‘ಹೊಂದಿಸಿ ಬರೆಯಿರಿ’ ಸಿನಿಮಾ ಉಚಿತವಾಗಿ ನೋಡಿ; ಇಷ್ಟವಾದರೆ ಮಾತ್ರ ಹಣ ಕೊಡಿ

ನವೀನ್ ಶಂಕರ್, ಶ್ರೀಮಹದೇವ್, ಪ್ರವೀಣ್ ತೇಜ್, ಭಾವನಾ ರಾವ್, ಐಶಾನಿ ಶೆಟ್ಟಿ, ಅರ್ಚನಾ ಜೋಯಿಸ್, ಅನಿರುದ್ದ್ ಆಚಾರ್ಯ, ಸಂಯುಕ್ತಾ ಹೊರನಾಡು ಮುಂತಾದವರು ‘ಹೊಂದಿಸಿ ಬರೆಯಿರಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಈಗ ಯೂಟ್ಯೂಬ್​ನಲ್ಲಿ ಉಚಿತವಾಗಿ ಲಭ್ಯವಾಗಿದೆ. ಚಿತ್ರತಂಡದವರು ಪ್ರೇಕ್ಷಕರಿಗೆ ಇಂಥ ಆಫರ್​ ನೀಡಿದ್ದಾರೆ.

‘ಹೊಂದಿಸಿ ಬರೆಯಿರಿ’ ಸಿನಿಮಾ ಉಚಿತವಾಗಿ ನೋಡಿ; ಇಷ್ಟವಾದರೆ ಮಾತ್ರ ಹಣ ಕೊಡಿ
‘ಹೊಂದಿಸಿ ಬರೆಯಿರಿ’ ಸಿನಿಮಾ ಪೋಸ್ಟರ್​

Updated on: May 20, 2024 | 4:10 PM

2023ರ ಫೆಬ್ರವರಿಯಲ್ಲಿ ಕನ್ನಡದ ‘ಹೊಂದಿಸಿ ಬರೆಯಿರಿ’ (Hondisi Bareyiri) ಸಿನಿಮಾ ಬಿಡುಗಡೆಯಾಗಿ ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿತ್ತು. ರಾಮೇನಹಳ್ಳಿ ಜಗನ್ನಾಥ ಅವರು ನಿರ್ದೇಶನ ಮಾಡಿದ ಈ ಸಿನಿಮಾವನ್ನು ‘ಸಂಡೇ ಸಿನಿಮಾಸ್’ ಸಂಸ್ಥೆಯು ನಿರ್ಮಾಣ ಮಾಡಿದೆ. ಇದು ಈ ಬ್ಯಾನರ್​ನ ಮೊದಲ ಸಿನಿಮಾ. ವಿಶೇಷ ಏನೆಂದರೆ ‘ಹೊಂದಿಸಿ ಬರೆಯಿರಿ’ ಸಿನಿಮಾ ಈಗ ಯೂಟ್ಯೂಬ್​‌ನಲ್ಲೂ (YouTube) ಬಿಡುಗಡೆ ಆಗಿದೆ. ‘ಅಮೇಜಾನ್ ಪ್ರೈಮ್​ ವಿಡಿಯೋ’ ಒಟಿಟಿಯಲ್ಲಿ ಈಗಲೂ ವೀಕ್ಷಣೆಗೆ ಲಭ್ಯವಿದೆಯಾದರೂ ಭಾರತ, ಅಮೆರಿಕ ಹಾಗೂ ಯುಕೆ ಹೊರತಾಗಿ ಇತರೆ ದೇಶಗಳಲ್ಲಿ ಪ್ರಸಾರ ಆಗುತ್ತಿಲ್ಲ. ಆದ್ದರಿಂದ ಇನ್ನುಳಿದ ದೇಶಗಳ ಕನ್ನಡದ ಸಿನಿಮಾ (Kannada Cinema) ಪ್ರೇಕ್ಷಕರಿಗೆ ಈ ಸಿನಿಮಾ ತಲುಪಬೇಕು ಹಾಗೂ ಚಿತ್ರಮಂದಿರದಲ್ಲಿ ನೋಡಿರದ ಮತ್ತು ಒಟಿಟಿ ಚಂದಾದಾರರಲ್ಲದ ಪ್ರೇಕ್ಷಕರಿಗೂ ಸಿನಿಮಾ ಸಿಗಲಿ ಎಂಬ ಉದ್ದೇಶದಿಂದ ಯೂಟ್ಯೂಬ್​ನಲ್ಲಿ ರಿಲೀಸ್​ ಮಾಡಲಾಗಿದೆ.

