‘ಕೊವಿಡ್​ಗೆ ಹೆದರಲಿಲ್ಲ, ಕಿತ್ತೋಗಿರೋ ಪೈರಸಿಗೆ ಏಕೆ ಹೆದರಲಿ?’ ಸುದೀಪ್​

| Updated By: ರಾಜೇಶ್ ದುಗ್ಗುಮನೆ

Updated on: Oct 11, 2021 | 3:50 PM

‘ಕೋಟಿಗೊಬ್ಬ 3’ ಸಿನಿಮಾ ಅಕ್ಟೋಬರ್ 14ರಂದು ತೆರೆಗೆ ಬರುತ್ತಿದೆ.        ಅದಕ್ಕೂ ಮೊದಲು ಕಿಚ್ಚ ಸುದೀಪ್​ ಸುದ್ದಿಗೋಷ್ಠಿ ಕರೆದಿದ್ದಾರೆ. ಈ ವೇಳೆ ಪೈರಸಿ ಬಗ್ಗೆ ಪ್ರಶ್ನೆ ಎದುರಾಯಿತು. ಆ ಪ್ರಶ್ನೆಗೆ ಸುದೀಪ್​ ಉತ್ತರಿಸಿದ್ದಾರೆ.

‘ಕೊವಿಡ್​ಗೆ ಹೆದರಲಿಲ್ಲ, ಕಿತ್ತೋಗಿರೋ ಪೈರಸಿಗೆ ಏಕೆ ಹೆದರಲಿ?’ ಸುದೀಪ್​
ಸುದೀಪ್​
Follow us on

ಕರ್ನಾಟಕದ ಚಿತ್ರಮಂದಿರದಲ್ಲಿ ಶೇ.100 ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಸ್ಟಾರ್​ ಸಿನಿಮಾಗಳು ರಿಲೀಸ್​ ಡೇಟ್​ ಘೋಷಣೆ ಮಾಡಿವೆ. ಇದರ ಜತೆಗೆ ಸಿನಿಮಾ ತಂಡಕ್ಕೆ ಪೈರಸಿಯ ಕಾಟದ ಭಯ ಕಾಡುತ್ತಿದೆ. ಸಿನಿಮಾಗಳು ರಿಲೀಸ್​ ಆದ ಕೂಡಲೇ ಥಿಯೇಟರ್​ ಪ್ರಿಂಟ್​ಅನ್ನು ಆನ್​ಲೈನ್​ನಲ್ಲಿ ಬಿಡೋಕೆ ಕೆಲ ಕಿಡಿಗೇಡಿಗಳು ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ವಿಚಾರದ ಬಗ್ಗೆ ಸುದೀಪ್​ ಮಾತನಾಡಿದ್ದಾರೆ.

‘ಕೋಟಿಗೊಬ್ಬ 3’ ಸಿನಿಮಾ ಅಕ್ಟೋಬರ್ 14ರಂದು ತೆರೆಗೆ ಬರುತ್ತಿದೆ. ಅದಕ್ಕೂ ಮೊದಲು ಕಿಚ್ಚ ಸುದೀಪ್​ ಸುದ್ದಿಗೋಷ್ಠಿ ಕರೆದಿದ್ದಾರೆ. ಈ ವೇಳೆ ಪೈರಸಿ ಬಗ್ಗೆ ಪ್ರಶ್ನೆ ಎದುರಾಯಿತು. ಆ ಪ್ರಶ್ನೆಗೆ ಸುದೀಪ್​ ಉತ್ತರಿಸಿದ್ದಾರೆ. ‘ಅವರ ಬಗ್ಗೆ ಏನು ಮಾತಾಡೋಣ? ಕೋವಿಡ್​ಗೆ ಭಯ ಬೀಳದೇ ಬದುಕಿ ಬಂದಿದ್ದೇನೆ. ಇದ್ಯಾವುದು ಕಿತ್ತೋಗಿರೋ ಪೈರಸಿಗೆ ಏಕೆ ಭಯ ಬೀಳಲಿ? ಪೈರಸಿ ಮಾಡಲಿ ಬಿಡಿ. ಅದಕ್ಕೆಲ್ಲ ನಾನು ಹೆದರಲ್ಲ. ಮನೆಯವರೇ ಕಳ್ಳರನ್ನು ಒಳಗೆ ಬಿಟ್ಟಾಗ ನಾವು ಕಳ್ಳರಿಗೆ ಬಯ್ಯೋದು ತಪ್ಪಾಗುತ್ತದೆ’ ಎಂದು ಮಾರ್ಮಿಕವಾಗಿ ಮಾತನಾಡಿದರು ಅವರು.

‘ಪೈರಸಿ ವಿರುದ್ಧ ನನ್ನ ಫ್ಯಾನ್ಸ್​ ಹೋರಾಟ ಮಾಡಿದರು. ನಾನು ಹೆಮ್ಮೆಯಿಂದ ಕೂರುತ್ತೇನೆ ಎಂದರೆ ಅದಕ್ಕೆ ಫ್ಯಾನ್ಸ್​ ಕಾರಣ. ಮೊದಲೆಲ್ಲ ಕ್ಯಾಮೆರಾ ಪ್ರಿಂಟ್​ ಬರುತ್ತಿತ್ತು. ಆದರೆ, ಮಾರ್ನಿಂಗ್ ಶೋ ಆಗ್ತಾ ಇದ್ದಂತೆ ‘ಪೈಲ್ವಾನ್’ ಒಳ್ಳೆಯ ಪ್ರಿಂಟ್​ ಬಂತು. ಆಗ ನನ್ನ ಬೆಂಬಲಕ್ಕೆ ಬಂದಿದ್ದು ಫ್ಯಾನ್ಸ್​ ಮತ್ತು ಫ್ರೆಂಡ್ಸ್​. ನಾನು ನನ್ನ ಕೆಲಸ ಮಾಡಿಕೊಂಡು ಹೋದೆ. ಪೈರಸಿ ವಿಚಾರದಲ್ಲಿ ನಾನು ಈಗಾಗಲೇ ಅನುಭವಿಸಿದ್ದೇನೆ. ಮತ್ತೇಕೆ ಭಯ ಪಡಲಿ? ಚೋರ್​ ಬಜಾರ್​ನಲ್ಲಿ ಶಾಪಿಂಗ್​ ಮಾಡುವವರಿಗೆ ಮಾಲ್​ ಇಷ್ಟವಾಗುವುದಿಲ್ಲ. ಅವರು ಯಾವಾಗಲೂ ಚೋರ್​ ಬಜಾರ್​​ನಲ್ಲೇ ಖರೀದಿಸುತ್ತಾರೆ. ಹಾಗೆಯೇ ಚಿತ್ರಮಂದಿರದಲ್ಲಿ ಸಿನಿಮಾ ನೋಡುವವರು ಅಲ್ಲಿಯೇ ನೋಡುತ್ತಾರೆ’ ಎಂದರು ಸುದೀಪ್​.

ಇದನ್ನೂ ಓದಿ: Kotigobba 3 Pressmeet: ‘ಕೋಟಿಗೊಬ್ಬ 3’ ಸಿನಿಮಾ ಬಗ್ಗೆ ಸುದೀಪ್​ ಮಾತು