ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಟಿ ರಾಗಿಣಿ ವಿರುದ್ಧ ಅಪರಾಧ ಮತ್ತು ಒಳಸಂಚು ಅಡಿಯಲ್ಲಿ ಕೇಸ್ ದಾಖಲಾಗಿದೆ. ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ CCB ಎಸಿಪಿ ಗೌತಮ್ರಿಂದ FIR ದಾಖಲಾಗಿದೆ. NDPS ಕಾಯ್ದೆಯ 21, 21c, 27A, 27B, 29 ಸೆಕ್ಷನ್ಗಳು ಹಾಗೂ IPC ಸೆಕ್ಷನ್120b ಅಡಿಯಲ್ಲಿ ನಟಿ ರಾಗಿಣಿ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಗಿಣಿ ವಿರುದ್ಧ ಕಠಿಣ ಸೆಕ್ಷನ್ಗಳನ್ನ ದಾಖಲಿಸಿರುವ ಪೊಲೀಸರು ಅವುಗಳ ವಿವಿರ ಹೀಗಿದೆ.
1. NDPS ಸೆಕ್ಷನ್ 21: ತಯಾರಿಸಿದ ಡ್ರಗ್ಸ್ ಹೊಂದುವುದು, ಮಾರಾಟ, ಖರೀದಿ, ಸಾಗಾಣೆ ಮಾಡಿದರೆ ಅಪರಾಧ
2. NDPS ಸೆಕ್ಷನ್ 21 C: ಇಂತಹ ಅಕ್ರಮ ಡ್ರಗ್ಸ್ ವಾಣಿಜ್ಯ ಪ್ರಮಾಣದ್ದಾದರೆ 10 ರಿಂದ 20 ವರ್ಷಗಳವರೆಗೆ ಸೆರೆವಾಸ..
3. NDPS ಸೆಕ್ಷನ್ 27: ಅಕ್ರಮವಾಗಿ ಡ್ರಗ್ಸ್ ಸಾಗಣೆ, ಹಣಕಾಸು ತೊಡಗಿಸುವುದು, ಅಪರಾಧಿಗಳ ರಕ್ಷಣೆಯಲ್ಲಿ ತೊಡಗಿದರೆ 10 ರಿಂದ 20 ವರ್ಷಗಳವರೆಗೆ ಸೆರೆವಾಸ
4. NDPS ಸೆಕ್ಷನ್ 27 B: ಅಕ್ರಮ ಡ್ರಗ್ಸ್ ವ್ಯವಹಾರದಿಂದ ಬಂದ ಹಣದಿಂದ ಆಸ್ತಿ ಹೊಂದಿದರೆ 10 ವರ್ಷಗಳವರೆಗೆ ಜೈಲು
5. NDPS ಸೆಕ್ಷನ್ 29: ಅಪರಾಧಿಕ ಒಳಸಂಚು
6. IPC 120 b: ಒಳಸಂಚು
Published On - 12:02 pm, Sat, 5 September 20