ಇಷ್ಟು ದಿನ ಮಂಕಾಗಿದ್ದ ಬಾಕ್ಸ್ ಆಫೀಸ್ಗೆ ಹೊಸ ಕಳೆ ಬಂದಿದೆ. ಒಟಿಟಿ ಅಬ್ಬರದಿಂದ ಜನರು ಚಿತ್ರಮಂದಿರಕ್ಕೆ ತೆರಳುತ್ತಿಲ್ಲ ಎನ್ನುವ ಮಾತನ್ನು ಪ್ರೇಕ್ಷಕರು ಮತ್ತೊಮ್ಮೆ ಸುಳ್ಳು ಮಾಡಿದ್ದಾರೆ. ‘ಜೈಲರ್’ (Jailer Movie), ‘ಗದರ್ 2’ ಹಾಗೂ ‘ಒಹ್ ಮೈ ಗಾಡ್ 2’ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗಿ ಸದ್ದು ಮಾಡುತ್ತಿವೆ. ಇದರ ಜೊತೆ ಈ ಮೊದಲು ರಿಲೀಸ್ ಆದ ಕನ್ನಡದ ‘ಕೌಸಲ್ಯ ಸುಪ್ರಜಾ ರಾಮ’, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾಗಳನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಯಾವ ಚಿತ್ರದ ಕಲೆಕ್ಷನ್ ಎಷ್ಟು? ಇಲ್ಲಿದೆ ಮಾಹಿತಿ.
ಸನ್ನಿ ಡಿಯೋಲ್ ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ‘ಗದರ್ 2’ ಮೂಲಕ ಮರುಹುಟ್ಟು ಸಿಕ್ಕಂತೆ ಆಗಿದೆ. ಬಾಲಿವುಡ್ನಲ್ಲಿ ಅವರ ನಟನೆಯ ಈ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಮೂರೇ ದಿನಕ್ಕೆ ಈ ಚಿತ್ರದ ಕಲೆಕ್ಷನ್ 133 ಕೋಟಿ ರೂಪಾಯಿ ಆಗಿದೆ. ಶುಕ್ರವಾರ 40 ಕೋಟಿ ರೂಪಾಯಿ, ಶನಿವಾರ 43 ಕೋಟಿ ರೂಪಾಯಿ ಹಾಗೂ ಭಾನುವಾರ ಈ ಚಿತ್ರ 50 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗಿದೆ. ಈ ಮೂಲಕ ದಾಖಲೆ ಪ್ರಮಾಣದ ಗಳಿಕೆ ಆಗಿದೆ.
ಅಕ್ಷಯ್ ಕುಮಾರ್ ನಟನೆಯ ‘ಒಎಂಜಿ 2’ ಚಿತ್ರ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಈ ಸಿನಿಮಾದ ಒಟ್ಟೂ ಗಳಿಕೆ 43 ಕೋಟಿ ರೂಪಾಯಿ ಆಗಿದೆ. ಅಕ್ಷಯ್ ಕುಮಾರ್ ಅವರಂಥ ಸ್ಟಾರ್ ಹೀರೋ ಚಿತ್ರಕ್ಕೆ ಈ ಗಳಿಕೆ ಚಿಕ್ಕದೇ. ಮುಂದಿನ ದಿನಗಳಲ್ಲಿ ಸಿನಿಮಾಗೆ ಚೇತರಿಕೆ ಕಾಣಲೇಬೇಕಾದ ಅನಿವಾರ್ಯತೆ ಇದೆ.
‘ಜೈಲರ್’ ಸಿನಿಮಾ ಮೂರು ದಿನಕ್ಕೆ 100 ಕೋಟಿ ರೂಪಾಯಿ ಬಾಚಿಕೊಂಡಿದೆ. ಎರಡು ದಿನಕ್ಕೆ ಚಿತ್ರದ ಗಳಿಕೆ 74 ಕೋಟಿ ರೂಪಾಯಿ ಆಗಿತ್ತು. ಭಾನುವಾರ ಸಿನಿಮಾಗೆ 34 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಸಿನಿಮಾಗೆ ಗೆಲುವು ಸಿಕ್ಕಿದೆ. ರಜನಿಕಾಂತ್, ಶಿವಣ್ಣ ಸೇರಿ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ‘ಜೈಲರ್’ ಸಿನಿಮಾದ ಎರಡನೇ ದಿನದ ಕಲೆಕ್ಷನ್ ಎಷ್ಟು? ಮೂರನೇ ದಿನಕ್ಕೆ ಶತಕ ಗ್ಯಾರಂಟಿ
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಶಶಾಂಕ್ ನಿರ್ದೇಶನ ಇದೆ. ಈ ಸಿನಿಮಾ ಮೂರನೇ ವೀಕೆಂಡ್ನಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೂ ಪ್ರೇಕ್ಷಕರು ಆಗಮಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