AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್​ ಅವರಿಂದ ಮೋಸ ಆಗಿದೆ, ಮನೆ ಮಾರಿ ಬಾಡಿಗೆ ಮನೆಯಲ್ಲಿದೀನಿ; ಕಿಚ್ಚನ ವಿರುದ್ಧ‘ಹುಚ್ಚ’ ನಿರ್ಮಾಪಕನ ಆರೋಪ

Kichcha Sudeep: 2001ರಲ್ಲಿ ‘ಹುಚ್ಚ’ ಸಿನಿಮಾ ರಿಲೀಸ್ ಆಯಿತು. ಇತ್ತೀಚೆಗೆ ಈ ಚಿತ್ರ ತೆರೆಗೆ ಬಂದು 22 ವರ್ಷ ಕಳೆದಿದೆ. ಇದರ ಸಂಭ್ರಮಾಚರಣೆ ಕೂಡ ಮಾಡಲಾಗಿತ್ತು. ಈಗ ಸುದೀಪ್ ವಿರುದ್ಧ ರೆಹಮಾನ್ ಅವರು ಕೆಲವು ಆರೋಪ ಮಾಡಿದ್ದಾರೆ.

ಸುದೀಪ್​ ಅವರಿಂದ ಮೋಸ ಆಗಿದೆ, ಮನೆ ಮಾರಿ ಬಾಡಿಗೆ ಮನೆಯಲ್ಲಿದೀನಿ; ಕಿಚ್ಚನ ವಿರುದ್ಧ‘ಹುಚ್ಚ’ ನಿರ್ಮಾಪಕನ ಆರೋಪ
ಸುದೀಪ್-ರೆಹಮಾನ್
Mangala RR
| Edited By: |

Updated on:Jul 10, 2023 | 2:24 PM

Share

ಸುದೀಪ್ (sudeep) ಹಾಗೂ ಎಂ.ಎನ್​. ಕುಮಾರ್ ಮಧ್ಯೆ ಸಂಘರ್ಷ ಏರ್ಪಟ್ಟಿದೆ. ಅಡ್ವಾನ್ಸ್ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ವಿವಾದ ಈಗ ಕೋರ್ಟ್ ಮೆಟ್ಟಿಲೇರಿದೆ. ಹೀಗಿರುವಾಗಲೇ ‘ಹುಚ್ಚ’ ಸಿನಿಮಾ (Huchacha Movie) ನಿರ್ಮಾಪಕ ರೆಹಮಾನ್ ಕೂಡ ಸುದೀಪ್ ವಿರುದ್ಧ ಗಂಭೀರ ಆರೋಪ ಒಂದನ್ನು ಮಾಡಿದ್ದಾರೆ. ಅವರು ಇಂದು (ಜುಲೈ 10) ಸುದ್ದಿಗೋಷ್ಠಿ ಕರೆದು ಸುದೀಪ್ ವಿರುದ್ಧ ಕೆಲ ಹೇಳಿಕೆ ನೀಡಿದ್ದಾರೆ. ‘ಇದನ್ನು ನಾನು ಆರೋಪ ಎನ್ನುವುದಿಲ್ಲ, ಸುದೀಪ್ ಬಳಿ ಇದು ನನ್ನ ಮನವಿ’ ಎಂದು ಹೇಳಿದ್ದಾರೆ.

2001ರಲ್ಲಿ ‘ಹುಚ್ಚ’ ಸಿನಿಮಾ ರಿಲೀಸ್ ಆಯಿತು. ಇತ್ತೀಚೆಗೆ ಈ ಚಿತ್ರ ತೆರೆಗೆ ಬಂದು 22 ವರ್ಷ ಕಳೆದಿದೆ. ಇದರ ಸಂಭ್ರಮಾಚರಣೆ ಕೂಡ ಮಾಡಲಾಗಿತ್ತು. ಈಗ ಸುದೀಪ್ ವಿರುದ್ಧ ರೆಹಮಾನ್ ಅವರು ಕೆಲವು ಹೇಳಿಕೆ ನೀಡಿದ್ದಾರೆ. ‘ನಾನು ಇಲ್ಲಿಯವರೆಗೆ 20 ಸಿನಿಮಾ ಮಾಡಿದ್ದೇನೆ. ‘ಯಜಮಾನ’ ಮತ್ತು ‘ಹುಚ್ಚ’ದಂತಹ ಸಿನಿಮಾ ನಿರ್ಮಾಣ ಮಾಡಿದ್ದೇನೆ. ನ್ಯಾಯ ಕೇಳೋಕೆ ಸುದ್ದಿಗೋಷ್ಠಿ ಕರೆದಿದ್ದೇನೆ’ ಎಂದು ಅವರು ಮಾತು ಆರಂಭಿಸಿದರು.

