು, ಪ್ರಜ್ವಲ್ ಪೈ ಅವರು ಸಂಗೀತವನ್ನು ನೀಡಿದ್ದಾರೆ. ಖ್ಯಾತ ಗಾಯಕ ಹರಿಚರಣ್ ಅವರು ಹಾಡಿಗೆ ಧ್ವನಿಯಾಗಿದ್ದಾರೆ. ಹಾಡು ಸಂಪೂರ್ಣವಾಗಿ ಮಲೆನಾಡಿನ ಜೀವನಶೈಲಿಯನ್ನೇ ರೂಪಕವಾಗಿ ಹೊಂದಿದೆ. ಹಾಡಿನಲ್ಲಿ ದಿಗಂತ್ ಮಲೆನಾಡಿನ ಯುವಕನಾಗಿ ಕಾಣಿಸಿಕೊಂಡಿರುವುದನ್ನು ಕಾಣಬಹುದು. ಜೊತೆಗೆ ಐಂದ್ರಿತಾ ರೈ ಅವರೂ ಇದ್ದಾರೆ. ನಿಜ ಜೀವನದ ಈ ರಿಯಲ್ ಜೋಡಿ, ಮದುವೆಯ ನಂತರ ಮೊದಲ ಬಾರಿಗೆ ಒಟ್ಟಿಗೇ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಹಾಡನ್ನು ಬಹಳ ಭಾವಪೂರ್ಣವಾಗಿ ಹಾಡಿರುವ ಹರಿಚರಣ್, ಹಾಡನ್ನು ಹೇಳುತ್ತಾ ಹೇಗೆ ಎಂಜಾಯ್ ಮಾಡಿದ್ದಾರೆ ಎಂಬುವುದನ್ನು ನೋಡುವುದಕ್ಕೆ ವಿಡಿಯೊವನ್ನೇ ನೋಡಿ.

(Golden star Ganesh releases first song of upcoming Kannada Movie Kshamisi Nimma Khateyalli Hanavilla starring Diganth and Aindritha Ray)

Published On - 2:41 pm, Thu, 8 July 21