AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hostel Hudugaru Bekagiddare Trailer: ಮಿತಿ ಮೀರಿದೆ ಹಾಸ್ಟೆಲ್​ ಹುಡುಗರ ಹಾವಳಿ; ಏನೆಲ್ಲ ಮಾಡವ್ರೆ ನೀವೇ ನೋಡಿ

Hostel Hudugaru Bekagiddare Trailer: ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದೆ. ಈ ಸಿನಿಮಾದ ಅತಿಥಿ ಪಾತ್ರದಲ್ಲಿ ರಮ್ಯಾ, ರಿಷಬ್​ ಶೆಟ್ಟಿ, ಪವನ್​ ಕುಮಾರ್​, ದಿಗಂತ್​ ಮಂಚಾಲೆ ನಟಿಸಿದ್ದಾರೆ.

Hostel Hudugaru Bekagiddare Trailer: ಮಿತಿ ಮೀರಿದೆ ಹಾಸ್ಟೆಲ್​ ಹುಡುಗರ ಹಾವಳಿ; ಏನೆಲ್ಲ ಮಾಡವ್ರೆ ನೀವೇ ನೋಡಿ
ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ
ಮದನ್​ ಕುಮಾರ್​
|

Updated on: Jul 10, 2023 | 9:34 PM

Share

ಬಹಳ ದಿನಗಳಿಂದ.. ಅಲ್ಲಲ್ಲ, ಬಹಳ ತಿಂಗಳುಗಳಿಂದ.. ಅದೂ ಅಲ್ಲ.. ಒಂದೆರಡು ವರ್ಷಗಳಿಂದ ಬರೀ ಪ್ರೋಮೋಗಳ ಮೂಲಕವೇ ಸದ್ದು ಮಾಡುತ್ತಿದ್ದ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಚಿತ್ರತಂಡ ಅಂತೂ-ಇಂತೂ ಟ್ರೇಲರ್​ ಬಿಡುಗಡೆ ಮಾಡಿದೆ. ಇಂದು (ಜುಲೈ 10) ಅದ್ದೂರಿ ವೇದಿಕೆಯಲ್ಲಿ ಟ್ರೇಲರ್ ಲಾಂಚ್​ ಮಾಡಲಾಗಿದೆ. ಧ್ರುವ ಸರ್ಜಾ, ಅಶ್ವಿನಿ ಪುನೀತ್​ ರಾಜ್​ಕುಮಾರ್​, ರಿಷಬ್​ ಶೆಟ್ಟಿ (Rishab Shetty), ರಕ್ಷಿತ್​ ಶೆಟ್ಟಿ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ ಈ ಚಿತ್ರವೀಗ ಬಿಡುಗಡೆಗೆ ಸಜ್ಜಾಗಿದೆ. ಜುಲೈ 21ರಂದು ಗ್ರ್ಯಾಂಡ್​ ಆಗಿ ಸಿನಿಮಾ ರಿಲೀಸ್​ ಆಗಲಿದೆ. ಅಂದಹಾಗೆ, ಈ ಸಿನಿಮಾದಲ್ಲಿ ಹಾಸ್ಟೆಲ್​ ಹುಡುಗರು ಮಾಡಿರುವ ಹಾವಳಿ ಕಮ್ಮಿ ಏನಲ್ಲ. ಹತ್ತು ಹಲವು ಕೀಟಲೆ ಮಾಡಿದ್ದಾರೆ. ಅದೆಲ್ಲವೂ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare Trailer) ಟ್ರೇಲರ್​ನಲ್ಲಿ ಕಾಣಿಸಿದೆ.

ನಿತಿನ್​ ಕೃಷ್ಣಮೂರ್ತಿ ನಿರ್ದೇಶನ ಮಾಡಿರುವ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಮಸ್ತ್​ ಎಂಟರ್​ಟೇನ್ಮೆಂಟ್​ ಇರಲಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಹೊಸ ಹುಡುಗರು ಮಾತ್ರವಲ್ಲದೇ ‘ಮೋಹಕ ತಾರೆ’ ರಮ್ಯಾ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರನ್ನು ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.

(‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಟ್ರೇಲರ್​)

ಇನ್ನು, ಅತಿಥಿ ಪಾತ್ರದಲ್ಲಿ ರಿಷಬ್​ ಶೆಟ್ಟಿ, ಪವನ್​ ಕುಮಾರ್​, ದಿಗಂತ್​ ಮಂಚಾಲೆ ಕೂಡ ಇದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಮಸ್ತ್​ ಮನರಂಜನೆ ಗ್ಯಾರಂಟಿ.

ಇದನ್ನೂ ಓದಿ: ಕೊನೆಗೂ ಬಿಡುಗಡೆ ದಿನಾಂಕ ಘೋಷಿಸಿದ ಹಾಸ್ಟೆಲ್ ಹುಡುಗರು: ಏಳು ವರ್ಷದ ಬಳಿಕ ರಮ್ಯಾ ಮರು ಎಂಟ್ರಿ

ಅಜನೀಶ್​ ಬಿ. ಲೋಕನಾಥ್​ ಅವರು ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಅರವಿಂದ್​ ಎಸ್​. ಕಶ್ಯಪ್​ ಅವರು ಛಾಯಾಗ್ರಹಣ ಮಾಡಿದ್ದಾರೆ. ಒಂದು ಹಾಸ್ಟೆಲ್​​ನಲ್ಲಿ ಏನೆಲ್ಲ ಕಿತಾಪತಿಗಳು ನಡೆಯಬಹುದು ಎಂಬುದನ್ನೇ ಇಟ್ಟುಕೊಂಡು ಈ ಸಿನಿಮಾ ಸಿದ್ಧವಾಗಿದೆ. ಕಾಮಿಡಿಗೆ ಈ ಚಿತ್ರದಲ್ಲಿ ಕೊರತೆ ಇಲ್ಲ ಎಂಬುದು ನೋಡಿ ಟ್ರೇಲರ್​ ನೋಡಿದ ಬಳಿಕ ಕನ್ಫರ್ಮ್​ ಆಗಿದೆ. ಈವರೆಗೂ ಬಿಡುಗಡೆಯಾದ ಪ್ರೋಮೋಗಳೇ ಆಕರ್ಷಕವಾಗಿದ್ದವು. ಇನ್ನು, ಪೂರ್ತಿ ಸಿನಿಮಾ ಹೇಗಿರಬಹುದು ಅಂತ ಪ್ರೇಕ್ಷಕರಿಗೆ ಕೌತುಕ ಮೂಡಿದೆ.

ಇದನ್ನೂ ಓದಿ: Rakshit Shetty: ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಬೆಂಬಲ; ‘ಪರಂವಃ’ ಮೂಲಕ ರಿಲೀಸ್

‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾವನ್ನು ರಕ್ಷಿತ್​ ಶೆಟ್ಟಿ ಅವರು ‘ಪರಂವಾ ಪಿಕ್ಚರ್ಸ್​’ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ. ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಬೆಂಬಲ ಈ ಸಿನಿಮಾಗೆ ಸಿಕ್ಕಿದೆ. ಬಿಡುಗಡೆಗೂ ಮುನ್ನವೇ ಈ ಚಿತ್ರ ಸದ್ದು ಮಾಡುತ್ತಿದೆ. ಸದ್ಯ ರಿಲೀಸ್​ ಆಗಿರುವ ಟ್ರೇಲರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More