Updated on: Feb 06, 2021 | 2:43 PM
ನಟಿ ಶ್ರುತಿ ಅಣ್ಣ ಶರಣ್ಗೆ ಜನ್ಮದಿನದ ಶುಭಾಶಯ ಹೇಳಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಬಾಲ್ಯದ ಫೋಟೋ ಹಾಕಿರುವ ಶೃತಿ ಶರಣ್ಗೆ ಆಲ್ ದಿ ಬೆಸ್ಟ್ ಎಂದಿದ್ದಾರೆ.
ಪ್ರೀತಿಯ ಅಣ್ಣನಿಗೆ ಜನುಮದಿನದ ಶುಭಾಶಯಗಳು ಬದುಕು ಮತ್ತಷ್ಟು ಬೆಳಗಲಿ. ಮುಂದಿನ ನಿನ್ನ ನಿರ್ಮಾಣದ ಚಿತ್ರ ಗುರು ಶಿಷ್ಯರು ನಿನ್ನೆಲ್ಲ ಸಿನಿಮಾಗಳಿಗಿಂತ ದೊಡ್ಡ ಯಶಸ್ಸನ್ನು ಕಾಣಲಿ ದೇವರು ನಿನಗೆ ಆಯಸ್ಸು ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ ಅಣ್ಣ ಎಂದು ಬರೆದುಕೊಂಡಿದ್ದಾರೆ.
ನನ್ನ ಬಾಲ್ಯದ ದಿನಗಳನ್ನು ಅಪ್ಪ-ಅಮ್ಮ ನಿಗಿಂತ ನಿನ್ನೊಂದಿಗೆ ಜಾಸ್ತಿ ಕಳೆದಿದ್ದು ಸುಖವೊ ದುಃಖವೋ ಇಂದಿಗೆ ಅವೆಲ್ಲವೂ ಸುಂದರ ನೆನಪುಗಳು. ನಿನ್ನ ಕೆಲವು ಬಾಲ್ಯದ ದಿನಗಳ ಫೋಟೋ ನಿನ್ನ ಅಭಿಮಾನಿಗಳಿಗಾಗಿ ಎಂದು ಹಳೆಯ ದಿನಗಳನ್ನು ಶೃತಿ ನೆನೆದಿದ್ದಾರೆ.