‘ಸುದೀಪ್ ಮೇಲೆ ನಾನು ದೂರು ಹೇಳುತ್ತಿಲ್ಲ, ನ್ಯಾಯ ಕೇಳುತ್ತಿದ್ದೇನೆ. ಅವರು ಈಗ ದೊಡ್ಡ ಹೀರೋ. ಅವರ ಮೇಲೆ ಆಪಾದನೆ ಮಾಡೋದು ಅಷ್ಟು ಉತ್ತಮ ಅಲ್ಲ. ‘ಯಜಮಾನ’ ಸಿನಿಮಾ ಆದ್ಮೇಲೆ ಉಪೇಂದ್ರ ಬಳಿ ಹೋಗಿ ‘ಹುಚ್ಚ’ ಸಿನಿಮಾ ಬಗ್ಗೆ ಹೇಳಿದೆ. ಟೈಟಲ್ ಕೇಳಿ ಅವರು ಬೇಡ ಎಂದರು. ನಂತರ ಸುದೀಪ್ ಜೊತೆ ‘ಹುಚ್ಚ’ ಸಿನಿಮಾ ಮಾಡಿದೆ. ‘ಯಜಮಾನ’ದಂತಹ ಸಿನಿಮಾ ಮಾಡಿ ಈಗ ‘ಹುಚ್ಚ’ ಸಿನಿಮಾ ಮಾಡ್ತಿಯಾ ಎಂದು ಗಾಂಧಿನಗರದಲ್ಲಿ ನನಗೆ ಬೈದರು’ ಎಂದು ಹಳೆಯ ಘಟನೆ ಬಗ್ಗೆ ಮಾತನಾಡಿದ್ದಾರೆ ರೆಹಮಾನ್.

‘ಹುಚ್ಚ ಸಿನಿಮಾದ ಶಿವಮೊಗ್ಗ ಏರಿಯಾದ ವಿತರಣೆ ಸುದೀಪ್ ಅವರಿಗೆ ನಾಲ್ಕೂವರೆ ಲಕ್ಷ ರೂಪಾಯಿಗೆ ಕೊಟ್ಟೆ. ಸಿನಿಮಾ‌ ರಿಲೀಸ್ ‌ಆಗಿ 100 ದಿನ ಆಯ್ತು ಎಂದು ಸುದೀಪ್​ ಅವರನ್ನು ಕರೆದು ಲಾಡು ಹಂಚಿದ್ದೆವು. ಅಣ್ಣಾವ್ರು ಕೂಡ ‘ಹುಚ್ಚ’ ಸಿನಿಮಾ ನೋಡಿ ಖುಷಿಪಟ್ಟರು. ಬಳಿಕ ಸುದೀಪ್ ಬೆಳೆದರು. ಒಂದು ದಿನ ಸುದೀಪ್ ಅವರು ‘ಸ್ವರ್ಗ್’ ಸಿನಿಮಾನ ರಿಮೇಕ್ ಮಾಡೋಣ, ವಿಷ್ಣು ಅವರನ್ನು ಅತಿಥಿಪಾತ್ರದಲ್ಲಿ ಕರೆತರೋಣ ಎಂದರು. ಅವರು ಹೇಳಿದರು ಅಂತ ನಾನು ‘ಸ್ವರ್ಗ್​’ ಚಿತ್ರದ ರಿಮೇಕ್​ನ ಹತ್ತು ಲಕ್ಷ ರೂಪಾಯಿ ಕೊಟ್ಟ ತೆಗೆದುಕೊಂಡು ಬಂದೆ. ಈ ಸಿನಿಮಾ ಮಾಡೋಕೆ ವಿಷ್ಣುವರ್ಧನ್ ಅವರು ಹಿಂದೆಮುಂದೆ ನೋಡಿದರು. ನಾವು ಆ ಸಿನಿಮಾ ಕೈಬಿಟ್ಟೆವು. ‘ಅಂದಾಜ್ ಅಪ್ನಾ ಅಪ್ನಾ’ ಮಾಡೋಣ ಅಂದ್ರು. ಅದರ ಹಕ್ಕನ್ನು ತಂದೆ. ಅದು ಕೂಡ ಅರ್ಧಕ್ಕೆ ನಿಂತೋಯ್ತು’ ಎಂದರು ರೆಹಮಾನ್.

