ಕಣ್ಣಿಲ್ಲದ ವ್ಯಕ್ತಿ ಪಾತ್ರದಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್​! ಯಾವ ಸಿನಿಮಾ? ಯಾರದ್ದು ನಿರ್ದೇಶನ?

ಈ ಹಿಂದೆ ನಿರ್ದೇಶಕ ಸಿಂಪಲ್​ ಸುನಿ ಮತ್ತು ಗಣೇಶ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿದೆ ‘ಚಮಕ್​’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಈಗ ಎರಡನೇ ಬಾರಿಗೆ ಅವರಿಬ್ಬರು ‘ಸಖತ್’ ಚಿತ್ರದಲ್ಲಿ ಒಂದಾಗಿದ್ದಾರೆ. ಈ ಸಿನಿಮಾದಲ್ಲಿ ಗಣೇಶ್​​ಗೆ ವಿಶೇಷ ಪಾತ್ರವಿದೆ.

ಕಣ್ಣಿಲ್ಲದ ವ್ಯಕ್ತಿ ಪಾತ್ರದಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್​! ಯಾವ ಸಿನಿಮಾ? ಯಾರದ್ದು ನಿರ್ದೇಶನ?
ಸಖತ್​ ಸಿನಿಮಾದಲ್ಲಿ ಗಣೇಶ್​
Edited By: ಆಯೇಷಾ ಬಾನು

Updated on: Mar 23, 2021 | 7:55 AM

‘ಚೆಲ್ಲಾಟ’ ಸಿನಿಮಾದಿಂದ ನಾಯಕನಾದ ‘ಗೋಲ್ಡನ್​ ಸ್ಟಾರ್​’ ಗಣೇಶ್​ ಅವರು ಈವರೆಗೂ ಹಲವಾರು ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಅನೇಕ ಏಳು-ಬೀಳುಗಳನ್ನು ಅವರು ಕಂಡಿದ್ದಾರೆ. ನಾನಾ ವೇಷದಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈಗ ಮತ್ತೊಂದು ಗೆಟಪ್​ನಲ್ಲಿ ಜನರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ವಿಶೇಷ ಏನೆಂದರೆ, ಈ ಬಾರಿ ಕಣ್ಣು ಕಾಣದ ವ್ಯಕ್ತಿಯ ಪಾತ್ರದ ಮೂಲಕ ಮನರಂಜಿಸುವ ಪ್ರಯತ್ನ ಅವರದ್ದು.

ಸಿಂಪಲ್​ ಸುನಿ ಮತ್ತು ಗಣೇಶ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ ‘ಸಖತ್​’ ಈಗಾಗಲೇ ಒಂದು ಪೋಸ್ಟರ್​ ಬಿಡುಗಡೆ ಮಾಡಿತ್ತು. ಅದರಲ್ಲಿ ಗಾಯಕನ ಗೆಟಪ್​ನಿಂದ ಗಣೇಶ್​ ಗಮನ ಸೆಳೆದಿದ್ದರು. ಆದರೆ ಈಗ ಹೊರಬಂದಿರುವ ಹೊಸ ಫೋಟೋಗಳಲ್ಲಿ ಗಣೇಶ್​ ಅಂಧನಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಲವರ್ ಬಾಯ್​ ಆಗಿ, ಸದಾ ಸ್ಟೈಲಿಶ್​ ಲುಕ್​ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಗಣೇಶ್​ ಅವರಿಗೆ ಈ ಸಿನಿಮಾದಲ್ಲಿ ನಿರ್ದೇಶಕ ಸುನಿ ಸಂಪೂರ್ಣ ಡಿಫರೆಂಟ್​ ಪಾತ್ರ ನೀಡಿದಂತಿದೆ.

ಇಂಥ ಪಾತ್ರ ಮಾಡುತ್ತಿರುವುದಕ್ಕೆ ಸ್ವತಃ ಗಣೇಶ್​ ತುಂಬ ಎಗ್ಸೈಟ್​ ಆಗಿದ್ದಾರೆ. ಆ ಬಗ್ಗೆ ಅವರು ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ‘ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ. ಮೊದಲ ಬಾರಿಗೆ ನನ್ನ ನೋಟವನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಕಣ್ಗಳಿಗೆ, ಬಿಚ್ಚಿಟ್ಟ ಪ್ರೀತಿಯ ಬೆಳಕು ಚೆಲ್ಲಿ ಹಾರೈಸಿ’ ಎಂದು ಗಣೇಶ್​ ಟ್ವೀಟ್​ ಮಾಡಿದ್ದಾರೆ.

ಈ ಫೋಟೋಗಳನ್ನು ನೋಡಿದ ಬಳಿಕ ಗಣೇಶ್​ ಅಭಿಮಾನಿಗಳು ‘ಸಖತ್​’ ಸಿನಿಮಾ ಮೇಲೆ ಇಟ್ಟುಕೊಂಡಿದ್ದ ನಿರೀಕ್ಷೆ ಡಬಲ್​ ಆಗಿದೆ. ಈ ಚಿತ್ರಕ್ಕೆ ಮಾ.22ರಿಂದ ಶೂಟಿಂಗ್​ ಆರಂಭ ಆಗಿದೆ. ಗಣೇಶ್​ಗೆ ಜೋಡಿಯಾಗಿ ನಟಿ ನಿಶ್ವಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಹಾಸ್ಯ ನಟ ಧರ್ಮಣ್ಣ ಕಾಣಿಸಿಕೊಳ್ಳಲಿದ್ದಾರೆ. ಅವರ ಫಸ್ಟ್​ಲುಕ್​ ಪೋಸ್ಟರ್​ ಕೂಡ ಈಗಾಗಲೇ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.

ಈ ಹಿಂದೆ ಸುನಿ ಮತ್ತು ಗಣೇಶ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿದ್ದ ‘ಚಮಕ್​’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಆ ಕಾರಣದಿಂದಲೂ ಈ ಕಾಂಬಿನೇಷನ್​ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ. ಇದಲ್ಲದೆ, ಯೋಗರಾಜ್​ ಭಟ್​ ನಿರ್ದೇಶನದ ‘ಗಾಳಿಪಟ 2’, ‘ತ್ರಿಬಲ್​ ರೈಡಿಂಗ್’​ ಮುಂತಾದ ಕೆಲಸಗಳಲ್ಲೂ ಗಣೇಶ್​ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ: National Film Awards 2019: ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಒಲಿದ ರಾಷ್ಟ್ರ ಪ್ರಶಸ್ತಿ

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us