‘ದರ್ಶನ್​ ಬಳಿ ಕೇಳೋಕೆ ನನ್ನಲ್ಲಿ ಕೆಲವು ಪ್ರಶ್ನೆಗಳಿವೆ’; ಗೊಂದಲದ ಬಗ್ಗೆ ಧ್ರುವ ಸರ್ಜಾ ಮಾತು 

ಇಂದು (ಅಕ್ಟೋಬರ್ 6) ಧ್ರುವ ಸರ್ಜಾ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರು ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ದರ್ಶನ್ ವಿಚಾರವಾಗಿ ಮಾತನಾಡಿದ್ದಾರೆ. ದರ್ಶನ್ ಬಗ್ಗೆ ಇರುವ ಗೌರವ ಎಂಥದ್ದು ಎಂಬುದನ್ನು ಅವರು ಹೇಳಿದ್ದಾರೆ.

ದರ್ಶನ್ ಹಾಗೂ ಧ್ರುವ ಸರ್ಜಾ (Dhruva Sarja) ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವ ಮಾತು ಸ್ಯಾಂಡಲ್​ವುಡ್​ ಅಂಗಳದಲ್ಲಿ ಜೋರಾಗಿದೆ. ಕಾವೇರಿ ಹೋರಾಟದ ಸಂದರ್ಭದಲ್ಲಿ ದರ್ಶನ್ (Darshan) ಹಾಗೂ ಧ್ರುವ ವೇದಿಕೆ ಹಂಚಿಕೊಂಡಿದ್ದರು.  ಆದರೆ, ಇಬ್ಬರೂ ಅಪ್ಪಿತಪ್ಪಿಯೂ ಮಾತನಾಡಿಲ್ಲ. ಈ ಬೆಳವಣಿಗೆ ಬೆನ್ನಲ್ಲೇ ದರ್ಶನ್ ಹಾಗೂ ಧ್ರುವ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಧ್ರುವ ಸರ್ಜಾ ಅವರು ಮಾತನಾಡಿದ್ದಾರೆ. ದರ್ಶನ್​ಗೆ ಒಂದಷ್ಟು ಪ್ರಶ್ನೆಗಳನ್ನು ಕೇಳುವುದಿದೆ ಎಂದಿದ್ದಾರೆ. ಈ ಮೂಲಕ ಮನಸ್ತಾಪದ ವಿಚಾರವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಇಂದು (ಅಕ್ಟೋಬರ್ 6) ಧ್ರುವ ಸರ್ಜಾ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರು ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ದರ್ಶನ್ ವಿಚಾರವಾಗಿ ಮಾತನಾಡಿದ್ದಾರೆ. ದರ್ಶನ್ ಬಗ್ಗೆ ಇರುವ ಗೌರವ ಎಂಥದ್ದು ಎಂಬುದನ್ನು ಅವರು ಹೇಳಿದ್ದಾರೆ.

‘ದರ್ಶನ್ ಅವರು ಹಿರಿಯ ನಟ, ನಮ್ಮ ಸೀನಿಯರ್ ಕೂಡ ಹೌದು. ದರ್ಶನ್ ಅವರ ಉಪಸ್ಥಿತಿ ಮತ್ತು ಅನುಪಸ್ಥಿತಿಗೆ ಅದೇ ಮರ್ಯಾದೆ ಇರುತ್ತದೆ. ಆದರೆ, ಅವರ ಬಳಿ ಕೇಳಲು ಕೆಲವು ಪ್ರಶ್ನೆಗಳು ಇವೆ. ಇದನ್ನು ಅವರ ಬಳಿಯೇ ಕೇಳಬೇಕಿದೆ. ನಾನು ಅವರೊಟ್ಟಿಗೆ ಈ ವಿಚಾರವಾಗಿ ಮಾತನಾಡುತ್ತೇನೆ. ನನಗೂ ಸ್ವಾಭಿಮಾನ ಇದೆ. ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಇಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನಲ್ಲಿರುವ ಕೆಲವು ಗೊಂದಲದ ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ನಾಟಕೀಯವಾಗಿ ಇರೋಕೆ ನನಗೆ ಬರುವುದಿಲ್ಲ. ಮನಸಲ್ಲೊಂದು ಹೊರಗೊಂದು ಇರೋಕೆ ಆಗಲ್ಲ’ ಎಂದಿದ್ದಾರೆ ಧ್ರುವ ಸರ್ಜಾ.

ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫೇಕ್​ ಅಕೌಂಟ್​ಗಳನ್ನು ಸೃಷ್ಟಿ ಮಾಡಿಕೊಂಡು ದರ್ಶನ್ ಹಾಗೂ ಧ್ರುವ ಸರ್ಜಾ ಮಧ್ಯೆ ದ್ವೇಷ ಬೆಳೆಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ‘ಈ ರೀತಿ ಮಾಡಬೇಡಿ’ ಎಂದು ಧ್ರುವ ಸರ್ಜಾ ಅವರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಧ್ರುವ ಸರ್ಜಾಗೆ ಬರ್ತ್​ಡೇ ಸಂಭ್ರಮ; ಹುಟ್ಟುಹಬ್ಬದ ದಿನ ಅಣ್ಣನ ಕೊನೆಯ ಸಿನಿಮಾ ನೋಡಲಿದ್ದಾರೆ ‘ಮಾರ್ಟಿನ್’

ಧ್ರುವ ಸರ್ಜಾ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಚಿರಂಜೀವಿ ಸರ್ಜಾ ನಟನೆಯ ‘ರಾಜಮಾರ್ತಾಂಡ’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಧ್ರುವ ಸರ್ಜಾ ಕೂಡ ಈ ಚಿತ್ರ ನೋಡೋಕೆ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:01 am, Fri, 6 October 23

ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More
Loading...
Unable to load recommendations.
Follow Us