ಮಜಾ ಟಾಕೀಸ್​ನಲ್ಲಿ ಕುರಿ ಪ್ರತಾಪ್​ ಸಂಭಾವನೆ ಎಷ್ಟು ಗೊತ್ತಾ?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 10, 2021 | 5:18 PM

ಮತ್ತೆ ಮಜಾ ಟಾಕೀಸ್​ ಆರಂಭವಾಗಿದ್ದು, ಕುರಿ ಪ್ರತಾಪ್​ ಎಲ್ಲರನ್ನು ನಗಿಸುವ ಕೆಲಸ ಮಾಡುತ್ತಿದ್ದಾರೆ. ಕುರಿ ಪ್ರತಾಪ್​ ಮಜಾ ಟಾಕೀಸ್​ನಲ್ಲಿ ನಟಿಸೋಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ.

ಮಜಾ ಟಾಕೀಸ್​ನಲ್ಲಿ ಕುರಿ ಪ್ರತಾಪ್​ ಸಂಭಾವನೆ ಎಷ್ಟು ಗೊತ್ತಾ?
ಕುರಿ ಪ್ರತಾಪ್​
Follow us on

ಕುರಿ ಪ್ರತಾಪ್​​ ಸ್ಯಾಂಡಲ್​ವುಡ್​ನ ಪ್ರಮುಖ ಹಾಸ್ಯ ನಟ. ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿರವ ಅವರು ಅನೇಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದಾರೆ. ಕಳೆದ ಬಿಗ್​ಬಾಸ್​ ಸೀಸನ್​ನಲ್ಲಿ ಅವರು ರನ್ನರ್​ ಅಪ್​ ಕೂಡ ಆಗಿದ್ದರು. ಮಜಾ ಟಾಕೀಸ್​ ಮನೆಯಲ್ಲಿ ಕುರಿ ಪ್ರತಾಪ್​ ಕೂಡ ಪ್ರಮುಖ ಸದಸ್ಯ. ಹಾಗಿದ್ರೆ, ಅವರ ಒಂದು ದಿನದ ಸಂಭಾವನೆ ಎಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸೃಜನ್​ ಲೋಕೇಶ್​ ಮಜಾ ಟಾಕೀಸ್​ ನಡೆಸಿಕೊಡುತ್ತಿದ್ದಾರೆ. ಇದರಲ್ಲಿ ಪ್ರಮುಖ ಕಾಮಿಡಿಯನ್​ ಆಗಿ ಕಾಣಿಸಿಕೊಂಡಿದ್ದಾರೆ ಕುರಿ ಪ್ರತಾಪ್​. ಅವರು ಬಿಗ್​ಬಾಸ್​ ಮನೆಗೆ ತೆರಳಿದ್ದಾಗ ಈ ಶೋ ನಿಂತಿತ್ತು. ನಂತರ ಕೊರೊನಾ ಬಂದ ಕಾರಣ ಈ ಶೋ ನಡೆಸಲು ಸಾಧ್ಯವಾಗಿಲ್ಲ. ಈಗ ಮತ್ತೆ ಮಜಾ ಟಾಕೀಸ್​ ಆರಂಭವಾಗಿದ್ದು, ಕುರಿ ಪ್ರತಾಪ್​ ಎಲ್ಲರನ್ನು ನಗಿಸುವ ಕೆಲಸ ಮಾಡುತ್ತಿದ್ದಾರೆ.

ಕುರಿ ಪ್ರತಾಪ್​ ಮಜಾ ಟಾಕೀಸ್​ನಲ್ಲಿ ನಟಿಸೋಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಒಂದು ಮೂಲಗಳ ಪ್ರಕಾರ ಪ್ರತಿ ಎಪಿಸೋಡ್​ಗೆ ಕುರಿ ಪ್ರತಾಪ್​ 50 ಸಾವಿರ ರೂಪಾಯಿ ಸಂಭವಾನೆಯನ್ನು ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರಂತೆ.

ಕುರಿ ಅವರ ಹಾಸ್ಯ ಭರಿತ ಡೈಲಾಗ್​ ನೋಡೋಕೆ ಮಜಾ ಟಾಕೀಸ್ ನೋಡುವವರ ಸಂಖ್ಯೆ ತುಂಬಾನೇ ದೊಡ್ಡದಿದೆ. ಹೀಗಾಗಿ, ಅವರು ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ಅಚ್ಚರಿಯೇನಲ್ಲ. ಇನ್ನು, ಸಿನಿಮಾ ಶೂಟಿಂಗ್​ಗೆ ಒಂದು ದಿನಕ್ಕೆ 30-40 ಸಾವಿರ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ .

ರಾಧಿಕಾ ಕುರಿತ ಪ್ರಶ್ನೆಗೆ ‘ಯಾರಪ್ಪ ಅವರೆಲ್ಲ? ಅದ್ಯಾರೋ ನಂಗೊತ್ತಿಲ್ಲ’ ಎಂದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ!