‘ಕೆಜಿಎಫ್’ ಸಿನಿಮಾ ನಿರ್ಮಾಣ ಮಾಡಿದ ನಂತರದಲ್ಲಿ ಹೊಂಬಾಳೆ ಫಿಲ್ಮ್ಸ್ ಖ್ಯಾತಿ ದೇಶದಾದ್ಯಂತ ಹಬ್ಬಿದೆ. ಕೇವಲ ಕನ್ನಡ ಮಾತ್ರವಲ್ಲದೆ, ತೆಲುಗು ಚಿತ್ರರಂಗಕ್ಕೂ ಹೊಂಬಾಳೆ ಫಿಲ್ಮ್ಸ್ ಕಾಲಿಟ್ಟಿದೆ. ಈಗ ಈ ನಿರ್ಮಾಣ ಸಂಸ್ಥೆ ಹೊಸ ಆರಂಭಕ್ಕೆ ನಾಂದಿ ಹಾಡೋಕೆ ರೆಡಿ ಆಗಿದೆ. ಪುನೀತ್ ರಾಜ್ಕುಮಾರ್ ನಟನೆಯ ಮುಂದಿನ ಚಿತ್ರಕ್ಕೆ ‘ಲೂಸಿಯಾ’ ಪವನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಪವನ್ ಇತ್ತೀಚೆಗೆ ಘೋಷಣೆ ಮಾಡಿದ್ದರು. ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊಂಬಾಳೆ ಫಿಲ್ಮ್ಸ್ ಹೊತ್ತುಕೊಂಡಿದೆ. ಈ ಚಿತ್ರದ ಟೈಟಲ್ ನಾಳೆ (ಜುಲೈ 1) ಲಾಂಚ್ ಆಗಲಿದೆ.
ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ಹೊಂಬಾಳೆ ಫಿಲ್ಮ್ಸ್, ‘ಹೊಸ ಆರಂಭಕ್ಕೆ ಹೆಸರಿಡುವ ಸಮಯ ಬಂದಾಯ್ತು. ನಾಳೆ ಬೆಳಿಗ್ಗೆ 11:46ಕ್ಕೆ #HombaleFilms9 ಟೈಟಲ್ ಅನಾವರಣ’ ಎಂದಿದೆ.
ಹೊಸ ಆರಂಭಕ್ಕೆ ಹೆಸರಿಡುವ ಸಮಯ ಬಂದಾಯ್ತು. ನಾಳೆ ಬೆಳಿಗ್ಗೆ 11:46ಕ್ಕೆ #HombaleFilms9 ಟೈಟಲ್ ಅನಾವರಣ ⚡@PuneethRajkumar @pawanfilms @VKiragandur @hombalefilms @HombaleGroup pic.twitter.com/BPRlQyi8Lq
— Hombale Films (@hombalefilms) June 30, 2021
ಪವನ್ ಕುಮಾರ್ ಈಗಾಗಲೇ ‘ಲೂಸಿಯಾ’, ‘ಯು-ಟರ್ನ್’ನಂಥ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ನಿರ್ದೇಶನದ ಚಿತ್ರಗಳು ತುಂಬಾನೇ ಭಿನ್ನ ಕಥೆ ಹೊಂದಿರುತ್ತವೆ ಅನ್ನೋದು ವಿಶೇಷ. ಈಗ ಪುನೀತ್ ಚಿತ್ರಕ್ಕೆ ಪವನ್ ನಿರ್ದೇಶನ ಮಾಡುತ್ತಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಸಹಜವಾಗಿಯೇ ಹೆಚ್ಚಿದೆ.
ಸದ್ಯ ಹೊಂಬಾಳೆ ಸಿನಿಮಾ ಮೂರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ. ‘ಕೆಜಿಎಫ್ 2’ ಸಿನಿಮಾ ಕೆಲಸಗಳು ಕೊನೆಯ ಹಂತದಲ್ಲಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಪ್ರಭಾಸ್ ನಟಿಸುತ್ತಿರುವ ‘ಸಲಾರ್’ ಸಿನಿಮಾಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊಂಬಾಳೆ ಫಿಲ್ಮ್ಸ್ ಹೊತ್ತುಕೊಂಡಿದೆ. ಶ್ರೀಮುರಳಿ ನಟನೆಯ ‘ಭಗೀರ’ ಚಿತ್ರಕ್ಕೂ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ಈಗ ಈ ಸಾಲಿಗೆ ಪುನೀತ್ ಸಿನಿಮಾ ಕೂಡ ಸೇರಿಕೊಂಡಿದೆ.
ಇದನ್ನೂ ಓದಿ: ಸಿನಿಮಾದಲ್ಲಿ ಮಾಡಿದ ಕೆಲಸವನ್ನು ನಿಜ ಜೀವನದಲ್ಲಿಯೂ ಮಾಡಿ ತೋರಿಸಿದ ಪುನೀತ್ ರಾಜ್ಕುಮಾರ್
‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರಕ್ಕಾಗಿ ಕೈ ಜೋಡಿಸಿದ ಪುನೀತ್ ರಾಜ್ಕುಮಾರ್ ಮತ್ತು ನಿರ್ದೇಶಕ ಸತ್ಯ ಪ್ರಕಾಶ್
Published On - 6:11 pm, Wed, 30 June 21