‘ಬ್ಯಾಕ್ ಬೆಂಚರ್ಸ್’ ಹೋಳಿ ಆಚರಿಸಿದರೆ ಎಷ್ಟು ಜೋರಾಗಿರುತ್ತೆ ನೀವೇ ನೋಡಿ..

ಬಹುತೇಕ ಕೆಲಸಗಳನ್ನು ಮುಗಿಸಿಕೊಂಡಿರುವ ‘ಬ್ಯಾಕ್​ ಬೆಂಚರ್ಸ್​’ ಸಿನಿಮಾ ಈಗ ರಿಲೀಸ್​ಗೆ ಸಜ್ಜಾಗಿದೆ. ಈಗ ಬಿಡುಗಡೆ ಆಗಿರುವ ಹೋಳಿ ಹಾಡನ್ನು ನೋಡಿದ ಬಳಿಕ ಪ್ರೇಕ್ಷಕರಿಗೆ, ಅದರಲ್ಲೂ ವಿಶೇಷವಾಗಿ ಯುವ ಪ್ರೇಕ್ಷಕರಿಗೆ ಸಿನಿಮಾದ ಬಗ್ಗೆ ನಿರೀಕ್ಷೆ ಜಾಸ್ತಿ ಆಗಿದೆ. ರಂಜನ್ ನರಸಿಂಹಮೂರ್ತಿ, ಜಿತಿನ್ ಆರ್ಯನ್, ಅನುಷಾ ಸುರೇಶ್, ಶಶಾಂಕ್ ಸಿಂಹ, ಮಾನ್ಯ ಗೌಡ, ಆಕಾಶ್, ಕುಂಕುಮ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

‘ಬ್ಯಾಕ್ ಬೆಂಚರ್ಸ್’ ಹೋಳಿ ಆಚರಿಸಿದರೆ ಎಷ್ಟು ಜೋರಾಗಿರುತ್ತೆ ನೀವೇ ನೋಡಿ..
ಬ್ಯಾಕ್​ ಬೆಂಚರ್ಸ್​

Updated on: Mar 25, 2024 | 6:11 PM

ಎಲ್ಲ ಕಡೆಗಳಲ್ಲಿ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಸಿನಿಮಾ ಮಂದಿ ಕೂಡ ಹೋಳಿಯ ರಂಗಿನಲ್ಲಿ ಮುಳುಗಿದ್ದಾರೆ. ಕೆಲವು ಚಿತ್ರತಂಡಗಳು ಹೊಸ ಹೊಸ ಪೋಸ್ಟರ್​ ಹಂಚಿಕೊಂಡಿವೆ. ಇನ್ನು, ಕನ್ನಡದ ‘ಬ್ಯಾಕ್​ ಬೆಂಚರ್ಸ್​’ (Back Benchers) ಸಿನಿಮಾ ತಂಡದಿಂದ ಹೋಳಿ ಹಬ್ಬದ ಪ್ರಯುಕ್ತ ಹೊಸ ಹಾಡು ಬಿಡುಗಡೆ ಆಗಿದೆ. ಬ್ಯಾಕ್​ ಬೆಂಚರ್ಸ್​ ಏನೇ ಮಾಡಿದರೂ ಅದ್ದೂರಿಯಾಗಿಯೇ ಇರುತ್ತದೆ. ಅವರು ಹೋಳಿ (Holi) ಆಡಿದರೆ ಕೇಳೋದೇ ಬೇಡ. ಕ್ಯಾಂಪಸ್​ನ ತುಂಬೆಲ್ಲ ರಂಗು ತುಂಬುವಂತಹ ಈ ಹಾಡಿಗೆ ಖ್ಯಾತ ಗಾಯಕ ಶಂಕರ್​ ಮಹದೇವನ್​ (Shankar Mahadevan) ಅವರು ಧ್ವನಿ ನೀಡಿದ್ದಾರೆ. ‘ದಿ ಹೋಳಿ ಹಾಡು’ ಬಗ್ಗೆ ಇಲ್ಲಿದೆ ಮಾಹಿತಿ..

