ಅಮೆಜಾನ್ ಹೊಸ ದಾಖಲೆ ಬರೆದ ಹೊಂದಿಸಿ ಬರೆಯಿರಿ: 50 ಮಿಲಿಯನ್ಸ್ ಮಿನಿಟ್ ಸ್ಟ್ರೀಮಿಂಗ್

Kannada Movies on OTT: ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಮೆಚ್ಚುಗೆ ಗಳಿಸಿದ್ದ ಹೊಂದಿಸಿ ಬರೆಯಿರಿ ಕನ್ನಡ ಸಿನಿಮಾ ಒಟಿಟಿಯಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ.

ಅಮೆಜಾನ್ ಹೊಸ ದಾಖಲೆ ಬರೆದ ಹೊಂದಿಸಿ ಬರೆಯಿರಿ: 50 ಮಿಲಿಯನ್ಸ್ ಮಿನಿಟ್ ಸ್ಟ್ರೀಮಿಂಗ್
ಹೊಂದಿಸಿ ಬರೆಯಿರಿ
Follow us
ಮಂಜುನಾಥ ಸಿ.
|

Updated on: May 21, 2023 | 10:38 PM

ಐಪಿಎಲ್ (IPL) ಹಾಗೂ ಚುನಾವಣೆ ಅಬ್ಬರದ ನಡುವೆ ಚಿತ್ರಮಂದಿರಗಳು ಮಂಕಾಗಿವೆ. ಚುನಾವಣೆ ಮುಗಿದಿದೆಯಾದರೂ ಐಪಿಎಲ್ ಹವಾ ಜೋರಿದೆ. ಯಾವುದೇ ಪ್ರಮುಖ ನಟರ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಕಳೆದ ವಾರ ಬಿಡುಗಡೆ ಆದ ಡೇರ್​ಡೆವಿಲ್ ಮುಸ್ತಾಫಾ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆಯಾದರೂ ಬೇರೆ ಇತರೆ ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿಲ್ಲ. ಈ ನಡುವೆ ಕನ್ನಡ ಸಿನಿಮಾ (Kannada Movie) ಒಂದು ಒಟಿಟಿಯಲ್ಲಿ ಬಹುವಾಗಿ ಸದ್ದು ಮಾಡುತ್ತಿದೆ. ಅದುವೇ ಹೊಂದಿಸಿ ಬರೆಯಿರಿ.

ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗಲೂ ವಿಮರ್ಶಕರಿಂದ ಸಹೃದಯ ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ಗಿಟ್ಟಿಸಿದ್ದ ಹೊಂದಿಸಿ ಬರೆಯಿರಿ ಸಿನಿಮಾ ಚಿತ್ರಮಂದಿರದಲ್ಲಿ 50 ದಿನಗಳ ಪೂರೈಸಿ ಒಟಿಟಿಗೆ ಲಗ್ಗೆ ಇಟ್ಟಿತ್ತು. ಥಿಯೇಟರ್ ನಲ್ಲಿ ಹೊಂದಿಸಿ ಬರೆಯಿರಿ ಸಿನಿಮಾ ನೋಡದವರು ಅಮೇಜಾನ್ ನಲ್ಲಿ ಚಿತ್ರ ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರ ಪರಿಣಾಮ ಈ ಚಿತ್ರ ಒಟಿಟಿಯಲ್ಲಿ ಬರೋಬ್ಬರಿ 50 ಮಿಲಿಯನ್ಸ್ ಮಿನಿಟ್ ಸ್ಟ್ರೀಮಿಂಗ್ ಕಂಡು ದಾಖಲೆ ಸೃಷ್ಟಿಸಿದೆ.

ಈ ವರ್ಷದಲ್ಲಿ ಅತಿ ಹೆಚ್ಚು ಸ್ಟ್ರೀಮಿಂಗ್ ಕಂಡ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ ಹೊಂದಿಸಿ ಬರೆಯಿರಿ ಚಿತ್ರದ ಪಾಲಾಗಿದೆ. ಅಮೇಜಾನ್ ನಲ್ಲಿ ಬಿಗೆಸ್ಟ್ ಹಿಟ್ ಕಂಡಿರುವ ಈ ಚಿತ್ರವೀಗ ಯುಕೆ ಹಾಗೂ ಯುಎಸ್ ಎ ನಲ್ಲಿ ಸ್ಟ್ರೀಮ್ ಆಗುತ್ತಿದ್ದು, ವಿದೇಶಿ ಕನ್ನಡಿಗರು ಸಹ ಸಿನಿಮಾ ವೀಕ್ಷಿಸಬಹುದಾಗಿದೆ.

ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಜೊತೆಗೆ ತಮ್ಮ ಸ್ನೇಹಿತರ ಜೊತೆಗೂಡಿ ಸಂಡೇ ಸಿನಿಮಸ್ ಬ್ಯಾನರ್ ನಡಿ ನಿರ್ಮಾಣ ಮಾಡಿರುವ ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹದೇವ್, ಅನಿರುದ್ದ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ, ಸಂಯುಕ್ತ ಹೊರ್ನಾಡ್, ಅರ್ಚನಾ ಜೋಯಿಸ್ ಹಲವರು ನಟಿಸಿದ್ದಾರೆ. ಭಾವನೆಗಳ ಏರಿಳಿತ, ಕಾಲೇಜು ವಿದ್ಯಾರ್ಥಿಗಳ ಮಜವಾದ ಪಯಣ, ಪ್ರೀತಿ ಪ್ರೇಮ, ತುಂಟಾಟವನ್ನೇ ಇಟ್ಟುಕೊಂಡು ಹೆಣೆದ ಕಥೆ ಹೊಂದಿಸಿ ಬರೆಯಿರಿ ಚಿತ್ರ ಅಮೇಜಾನ್ ಒಟಿಟಿಯಲ್ಲಿ ಧಮಾಕ ಎಬ್ಬಿಸುತ್ತಿದೆ. ಪ್ರೊಫೆಸರ್ ಆಗಿದ್ದ ರಾಮೇನಹಳ್ಳಿ ಜಗನ್ನಾಥ್ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆಯಲ್ಲಿ ಗೆಲುವು ದಾಖಲಿಸಿದ್ದಾರೆ.

ನವೆಂಬರ್ 18ಕ್ಕೆ ಹೊಂದಿಸಿ ಬರೆಯಿರಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಪರಿಸ್ಥಿತಿಗಳಿಗೆ ಹೊಂದಿಕೊಂಡು ಸಾಗಬೇಕೆಂಬ ಸಂದೇಶವನ್ನು ಹೊಂದಿದ್ದ ಸಿನಿಮಾದಲ್ಲಿ ಕತೆಯ ಜೊತೆಗೆ ಕೆಲವು ಉಪಕತೆಗಳೂ ಸೇರಿಕೊಂಡಿದ್ದವು. ಸಿನಿಮಾದಲ್ಲಿ ಹಾಸ್ಯ, ಥ್ರಿಲ್ಲಿಂಗ್ ಅಂಶಗಳ ಜೊತೆಗೆ ಜೀವನ ಪಾಠ, ಭಾವುಕತೆಗಳಿಗೂ ನಿರ್ದೇಶಕರು ಅವಕಾಶ ಕಲ್ಪಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