ಇದೊಂದು ಭಿನ್ನ ಪ್ರಯತ್ನ. ‘ಹೊಂದಿಸಿ ಬರೆಯಿರಿ’ ಚಿತ್ರಕ್ಕೆ ಹಾಕಿದ್ದ ಹಣ ಪೂರ್ತಿ ವಾಪಸ್ ಆಗಿಲ್ಲ. ಹಾಗಿದ್ದರೂ ಕೂಡ ಚಿತ್ರತಂಡ ಈ ರೀತಿಯ ಗಟ್ಟಿ ನಿರ್ಧಾರ ಮಾಡಿದೆ. ಯೂಟ್ಯೂಬ್​ನಲ್ಲಿ ರೆಂಟಲ್ ಆಯ್ಕೆಯ ಮೂಲಕ ಒಂದಿಷ್ಟು ಹಣ ನಿಗದಿಪಡಿಸಿ ನೋಡಿ ಅಂತ ಕೇಳುವುದಕ್ಕಿಂತ ಉಚಿತವಾಗಿ ಎಲ್ಲರೂ ಸಿನಿಮಾ ನೋಡಲಿ ಎಂಬುದು ಚಿತ್ರತಂಡದ ಉದ್ದೇಶ. ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾದರೆ ಮಾತ್ರ ತೋಚಿದಷ್ಟು ಹಣವನ್ನು ನೀಡಲಿ ಎಂಬ ನಿರ್ಧಾರ ಮಾಡಲಾಗಿದೆ. ಆದ್ದರಿಂದ ನಿರ್ಮಾಣ ಸಂಸ್ಥೆಯಾದ ‘ಸಂಡೇ ಸಿನಿಮಾಸ್​’ನ ಕ್ಯೂಆರ್​ ಕೋಡ್​, ಯುಪಿಐ ಐಡಿ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ನೀಡಲಾಗಿದೆ. ಯೂಟ್ಯೂಬ್​ Description ಮೂಲಕವೂ ಈ ಮಾಹಿತಿ ಹಂಚಿಕೊಳ್ಳಲಾಗಿದೆ.

‘ಹೊಂದಿಸಿ ಬರೆಯಿರಿ’ ಸಿನಿಮಾ:

Hondisi Bareyiri Full Movie [Eng Subs] PraveenTej |NaveenShankar |Shri |Aishanishetty| Archana Jois

ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರು ಡೈರೆಕ್ಷನ್​ ಮಾಡುವುದರ ಜೊತೆಗೆ ತಮ್ಮ ಸ್ನೇಹಿತರ ಜೊತೆ ಸೇರಿ ‘ಸಂಡೇ ಸಿನಿಮಸ್’ ಸಂಸ್ಥೆಯ ಮೂಲಕ ‘ಹೊಂದಿಸಿ ಬರೆಯಿರಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ನವೀನ್ ಶಂಕರ್, ಪ್ರವೀಣ್ ತೇಜ್, ಶ್ರೀಮಹದೇವ್, ಭಾವನಾ ರಾವ್, ಅನಿರುದ್ದ್ ಆಚಾರ್ಯ, ಐಶಾನಿ ಶೆಟ್ಟಿ, ಸಂಯುಕ್ತಾ ಹೊರನಾಡು, ಅರ್ಚನಾ ಜೋಯಿಸ್ ಮುಂತಾದವರು ಅಭಿನಯಿಸಿದ್ದಾರೆ.

ಇದನ್ನೂ ಓದಿ: ಅಮೆಜಾನ್ ಹೊಸ ದಾಖಲೆ ಬರೆದ ಹೊಂದಿಸಿ ಬರೆಯಿರಿ: 50 ಮಿಲಿಯನ್ಸ್ ಮಿನಿಟ್ ಸ್ಟ್ರೀಮಿಂಗ್

ಈ ಬಗ್ಗೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಪ್ರತಿಕ್ರಿಯೆ ನೀಡಿದ್ದಾರೆ. ‘ಹೊಂದಿಸಿ ಬರೆಯಿರಿ ಸಿನಿಮಾದ ಯೂಟ್ಯೂಬ್​ ಲಿಂಕ್​ ಅನ್ನು ನಿಮ್ಮ ಸೋಶಿಯಲ್​ ಮೀಡಿಯಾದಲ್ಲಿ, ವಾಟ್ಸಪ್​ ಸ್ಟೇಟಸ್​ನಲ್ಲಿ ಹಂಚಿಕೊಳ್ಳಿ. ಆ ಮೂಲಕ ಎಲ್ಲರಿಗೂ ಇದು ತಲುಪಲಿ. ನಮ್ಮ ಸಂಸ್ಥೆಯ ಮುಂದಿನ ಚಿತ್ರಗಳನ್ನು ಪ್ರೋತ್ಸಾಹಿಸಿ. ಈಗಾಗಲೇ ಪ್ರೀ-ಪ್ರೊಡಕ್ಷನ್ ಹಂತದಲ್ಲಿ ಇರುವ ನಮ್ಮ ಮುಂದಿನ ಸಿನಿಮಾ ವಿವರಣೆಯನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 4:08 pm, Mon, 20 May 24

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us