ಧ್ರುವ ಸರ್ಜಾಗೆ ಬರ್ತ್​ಡೇ ಸಂಭ್ರಮ; ಹುಟ್ಟುಹಬ್ಬದ ದಿನ ಅಣ್ಣನ ಕೊನೆಯ ಸಿನಿಮಾ ನೋಡಲಿದ್ದಾರೆ ‘ಮಾರ್ಟಿನ್’

ಧ್ರುವ ಸರ್ಜಾ ಅವರಿಗೆ ಈ ವರ್ಷದ ಬರ್ತ್​ಡೇ ವಿಶೇಷ ಎನಿಸಿಕೊಳ್ಳಲು ಹಲವು ಕಾರಣಗಳು ಇವೆ. ಅಣ್ಣನ ಸಿನಿಮಾ ರಿಲೀಸ್ ಆಗುತ್ತಿರುವುದು ಒಂದು ಕಡೆಯದಾರೆ, ಈ ವರ್ಷ ಧ್ರುವ ಮತ್ತೊಮ್ಮೆ ತಂದೆ ಆಗಿದ್ದಾರೆ. ಈ ಎಲ್ಲಾ ಕಾರಣದಿಂದ ಧ್ರುವ ಸರ್ಜಾ ಸಂಭ್ರಮದಿಂದ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ.

ಧ್ರುವ ಸರ್ಜಾಗೆ ಬರ್ತ್​ಡೇ ಸಂಭ್ರಮ; ಹುಟ್ಟುಹಬ್ಬದ ದಿನ ಅಣ್ಣನ ಕೊನೆಯ ಸಿನಿಮಾ ನೋಡಲಿದ್ದಾರೆ ‘ಮಾರ್ಟಿನ್’
ಧ್ರುವ ಸರ್ಜಾ
Follow us
ರಾಜೇಶ್ ದುಗ್ಗುಮನೆ
|

Updated on: Oct 06, 2023 | 7:07 AM

ಬರ್ತ್​ಡೇ ದಿನ ಅವರ ನಟನೆಯ ಸಿನಿಮಾ ಅಥವಾ ಟ್ರೇಲರ್, ಪೋಸ್ಟರ್ ರಿಲೀಸ್ ಆಗೋದು ಸಾಮಾನ್ಯ. ಹಾಗಂತ ಧ್ರುವ ಸರ್ಜಾ (Dhruva Sarja) ಬರ್ತ್​ಡೇ ದಿನ ಅವರ ಸಿನಿಮಾ ರಿಲೀಸ್ ಆಗುತ್ತಿಲ್ಲ. ಆದಾಗ್ಯೂ ಅವರಿಗೆ ಈ ದಿನ ವಿಶೇಷ ಅಂತೂ ಹೌದು. ಕಾರಣ, ಅವರ ಅಣ್ಣ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಚಿತ್ರ ‘ರಾಜಮಾರ್ತಾಂಡ’ ಸಿನಿಮಾ ರಿಲೀಸ್ ಆಗಲಿದೆ. ಬರ್ತ್​ಡೇ ದಿನ ಈ ಚಿತ್ರವನ್ನು ಧ್ರುವ ಸರ್ಜಾ ವೀಕ್ಷಿಸಲಿದ್ದಾರೆ. ಕಾರಣಾಂತರಗಳಿಂದ ಸಿನಿಮಾದ ಕೆಲಸ ವಿಳಂಬ ಆಗಿತ್ತು.

ಧ್ರುವ ಸರ್ಜಾ ಅವರಿಗೆ ಈ ವರ್ಷದ ಬರ್ತ್​ಡೇ ವಿಶೇಷ ಎನಿಸಿಕೊಳ್ಳಲು ಹಲವು ಕಾರಣಗಳು ಇವೆ. ಅಣ್ಣನ ಸಿನಿಮಾ ರಿಲೀಸ್ ಆಗುತ್ತಿರುವುದು ಒಂದು ಕಡೆಯಾದರೆ, ಈ ವರ್ಷ ಧ್ರುವ ಮತ್ತೊಮ್ಮೆ ತಂದೆ ಆಗಿದ್ದಾರೆ. ಈ ಎಲ್ಲಾ ಕಾರಣದಿಂದ ಧ್ರುವ ಸರ್ಜಾ ಸಂಭ್ರಮದಿಂದ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಫ್ಯಾನ್ಸ್ ಕಡೆಯಿಂದ ಧ್ರುವ ಸರ್ಜಾಗೆ ವಿಶ್​​ ಬರುತ್ತಿವೆ.

ಧ್ರುವ ಸರ್ಜಾ ಅವರು ತರಾತುರಿಯಲ್ಲಿ ಸಿನಿಮಾ ಮಾಡುವವರಲ್ಲ. ಅವರು ಅಳೆದು ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಾರೆ. 2012ರಲ್ಲಿ ರಿಲೀಸ್ ಆದ ‘ಅದ್ದೂರಿ’ ಅವರ ಅಭಿನಯದ ಮೊದಲ ಸಿನಿಮಾ. ಈ ಚಿತ್ರ ಸೂಪರ್ ಹಿಟ್ ಆಯಿತು. ಆ ಬಳಿಕ ‘ಬಹದ್ದೂರ್’, ‘ಭರ್ಜರಿ’ ಮಾಡಿ ಫೇಮಸ್ ಆದರು. 2017ರ ಬಳಿಕ ಅವರು ಹೀರೋ ಆಗಿ ಮತ್ತೆ ದೊಡ್ಡ ಪರದೆಗೆ ಬಂದಿದ್ದು 2021ರಲ್ಲಿ. ಆ ವರ್ಷ ಅವರ ನಟನೆಯ ‘ಪೊಗರು’ ಚಿತ್ರ ರಿಲೀಸ್ ಆಯಿತು.

ಇದನ್ನೂ ಓದಿ: ‘ನಮ್ಮ ಅಣ್ಣನ ಸಿನಿಮಾ ನೋಡಿ ಅಂತ ಎಲ್ಲ ತಾಯಂದಿರಲ್ಲಿ ಮನವಿ ಮಾಡ್ತೀನಿ’: ಧ್ರುವ ಸರ್ಜಾ

ಸದ್ಯ ಧ್ರುವ ಸರ್ಜಾ ಅವರು ‘ಮಾರ್ಟಿನ್’ ಹಾಗೂ ‘ಕೆಡಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಕಡೆಯಿಂದ ಹೊಸ ಅಪ್​​ಡೇಟ್ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ‘ಮಾರ್ಟಿನ್’ ಸಿನಿಮಾ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಕಳೆದ ಸೆಪ್ಟೆಂಬರ್​ನಲ್ಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಈ ಸೆಪ್ಟೆಂಬರ್ ಕಳೆದರೂ ಸಿನಿಮಾದ ರಿಲೀಸ್ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಕನ್ನಡ, ಮಲಯಾಳಂ, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಚಿತ್ರ ಬಿಡುಗಡೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