ಸಿಸಿಬಿ ಪೊಲೀಸರ ಎದುರು ಬಿಲ್ಡಪ್​ ಕೊಡಲು ಹೋಗಿ ಎಡವಟ್ಟು ಮಾಡಿಕೊಂಡ ಹೇಮಾ

| Updated By: ರಾಜೇಶ್ ದುಗ್ಗುಮನೆ

Updated on: May 24, 2024 | 10:50 AM

ಸಿಸಿಬಿ ಪೊಲೀಸರು ಹೇಮಾ ಅವರನ್ನು ವಶಕ್ಕೆ ಪಡೆದರು. ಪೊಲೀಸರಿಗೆ ಹೇಮಾ ನಟಿ ಅನ್ನೋದೆ ಗೊತ್ತಿರಲಿಲ್ಲ. ಎಲ್ಲರನ್ನು ವಿಚಾರಣೆ ಮಾಡುವಂತೆ ಹೇಮಾ ಅವರನ್ನೂ ವಿಚಾರಣೆ ನಡೆಸಲಾಗಿತ್ತು. ಪೊಲೀಸರ ಎದುರು ಹೇಮಾ ಬಿಲ್ಡಪ್​ ಕೊಟ್ಟುಕೊಂಡರು.

ಸಿಸಿಬಿ ಪೊಲೀಸರ ಎದುರು ಬಿಲ್ಡಪ್​ ಕೊಡಲು ಹೋಗಿ ಎಡವಟ್ಟು ಮಾಡಿಕೊಂಡ ಹೇಮಾ
ಹೇಮಾ
Follow us on

ನಟಿ ಹೇಮಾ (Hema) ಅವರಿಗೆ ಸಂಕಷ್ಟ ಹೆಚ್ಚಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿಯ ಜಿಆರ್ ಫಾರ್ಮ್​ಹೌಸ್​ನಲ್ಲಿ ರೇವ್ ಪಾರ್ಟಿ ನಡೆಯುವಾಗ ಹೇಮಾ ಕೂಡ ಇದ್ದರು. ಅವರು ಮಾದಕ ವಸ್ತು ಸೇವಿಸಿದ್ದರು ಅನ್ನೋದು ರಕ್ತ ಪರೀಕ್ಷೆಯಿಂದ ಖಚಿತವಾಗಿದೆ. ಈ ಮಧ್ತೆ ಅವರು ಸಿಸಿಬಿ ಪೊಲೀಸರ ಎದುರು ಬಿಲ್ಡಪ್ ಕೊಡಲು ಹೋಗಿ ತೊಂದರೆ ಅನುಭವಿಸಿದ್ದಾರೆ. ಅವರ ಹೆಸರು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಲು ಅವರು ಮಾಡಿಕೊಂಡ ಎಡವಟ್ಟೇ ಕಾರಣ.

ಸಿಸಿಬಿ ಪೊಲೀಸರು ಹೇಮಾ ಅವರನ್ನು ವಶಕ್ಕೆ ಪಡೆದರು. ಪೊಲೀಸರಿಗೆ ಹೇಮಾ ನಟಿ ಅನ್ನೋದೆ ಗೊತ್ತಿರಲಿಲ್ಲ. ಎಲ್ಲರನ್ನು ವಿಚಾರಣೆ ಮಾಡುವಂತೆ ಹೇಮಾ ಅವರನ್ನೂ ವಿಚಾರಣೆ ನಡೆಸಲಾಗಿತ್ತು. ಪೊಲೀಸರ ಎದುರು ಹೇಮಾ ಬಿಲ್ಡಪ್​ ಕೊಟ್ಟುಕೊಂಡರು. ‘ನಾನು ದೊಡ್ಡ ನಟಿ. ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ’ ಎಂದಿದ್ದರಂತೆ. ಈ ವೇಳೆ ಪೊಲೀಸರು ಪರಿಶೀಲನೆ ಮಾಡಿದಾಗ ಅವರು ನಟಿ ಅನ್ನೋದು ಗೊತ್ತಾಗಿದೆ.

ಈ ಮಧ್ಯೆ ಹೇಮಾ ಅವರು ಸಿಸಿಬಿ ಪೊಲೀಸರ ಜೊತೆ ಕಿರಿಕ್ ಕೂಡ ಮಾಡಿದ್ದಾರೆ. ವಿಚಾರಣೆಗೆ ಎಂದು ಪೊಲೀಸರು ಇರಿಸಿಕೊಂಡಿದ್ದಾಗ ಹೇಮಾ ಕಿರಿಕ್ ತೆಗೆದಿದ್ದರು. ‘ನನಗೆ ಸರಿಯಾದ ಊಟ ಕೊಟ್ಟಿಲ್ಲ ನಾನೋರ್ವ ನಟಿ. ಆದರೂ ಸರಿಯಾಗಿ ಟ್ರೀಟ್ ಮಾಡಿಲ್ಲ’ ಎಂದು ಕಿರಿಕ್ ಮಾಡಿಕೊಂಡಿದ್ದರು. ಜಿಆರ್ ಫಾರ್ಮ್​​ಹೌಸ್​​ನಲ್ಲಿ ರೇವ್ ಪಾರ್ಟಿ ಶನಿವಾರ ರಾತ್ರಿಯಿಂದಲೇ ಶುರುವಾಗಿತ್ತು. ಒಂದು ದಿನ ಪಾರ್ಟಿ ಆದ ಬಳಿಕ ಸಿಸಿಬಿ ಪೊಲೀಸರಿಗೆ ವಿಚಾರ ತಿಳಿದು ರೇಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ರೇವ್ ಪಾರ್ಟಿ ಪ್ರಕರಣ: ನಟಿ ಹೇಮಾ, ಆಶು ರೈ ರಿಪೋರ್ಟ್ ಪಾಸಿಟಿವ್

ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿಯ ಜಿಆರ್ ಫಾರ್ಮ್​ಹೌಸ್​ನಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು. ಮಾಹಿತಿ ತಿಳಿದ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಹಲವರು ಸಿಕ್ಕಿ ಬಿದ್ದಿದ್ದಾರೆ. ಹಲವು ಸೆಲೆಬ್ರಿಟಿಗಳ ಹೆಸರು ಈ ಪಾರ್ಟಿಯಲ್ಲಿ ಕೇಳಿ ಬಂದಿತ್ತು. ಅನೇಕ ಸೆಲೆಬ್ರಿಟಿಗಳು, ಸಾಮಾನ್ಯರು ಡ್ರಗ್ ಸೇವನ್ ಮಾಡಿದ್ದು ಖಚಿತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.