Yash19: ಯಶ್ ಜೊತೆಗಿನ ಸಿನಿಮಾ ಸೆಟ್ಟೇರದಿರಲು ಇದುವೇ ಕಾರಣ; ಸಂಪೂರ್ಣವಾಗಿ ವಿವರಿಸಿದ ನರ್ತನ್

ಯಶ್​​ಗೋಸ್ಕರ ನರ್ತನ್ ಕಥೆ ರೆಡಿ ಮಾಡಿಕೊಂಡಿದ್ದರು. ಈ ಕಥೆಯನ್ನು ಯಶ್ ಕೂಡ ಕೇಳಿದ್ದರು. ಆದರೂ ಸಿನಿಮಾ ಫೈನಲ್ ಆಗಲೇ ಇಲ್ಲ.

Yash19: ಯಶ್ ಜೊತೆಗಿನ ಸಿನಿಮಾ ಸೆಟ್ಟೇರದಿರಲು ಇದುವೇ ಕಾರಣ; ಸಂಪೂರ್ಣವಾಗಿ ವಿವರಿಸಿದ ನರ್ತನ್
ಯಶ್-ನರ್ತನ್

Updated on: May 26, 2023 | 11:49 AM

‘Yash19’ ಸಿನಿಮಾ ಸೆಟ್ಟೇರೋದು ಯಾವಾಗ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ವಿಚಾರದಲ್ಲಿ ಉತ್ತರ ಸಿಗೋಕೆ ಇನ್ನೂ ಕೆಲವು ತಿಂಗಳು ಅಭಿಮಾನಿಗಳು ಕಾಯಲೇಬೇಕು ಎನ್ನಲಾಗುತ್ತಿದೆ. ಈ ಮೊದಲು ನರ್ತನ್ (Narthan) ಹಾಗೂ ಯಶ್ (Yash) ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಘೋಷಣೆ ಕೂಡ ಆಗುತ್ತದೆ ಎನ್ನಲಾಯಿತು. ಆದರೆ, ಈ ಸಿನಿಮಾ ಸೆಟ್ಟೇರಲೇ ಇಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ನರ್ತನ್ ಅವರು ವಿವರಿಸಿದ್ದಾರೆ. ಅವರು ಅಸಲಿ ಕಾರಣ ನೀಡಿದ್ದಾರೆ.

‘ಮಫ್ತಿ’ ಚಿತ್ರದಿಂದ ಫೇಮಸ್ ಆದವರು ನರ್ತನ್. ಮೊದಲ ಸಿನಿಮಾದಲ್ಲೇ ಅವರು ಭರಪೂರ ಗೆಲುವು ಕಂಡರು. ಈ ಚಿತ್ರದಿಂದ ಅವರ ಖ್ಯಾತಿ ಹೆಚ್ಚಿತು. ಶಿವರಾಜ್​ಕುಮಾರ್ ಹಾಗೂ ಶ್ರೀಮುರಳಿ ಕಾಂಬಿನೇಷನ್ ಕೆಲಸ ಮಾಡಿತ್ತು. ಈ ಸಿನಿಮಾ ಬಳಿಕ ನರ್ತನ್ ಯಾವುದೇ ಹೊಸ ಸಿನಿಮಾ ಘೋಷಿಸಿರಲಿಲ್ಲ. ಈಗ ಅವರು ‘ಭೈರತಿ ರಣಗಲ್’ ಚಿತ್ರ ಅನೌನ್ಸ್ ಮಾಡಿದ್ದಾರೆ. ಈ ಚಿತ್ರದ ಮುಹೂರ್ತದ ವೇಳೆ ಅವರು ಯಶ್ 19 ಬಗ್ಗೆಯೂ ಮಾತನಾಡಿದ್ದಾರೆ.

ಯಶ್​​ಗೋಸ್ಕರ ನರ್ತನ್ ಕಥೆ ರೆಡಿ ಮಾಡಿಕೊಂಡಿದ್ದರು. ಈ ಕಥೆಯನ್ನು ಯಶ್ ಕೂಡ ಕೇಳಿದ್ದರು. ಆದರೆ, ಈ ಕಥೆಯ ಎಳೆ ಈಗಾಗಲೇ ಬಂದು ಹೋದ ಸಿನಿಮಾದ ಕಥೆಗೆ ಮ್ಯಾಚ್ ಆಗುತ್ತಿತ್ತಂತೆ. ಹೀಗಾಗಿ, ಸಿನಿಮಾನ ಅರ್ಧಕ್ಕೆ ಕೈಬಿಡಲಾಗಿದೆ. ಯಶ್ ಹಾಗೂ ನರ್ತನ್ ನಡುವೆ ಮೊದಲಿನ ಬಾಂಧವ್ಯ ಮುಂದುವರಿದಿದೆ. ಮುಂದಿನ ವರ್ಷಗಳಲ್ಲಿ ಇಬ್ಬರೂ ಸಿನಿಮಾ ಮಾಡಲಿ ಅನ್ನೋದು ಫ್ಯಾನ್ಸ್ ಕೋರಿಕೆ.

ಇದನ್ನೂ ಓದಿ: ರಾಜಕಾರಣಿಗಳು ಗೆದ್ದ ಬಳಿಕ ಏನು ಮಾಡಬೇಕು ಎಂಬುದನ್ನು ಹೇಳಿದ ಯಶ್ 

‘ಭೈರತಿ ರಣಗಲ್’ ಸಿನಿಮಾಗೆ ಶಿವಣ್ಣ ಹೀರೋ. ಗೀತಾ ಆರ್ಟ್ಸ್​ ನಿರ್ಮಾಣ ಸಂಸ್ಥೆ ಮೂಲಕ ಈ ಚಿತ್ರ ಮೂಡಿಬರುತ್ತಿದೆ. ‘ವೇದ’ ಸಿನಿಮಾ ಬಳಿಕ ಗೀತಾ ಶಿವರಾಜ್​ಕುಮಾರ್ ನಿರ್ಮಾಣ ಮಾಡುತ್ತಿರುವ ಎರಡನೇ ಸಿನಿಮಾ ಇದು ಅನ್ನೋದು ವಿಶೇಷ.

ಇದನ್ನೂ ಓದಿ: ’ಯಶ್ 19’ ಚಿತ್ರದ ಬಗ್ಗೆ ಟಿವಿ9ಗೆ ಮಾಹಿತಿ ನೀಡಿದ ನರ್ತನ್​; ನಿರ್ದೇಶಕ ಹೇಳಿದ್ದೇನು?

‘ಕೆಜಿಎಫ್ 2’ ಸಿನಿಮಾ 2022ರ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಯಶ್ ಅವರು ದೇಶ-ವಿದೇಶ ಸುತ್ತಾಡಿಕೊಂಡಿದ್ದಾರೆ. ಅವರ ಹೊಸ ಸಿನಿಮಾ ಆದಷ್ಟು ಬೇಗ ಘೋಷಣೆ ಆಗಲಿ ಅನ್ನೋದು ಫ್ಯಾನ್ಸ್ ಕೋರಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us