Darshan: ಹಲ್ಲೆ ಮಾಡಿಲ್ಲ ಎಂದಿದ್ದ ದರ್ಶನ್ ನಿಜ ಒಪ್ಪಿಕೊಂಡಿದ್ದು ಹೇಗೆ? ಇಲ್ಲಿದೆ ಆ ಐವತ್ತು ನಿಮಿಷಗಳ ಸೀಕ್ರೆಟ್

ಬೆಂಗಳೂರಿನ ಪಟ್ಟಣಗೆರೆ ಶೆಡ್​ಗೆ ಸಂಜೆ 4.30ರ ಸುಮಾರಿಗೆ ದರ್ಶನ್ ಆಗಮಿಸಿದ್ದಾರೆ. ಆ  ಬಳಿಕ ಅವರು ಮರಳಿ ತೆರಳಿದ್ದು ಸಂಜೆ 5.20ಕ್ಕೆ. ರೇಣುಕಾಸ್ವಾಮಿ ಮೇಲೆ ದರ್ಶನ್ ನಿರಂತರವಾಗಿ 30 ನಿಮಿಷಗಳ ಕಾಲ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಸಿನಿಮಾ ಮಾದರಿಯಲ್ಲೇ ನಟ ದರ್ಶನ್ ಕ್ರೌರ್ಯ ಇತ್ತು ಎಂದು ವರದಿ ಆಗಿದೆ.

Darshan: ಹಲ್ಲೆ ಮಾಡಿಲ್ಲ ಎಂದಿದ್ದ ದರ್ಶನ್ ನಿಜ ಒಪ್ಪಿಕೊಂಡಿದ್ದು ಹೇಗೆ? ಇಲ್ಲಿದೆ ಆ ಐವತ್ತು ನಿಮಿಷಗಳ ಸೀಕ್ರೆಟ್
ದರ್ಶನ್
Updated By: ರಾಜೇಶ್ ದುಗ್ಗುಮನೆ

Updated on: Jun 28, 2024 | 12:18 PM

ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಆರಂಭದಲ್ಲಿ ತಮಗೂ ಈ ಕೇಸ್​ಗೂ ಸಂಬಂಧ ಇಲ್ಲ ಎನ್ನುತ್ತಲೇ ಬರುತ್ತಿದ್ದರು. ‘ರೇಣುಕಾಸ್ವಾಮಿಗೆ ಎರಡೇಟು ಹೊಡೆದು ಟ್ಯಾಬ್ಲೆಟ್ ಹಾಗೂ ಊಟ ಕೊಡಿ ಎಂದು ಹೇಳಿ ನಾನು ಬಂದೆ’ ಎಂದು ದರ್ಶನ್​ ಹೇಳಿದ್ದರು. ಆದರೆ, ಪೊಲೀಸರು ಎದುರು ಇಟ್ಟ ಸಾಕ್ಷಿಗಳಿಂದ ದರ್ಶನ್ ಕಂಗಾಲಾಗಿದ್ದಾರೆ. ಕೊನೆಗೆ ಅವರು ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿ ಆಗಿದೆ. 50 ನಿಮಿಷ ಶೆಡ್​ನಲ್ಲಿ ಏನಾಯ್ತು ಎನ್ನುವ ಮಾಹಿತಿ ಸಿಕ್ಕಿದೆ.

