ನಟಿ ಮೇಘನಾ ರಾಜ್ಗೆ ಸೋಮವಾರ (ಮೇ 3) ಜನ್ಮದಿನದ ಸಂಭ್ರಮ. ಇದೇ ಮೊದಲ ಬಾರಿಗೆ ಅವರು ಚಿರಂಜೀವಿ ಸರ್ಜಾ ಇಲ್ಲದೆಯೇ ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ, ಜನ್ಮದಿನಕ್ಕೂ ಒಂದು ದಿನ ಮೊದಲು ಅವರು ವಿವಾಹವಾಗಿದ್ದರು. ಚಿರು ಹಾಗೂ ಮೇಘನಾ ರಾಜ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಮನೆಯಲ್ಲೂ ಸಮ್ಮತಿ ಸಿಕ್ಕಿತ್ತು. 2018ರ ಮೇ 2ರಂದು ಮೇಘನಾ ರಾಜ್ ಚಿರು ಜತೆ ಹಸೆಮಣೆ ಏರಿದ್ದರು. ಈ ಮದುವೆಗೆ ಸ್ಯಾಂಡಲ್ವುಡ್ ಮಂದಿ ಸಾಕ್ಷಿ ಆಗಿದ್ದರು.
ನಟಿ ಮೇಘನಾ ರಾಜ್ ಕನ್ನಡ ಮಾತ್ರವಲ್ಲದೆ, ಮಲಯಾಳಂನಲ್ಲೂ ನಟಿಸಿದ್ದಾರೆ. ಮದುವೆ ಆದ ನಂತರದಲ್ಲಿ ಮೇಘನಾ ಅಷ್ಟಾಗಿ ಚಿತ್ರರಂಗದಲ್ಲಿ ಆ್ಯಕ್ಟಿವ್ ಇಲ್ಲ. 2020ರ ಜೂನ್ 7ರಂದು ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ತುತ್ತಾಗಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಚಿರು ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಮೇಘನಾ ಗರ್ಭಿಣಿ. ಅವರಿಗೆ ಮಗು ಜನಿಸಿದ್ದು, ಅದರ ಆರೈಕೆಯಲ್ಲಿ ಮೇಘನಾ ತೊಡಗಿಕೊಂಡಿದ್ದಾರೆ.
ಮೇಘನಾ ರಾಜ್-ಚಿರು ವಿವಾಹ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ. ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಮೇಘನಾ ರಾಜ್ ಯಾವುದೇ ಫೋಟೋಗಳನ್ನು ಅಪ್ಲೋಡ್ ಮಾಡಿಲ್ಲ.
ಚಿರು ಮತ್ತು ಮೇಘನಾ ಜತೆಯಾಗಿ ನಿಂತಿರುವ ಫೋಟೋವನ್ನು ಮೇಘನಾ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು . ಈ ಫೋಟೋಗೆ ಐ ಲವ್ ಯೂ, ಹಿಂದಿರುಗಿ ಬಾ ಎಂದು ಮೇಘನಾ ಕ್ಯಾಪ್ಶನ್ ನೀಡಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳ ಕಣ್ಣು ಒದ್ದೆ ಆಗಿತ್ತು.
ಇದನ್ನೂ ಓದಿ: Meghana Raj: ಜೂನಿಯರ್ ಚಿರುಗೆ ಆರು ತಿಂಗಳು; ಸಂಭ್ರಮಿಸಿದ ಮೇಘನಾ ರಾಜ್
Meghana Raj: ಚಿರು ಐ ಲವ್ ಯೂ, ಹಿಂದಿರುಗಿ ಬಾ; ಭಾವುಕರಾದ ನಟಿ ಮೇಘನಾ ರಾಜ್
(Happy Birthday Meghana Raj Meghana Married Chiru Sarja Before Her birthday)
Published On - 8:40 pm, Sun, 2 May 21