ರಮ್ಯಾ ಅವರು ‘ಪಿ.ಪಿ. ಪ್ರೊಡಕ್ಷನ್ಸ್’ ಲಾಂಛನದ ಮೂಲಕ ನಿರ್ಮಿಸಿರುವ ‘ಬ್ಯಾಕ್​ ಬೆಂಚರ್ಸ್​’ ಸಿನಿಮಾಗೆ ಬಿ.ಆರ್. ರಾಜಶೇಖರ್ ಅವರು ನಿರ್ದೇಶನ ಮಾಡಿದ್ದಾರೆ. ಈಗ ಬಿಡುಗಡೆ ಆಗಿರುವ ಹಾಡಿಗೆ ಹೃದಯಶಿವ ಅವರು ಸಾಹಿತ್ಯ ಬರೆದಿದ್ದಾರೆ. ಹೋಳಿ ಹಬ್ಬದ ಪ್ರಯುಕ್ತ ‘ಆನಂದ್​ ಆಡಿಯೋ’ ಮೂಲಕ ಈ ಹಾಡು ಬಿಡುಗಡೆ ಆಗಿದೆ. ನಕುಲ್​ ಅಭ್ಯಂಕರ್​ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಶಂಕರ್​ ಮಹದೇವನ್​ ಅವರ ಕಂಠದಿಂದ ಹೋಳಿ ಹಾಡಿಗೆ ಹೊಸ ಜೋಶ್​ ಬಂದಿದೆ.

ಇದನ್ನೂ ಓದಿ: ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿ ಹೋಳಿ ಆಚರಣೆ; ಬಣ್ಣದಲ್ಲಿ ಮಿಂದೆದ್ದ ತಾರೆಯರು

ಈ ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರೇ ನಟಿಸಿದ್ದಾರೆ ಎಂಬುದು ವಿಶೇಷ. ಹೋಳಿ ಹಾಡು ನೋಡಿದ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾ ನೋಡಿದರೆ ಪ್ರೇಕ್ಷಕರೆಲ್ಲರಿಗೂ ಕಾಲೇಜು ದಿನಗಳು ನೆನಪಿಗೆ ಬರುತ್ತವೆ ಎಂಬುದು ನಿರ್ದೇಶಕರ ಅಭಿಪ್ರಾಯ.‘ನಮ್ಮ ಸಿನಿಮಾದಲ್ಲಿ ನಟಿಸಿರುವ ಬಹುತೇಕ ಹೊಸ ಪ್ರತಿಭೆಗಳನ್ನು ಆಡಿಷನ್ ಮೂಲಕ ಆಯ್ಕೆ ಮಾಡಿದ್ದೇವೆ. ಅಂಥ ಕಲಾವಿದರಿಗೆ ಒಂದು ವರ್ಷ ತರಬೇತಿ ನೀಡಿದ್ದೇವೆ. ಆ ಬಳಿಕ ಶೂಟಿಂಗ್​ ಮಾಡಲಾಯಿತು’ ಎಂದು ನಿರ್ದೇಶಕ ಬಿ.ಆರ್​. ರಾಜಶೇಖರ್​ ಹೇಳಿದ್ದಾರೆ.

‘ಬ್ಯಾಕ್​ ಬೆಂಚರ್ಸ್​’ ಸಿನಿಮಾದ ಹೋಳಿ ಹಾಡು:

The Holi Haadu | Shankar Mahadevan | Nakul Abhyankar | B R Rajshekar | Ranjan| Jathin |Manohar Joshi

ರಂಜನ್ ನರಸಿಂಹಮೂರ್ತಿ, ಆಕಾಶ್, ಜಿತಿನ್ ಆರ್ಯನ್, ಶಶಾಂಕ್ ಸಿಂಹ, ಮಾನ್ಯ ಗೌಡ, ಅನುಷಾ ಸುರೇಶ್, ಕುಂಕುಮ್, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳಿಕರ್ ಮುಂತಾದವರು ‘ಬ್ಯಾಕ್​ ಬೆಂಚರ್ಸ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಮನೋಹರ್ ಜೋಶಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಬಹುತೇಕ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಹೋಳಿ ಹಾಡನ್ನು ನೋಡಿದ ಬಳಿಕ ಸಿನಿಪ್ರಿಯರಿಗೆ, ಅದರಲ್ಲೂ ವಿಶೇಷವಾಗಿ ಯುವ ಪ್ರೇಕ್ಷಕರಿಗೆ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us