ಪಟ್ಟಣಗೆರೆ ಶೆಡ್​ಗೆ ಸಂಜೆ 4.30ರ ಸುಮಾರಿಗೆ ವಿನಯ್ ಜೊತೆಗೆ ದರ್ಶನ್ ಎಂಟ್ರಿ ಕೊಟ್ಟಿದ್ದಾರೆ. ಆ  ಬಳಿಕ ಅವರು ತೆರಳಿದ್ದು ಸಂಜೆ 5.20ಕ್ಕೆ. ರೇಣುಕಾಸ್ವಾಮಿ ಮೇಲೆ ದರ್ಶನ್ ನಿರಂತರವಾಗಿ 30 ನಿಮಿಷಗಳ ಕಾಲ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಸಿನಿಮಾ ಮಾದರಿಯಲ್ಲೇ ನಟ ದರ್ಶನ್ ಕ್ರೌರ್ಯ ಇತ್ತು ಎಂದು ವರದಿ ಆಗಿದೆ.
ನಿಂತಿದ್ದ ವಾಹನಗಳ ಮೇಲೆ ರೇಣುಕಾಸ್ವಾಮಿ ಅವರನ್ನು ದರ್ಶನ್ ಎತ್ತಿ ಬೀಸಾಡಿದ್ದರು. ದರ್ಶನ್ ಆರ್ಭಟಕ್ಕೆ ಅಲ್ಲಿದ್ದ ವಾಹನಗಳೇ ಶೇಕ್ ಆಗಿದ್ದವು. ಬೂಟು ಕಾಲಿನಲ್ಲಿ ರೇಣುಕಾಸ್ವಾಮಿಗೆ ಒದ್ದು ಹಲ್ಲೆ ಮಾಡಿದ್ದರು. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳುಹಿಸಿದ್ದ ಮೆಸೆಜ್​ನ ಗ್ಯಾಂಗ್ ಓಪನ್ ಮಾಡಿಕೊಂಡಿತ್ತು. ಆ ಮೆಸೇಜ್​ಗಳನ್ನು ಓದಲು ಪವನ್​ಗೆ ದರ್ಶನ್ ಹೇಳಿದ್ದರು. ಮೆಸೆಜ್ ಓದುತ್ತಿದ್ದ ಟೋನ್​ನಲ್ಲಿಯೇ ದರ್ಶನ್ ಹಲ್ಲೆ ಮಾಡುತ್ತಿದ್ದರು.

ಮೊದ ಮೊದಲು ಎರಡೇಟು ಹೊಡೆದು ಹಣ ಕೊಟ್ಟು ಹೊರಟೆ ಎಂದು ದರ್ಶನ್ ಹೇಳಿದ್ದರು. ಆದರೆ, ದರ್ಶನ್ ಐವತ್ತು ನಿಮಿಷ ಶೆಡ್​ನಲ್ಲಿದ್ದ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದರು. ಕೊನೆಗೆ ಸಾಕ್ಷಿ ಮುಂದೆ ಇಟ್ಟು ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಹಲ್ಲೆ ಮಾಡಿರೋದಾಗಿ ಅವರು ಸತ್ಯ ಒಪ್ಪಿಕೊಂಡರು ಎನ್ನಲಾಗಿದೆ.

ಇದನ್ನೂ ಓದಿ: ಸೋನು ಗೌಡಗೆ ದರ್ಶನ್ ಅಭಿಮಾನಿಗಳಿಂದ ಕಿರುಕುಳ, ಅಳಲು ತೋಡಿಕೊಂಡ ನಟಿ

ಫೆಬ್ರವರಿ ತಿಂಗಳಿಂದ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮೆಸೆಜ್ ಮಾಡಲು ಶುರು ಮಾಡಿದ್ದರು. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಬರೋಬ್ಬರಿ 200 ಮೆಸೆಜ್ ಕಳುಹಿಸಿದ್ದರು. ಎಲ್ಲವೂ ಅಶ್ಲೀಲ್ ಮೆಸೆಜ್​ಗಳೇಆಗಿತ್ತು. ಈತನ ಕಾಟ ಅತಿಯಾದಾಗ ಪವನ್​ಗೆ ಪವಿತ್ರಾ ಗೌಡ ವಿಚಾರ ತಿಳಿಸಿದ್ದರು. ಆತ‌ನ ಕೊಲೆ ಆಗುತ್ತೆ ಅಂದುಕೊಂಡಿರ್ಲಿಲ್ಲ ಎಂದು ಪವಿತ್ರಾ ಗೌಡ ಹೇಳಿಕೆ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:17 pm, Fri, 28 June 24