‘ನಿರ್ಮಾಪಕರ ಸಂಘಕ್ಕೆ ಎಂಟು ವರ್ಷದ ಹಿಂದೆ ದೂರು ನೀಡಿದ್ದೆ. ಆದರೆ, ಆ ಕೇಸ್ ಮುಚ್ಚೋಯ್ತು. ಸುದೀಪ್​ಗೆ ನಾಲ್ಕುವರೆ ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದೆ. ಇದರ ಜೊತೆಗೆ ರಿಮೇಕ್ ರೈಟ್ಸ್ ದುಡ್ಡು 35 ಲಕ್ಷ ರೂಪಾಯಿ ವಾಪಸ್ ಕೊಡಬೇಕು ಎಂದು ದೂರಿನಲ್ಲಿ ತಿಳಿಸಿದ್ದೆ. ನನ್ನ ಹಣ ಹಿಂಪಡೆಯಲು ನಾನು ಸುದೀಪ್ ಮನೆ ಹತ್ರ ಹೋಗೋಕೆ ಶುರು ಮಾಡಿದೆ. ಸುಮಾರು ನೂರೈವತ್ತು ಸಾರಿ ಹೋಗಿದ್ದೀನಿ. ಯಾವಾಗ ಹೋದ್ರೂ ಅವ್ರು ಇಲ್ಲ ಅಂಥ ಹೇಳಿ ಕಳುಹಿಸುತ್ತಿದ್ದರು. ಒಂದು ದಿನ ಒಳಗೆ ಹೋದರೂ ಆವಾಗಲೂ ಇಲ್ಲ ಅಂದ್ರು. ಬರ್ತಡೇ ದಿನ‌ ಸಿಗಬಹುದು ಎಂದು ನಾನು ಹೋದೆ. ನಾನು ಒಳಗೆ ಹೋದರೆ ಮೇಲಗಡೆ ಎಲ್ಲಾ ನಿರ್ಮಾಪಕರು ಕೂತಿದ್ದರು. ನನ್ನನ್ನು ಫ್ಯಾನ್ಸ್ ಕೂರಿಸೋ ಜಾಗದಲ್ಲಿ ಕೊನೆಯಲ್ಲಿ ಕೂರಿಸಿದ್ರು’ ಎಂದು ಬೇಸರ ತೋಡಿಕೊಂಡಿದ್ದಾರೆ ರೆಹಮಾನ್.

ಇದನ್ನೂ ಓದಿ: Kichcha Sudeep: ಸುದೀಪ್​ ವರ್ಸಸ್​ ಎಂ.ಎನ್​. ಕುಮಾರ್​ ವಿವಾದ ಹುಟ್ಟಿಕೊಂಡಿದ್ದು ಹೇಗೆ? ಪೂರ್ತಿ ಮಾಹಿತಿ ಇಲ್ಲಿದೆ..

‘ಜಾಕ್ ಮಂಜು ನನ್ನ ಬಳಿ ಬಂದು ನಿಮಗೆ ಹಣ ಕೊಡೋಕೆ ಹೇಳಿದ್ದಾರೆ ಎಂದರು. 1,350 ಕಾಲ್ ಮಾಡಿದ್ದೀನಿ. ಕಾಲ್ ಕಟ್ ಮಾಡುತ್ತಿದ್ದರು. ನೂರಾರು ಸುಳ್ಳು ಹೇಳ್ತಿದ್ರು. ಹಣ ಮಾತ್ರ ಕೊಡಲಿಲ್ಲ. ಒಂದು ದಿನ ಜಾಕ್ ಮಂಜು ಕಾಲ್ ಮಾಡಿ ‘ವಿಕ್ರಾಂತ್ ರೋಣ ನಾನು ಸಿನಿಮಾ ಮಾಡಿ ಮುಳುಗಿಹೋದೆ’ ಎಂದರು. ಇತ್ತೀಚೆಗೆ ನನ್ನ ಹಳೆಯ ಗೆಳೆಯ ಎಂಎನ್​ ಕುಮಾರ್ ಸುದ್ದಿಗೋಷ್ಠಿ ಕರೆದಿದ್ದು ನೋಡಿದೆ. ನ್ಯಾಯ ಸಿಗಬಹುದು ಎಂದು ನಾನು ಕೂಡ ಮುಂದೆ ಬಂದೆ ಎಂದಿದ್ದಾರೆ. 10 ರೂಪಾಯಿ ಹೆಚ್ಚುವರಿಯಾಗಿ ಕೊಡೋದು ಬೇಡ. ರಿಮೇಕ್​ ಹಕ್ಕನ್ನು ತಂದಿದ್ದಕ್ಕೆ ಸಾಲ ಆಗಿದೆ. ಅದನ್ನು ಕೊಡಿ. ಸದ್ಯ ಮನೆ ಮಾರಿ ಬಾಡಿಗೆ ’ ಎಂದಿದ್ದಾರೆ ರೆಹಮಾನ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:03 pm, Mon, 10 July 23