
‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ ಬಿಡುಗಡೆ ಆಗಿ ಎರಡು ವಾರಗಳಾಗಿದೆ. ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಯಶಸ್ವಿ ಓಟ ಮುಂದುವರೆಸಿದೆ. ಸಿನಿಮಾ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ಈಗಾಗಲೇ ಸುಮಾರು 650 ಕೋಟಿಗೂ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ದೋಚಿದೆ. ಈಗಲೂ ಸಹ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿನಿಮಾದ ಟಿಕೆಟ್ಗಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಅಂದಹಾಗೆ ನೆರೆಯ ತಮಿಳುನಾಡಿನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅರ್ಧ ಶತಕ ಪೂರ್ತಿ ಮಾಡಿದೆ. ಆದರೆ ‘ಕೆಜಿಎಫ್ 2’ ದಾಖಲೆ ಮುರಿಯಲು ಇನ್ನೂ ಸಾಕಷ್ಟು ದೂರ ಸಾಗಬೇಕಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ತಮಿಳುನಾಡಿನಲ್ಲಿ 50 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಹೀಗೆ ತಮಿಳುನಾಡಿನಲ್ಲಿ 50 ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚು ಹಣ ಗಳಿಸಿದ ಪರಭಾಷೆ ಸಿನಿಮಾಗಳ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದುಕೊಂಡಿದೆ ‘ಕಾಂತಾರ: ಚಾಪ್ಟರ್ 1’. ಆದರೆ ಈ 50 ಕೋಟಿ ಗಳಿಕೆಯನ್ನು ಕೇವಲ ಎರಡೇ ವಾರದಲ್ಲಿ ಮಾಡಿರುವುದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ದಾಖಲೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ತಮಿಳುನಾಡಿನಾದ್ಯಂತ 13 ದಿನಗಳಲ್ಲಿ 50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಪರಭಾಷೆ ಸಿನಿಮಾಗಳು ತಮಿಳುನಾಡಿನಲ್ಲಿ ಇಷ್ಟು ದೊಡ್ಡ ಕಲೆ ಹಾಕಿರುವುದು ಬಹಳ ಅಪರೂಪ. ತಮಿಳುನಾಡಿನಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿರುವ ಪರ ಭಾಷೆ ಸಿನಿಮಾ ಎಂದರೆ ಅದು ‘ಬಾಹುಬಲಿ 2’. ಈ ಸಿನಿಮಾ ತಮಿಳುನಾಡು ಒಂದರಲ್ಲೇ 146 ಕೋಟಿ ರೂಪಾಯಿ ಗಳಿಕೆ ಮಾಡಿದೆ ಅದೂ 2017 ರಲ್ಲಿ. ಇದು ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದೆ.
ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 2’ ಯಾವಾಗ? ಕೊನೆಗೂ ಉತ್ತರಿಸಿದ ರಿಷಬ್ ಶೆಟ್ಟಿ
ಈ ಪಟ್ಟಿಯ ಮೂರನೇ ಸ್ಥಾನದಲ್ಲಿ ರಾಜಮೌಳಿ ನಿರ್ದೇಶಿಸಿರುವ ‘ಆರ್ಆರ್ಆರ್’ ಸಿನಿಮಾ ಇದೆ. ನಾಲ್ಕನೇ ಸ್ಥಾನದಲ್ಲಿ ಒಂದು ವಿಶೇಷ ಸಿನಿಮಾ ಇದೆ. ನಾಲ್ಕನೇ ಸ್ಥಾನದಲ್ಲಿ ಭಾರತದ ಯಾವ ಸಿನಿಮಾ ಸಹ ಇಲ್ಲ ಬದಲಿಗೆ ಇರುವುದು 2022 ರಲ್ಲಿ ಬಿಡುಗಡೆ ಆದ ‘ಅವತಾರ್: ದಿ ವೇ ಆಫ್ ವಾಟರ್’ ಐದನೇ ಸ್ಥಾನದಲ್ಲಿ ‘ಪುಷ್ಪ 2’ ಸಿನಿಮಾ ಇದೆ. ಆರನೇ ಸ್ಥಾನದಲ್ಲಿ ಮಲಯಾಳಂನ ಸಣ್ಣ ಬಜೆಟ್ ಸಿನಿಮಾ ‘ಮಂಜ್ಞುಮೆಲ್ ಬಾಯ್ಸ್’ ಇದೆ. ಏಳನೇ ಸ್ಥಾನದಲ್ಲಿ ‘ಬಾಹುಬಲಿ 1’ ಇದೆ. ಎಂಟನೇ ಸ್ಥಾನದಲ್ಲಿದೆ ‘ಕಾಂತಾರ: ಚಾಪ್ಟರ್ 1’. ಆದರೆ ಈ ಪಟ್ಟಿಯಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇನ್ನೂ ಕೆಲ ಸ್ಥಾನ ಮೇಲೆ ಹೋಗುವುದು ಪಕ್ಕಾ.
ಅಂದಹಾಗೆ ಈ ಪಟ್ಟಿಯ ಎರಡನೇ ಸ್ಥಾನದಲ್ಲಿದೆ ಕನ್ನಡದ ಈ ವರೆಗಿನ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ‘ಕೆಜಿಎಫ್ 2’. ಯಶ್ ನಟನೆಯ ಈ ಸಿನಿಮಾ ತಮಿಳುನಾಡು ಒಂದರಲ್ಲೇ 105 ಕೋಟಿಗೂ ಹೆಚ್ಚಿನ ಗಳಿಕೆ ಮಾಡಿದೆ. ‘ಕೆಜಿಎಫ್ 2’ ಸಿನಿಮಾದ ದಾಖಲೆಯನ್ನು ಮುರಿಯಲು ‘ಕಾಂತಾರ: ಚಾಪ್ಟರ್ 1’ಗೆ ಕಷ್ಟ ಸಾಧ್ಯ. ಆದರೆ ದಾಖಲೆಯನ್ನು ಮುರಿಯುವುದು ಅಸಾಧ್ಯವೇನಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